ಹಾಲಿವುಡ್‌ ಖ್ಯಾತ ನಟಿ, ಗಾಯಕಿ ಸೆಲೆನಾ ಗೋಮೇಜ್‌ನ್ನು ಹೋಲುವ ಈ ಬಾಲೆಯ ಫೋಟೋಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ ಆಕೆ ಸೆಲೆನಾ ಗೋಮೇಜ್ ಅಲ್ಲದೇ ಹೋದರೂ ಆಕೆ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದ ಒಬ್ಬರ ಪುತ್ರಿ. ಆಕೆಯ ಬಗ್ಗೆ ಇಲ್ಲಿದೆ ಡಿಟೇಲ್

ಹಾಲಿವುಡ್ ನಟಿ ಸೆಲೆನಾ ಗೋಮೇಜ್ ಹೋಲುವ ಈ ಬ್ಯೂಟಿ ಯಾರು?

ಹಾಲಿವುಡ್‌ ಖ್ಯಾತ ನಟಿ ಹಾಗೂ ಗಾಯಕಿ ಸೆಲೆನಾ ಗೋಮೇಜ್‌ನ್ನು ಹೋಲುವ ಈ ಬಾಲೆಯ ಫೋಟೋಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ ಆಕೆ ಸೆಲೆನಾ ಗೋಮೇಜ್ ಅಲ್ಲದೇ ಹೋದರೂ ಆಕೆ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದ ಒಬ್ಬರ ಪುತ್ರಿ. ಹೌದು ಬಾಲಿವುಡ್ ನಟಿ ಮಹೀಮಾ ಚೌಧರಿ ಯಾರಿಗೆ ಗೊತ್ತಿಲ್ಲ, ಶಾರುಖ್ ಖಾನ್ ಹಾಗೂ ಮಹೀಮಾ ಚೌಧರಿ ನಟನೆಯ ಪರ್ದೇಸಿ ಸಿನಿಮಾವನ್ನು ಯಾರು ಮರೆಯುವಂತಿಲ್ಲ. ಈ ಸಿನಿಮಾ ಮಹಿಮಾಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತ್ತು. ಇಂತಹ ಮಹೀಮಾ ಚೌಧರಿ ಏಕೈಕ ಪುತ್ರಿಯೇ ಈ ಚೆಂದದ ಬಾಲೆ. ಹಾಲಿವುಡ್ ನಟಿ ಸೆಲೆನಾ ಗೋಮೇಜ್ ಅವರನ್ನು ಹೋಲು ಕಾರಣಕ್ಕೆ ಮಹೀಮಾ ಚೌಧರಿ ಅರಿಯಾನಾ ಚೌಧರಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದಾರೆ.

ಬಾಲಿವುಡ್ ನಟಿ ಮಹೀಮಾ ಚೌಧರಿ ಪುತ್ರಿ ಈಕೆ

ಹೌದು ನೆಟ್ಟಿಗರು ಆಕೆಯನ್ನು ಹಾಲಿವುಡ್‌ ನಟಿಗೆ ಹೋಲಿಕೆ ಮಾಡುತ್ತಿದ್ದಾರೆ. ಬರೀ ಇಷ್ಟೇ ಅಲ್ಲ ಮುದ್ದು ಮುದ್ದಾಗಿ ಕಾಶ್ಮೀರಿ ಆಪಲ್ ತರ ಕಾಣುವ ಅರೀನಾಳನ್ನು ಬಾರ್ಬಿಡಾಲ್ ಎಂದೂ ಅಭಿಮಾನಿಗಳು ಹೊಗಳುತ್ತಿದ್ದಾರೆ. ಇತ್ತೀಚೆಗೆ ಆಕೆ ತನ್ನ ಅಮ್ಮ ಮಹೀಮಾ ಜೊತೆ ಸಿಟಿಯಲ್ಲಿ ಕಾಣಿಸಿಕೊಂಡಿದ್ದು, ಪಾಪಾರಾಜಿಗಳು ಸೆರೆ ಹಿಡಿದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಈ ಫೋಟೋ ನೋಡಿದ ನೆಟ್ಟಿಗರು ಅರಿಯಾನಾಳ ಅಂದಕ್ಕೆ ಮಾರು ಹೋಗಿದ್ದಾರೆ.

ಹಲವು ವರ್ಷಗಳ ಬಳಿಕ ಮಹೀಮಾ ಚೌಧರಿ ಅವರು ಈ ವರ್ಷದ ಆರಂಭದಲ್ಲಿ 'ನದಾನಿಯಾನ್' ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಇದು ಸೈಫ್ ಅಲಿಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಚೊಚ್ಚಲ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಮಹಿಮಾ ಚೌಧರಿ ಅವರು ತೆರೆ ಮೇಲೆ ಖುಷಿ ಕಪೂರ್ ಅವರ ತಾಯಿಯಾಗಿ ನಟಿಸಿದ್ದರು. ಇಬ್ಬರು ಸ್ಟಾರ್‌ ಮಕ್ಕಳ ಕಾಲೇಜು ರೋಮ್ಯಾ ಕತೆ ಈ ಸಿನಿಮಾದಲ್ಲಿದೆ.

ಆದರೆ ಈ ನದಾನಿಯನ್ ಸಿನಿಮಾದ ಪ್ರೀಮಿಯರ್ ಸಮಯದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದ ಸ್ಟಾರ್‌ ಕಿಡ್‌ಗಳ ಬದಲು ಮತ್ತೊಬ್ಬ ಸ್ಟಾರ್ ಕಿಡ್ ಎಲ್ಲರ ಗಮನಸೆಳೆದಳು. ಆಕೆಯ ಮಹೀಮಾ ಚೌಧರಿ ಪುತ್ರಿ ಅರಿಯಾನಾ ಚೌಧರಿ. ಈ ಕಾರ್ಯಕ್ರಮದಲ್ಲಿ ಅಮ್ಮನ ಜೊತೆ ರೆಡ್‌ ಕಾರ್ಪೇಟ್ ಮೇಲೆ ಹೆಜ್ಜೆ ಹಾಕಿದ ಅರಿಯಾನಾ ಎಲ್ಲರ ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದರು. ಈಗ ಅವರು ಮತ್ತೊಮ್ಮೆ ತಮ್ಮ ಅಮ್ಮನ ಜೊತೆ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಲ್ಲದೇ ಅಮೆರಿಕನ್ ನಟಿ ಹಾಗೂ ಗಾಯಕಿ ಸೆಲೇನಾ ಗೋಮೇಜ್‌ಗೆ ಆಕೆಯನ್ನು ನೆಟ್ಟಿಗರು ಹೋಲಿಸುತ್ತಿದ್ದಾರೆ.

ಇದಾದ ನಂತರ ಅರಿಯಾನಾ ಅಮ್ಮನ ಜೊತೆ ಸಲೂನ್‌ಗೆ ಹೋಗುತ್ತಿದ್ದಾಗ ಪಾಪಾರಾಜಿಗಳು ಅಡ್ಡಗಟ್ಟಿ ಪೋಟೋ ಕ್ಲಿಕ್ಕಿಸಿದ್ದು, ಈ ಫೋಟೋಗಳು ವೈರಲ್ ಆದವು. ಸೆಲೆನಾ ರೀತಿಯೇ ಈಕೆ ಹೇರ್ ಸ್ಟೆಲ್ ಹೊಂದಿದ್ದಾಳೆ, ಸೆಲೆನಾ ರೀತಿಯೇ ಕಾಣ್ತಾಳೆ. ಸೆಲೆನಾಗಿಂತ ಈಕೆಯ ಚೆನ್ನಾಗಿದ್ದಾಳೆ ಆಕೆ ಬಾರ್ಬಿಡಾಲ್ ರೀತಿ ಕಾಣಿಸ್ತಿದ್ದಾಳೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೆ ಕೆಲವರು ಸೆಲೆನಾ ಆಕೆಯ ಅಮ್ಮನದ್ದೇ ಕಾರ್ಬನ್ ಕಾಪಿ, ಆಕೆಯ ಅಮ್ಮನಂತೆ ಆಕೆಯು ಸುಂದರವಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇದೇ ವರ್ಷದ ಜೂನ್‌ನಲ್ಲಿ ಅರಿಯಾನಾ ಪದವಿ ಪೂರ್ಣಗೊಳಿಸಿದ್ದು, ವೀಡಿಯೋ ಜೊತೆ ಆ ಕ್ಷಣದ ಖಷಿಯನ್ನು ಮಹಿಮಾ ಹಂಚಿಕೊಂಡಿದ್ದರು.

ಇದನ್ನೂ ಓದಿ: ರಾತ್ರಿ ಕೆಲಸದ ಹೊರೆ ಕಡಿಮೆ ಮಾಡಲು 10 ರೋಗಿಗಳ ಉಸಿರು ನಿಲ್ಲಿಸಿದ ನರ್ಸ್‌

ಇದನ್ನೂ ಓದಿ: ಕ್ಷಮೆ ಕೇಳಿದರೂ ಬಿಡದೆ ಟ್ರೋಲ್: ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಯ ವೀಡಿಯೋ ವೈರಲ್ : ಯುವಕ ಸಾವಿಗೆ ಶರಣು

View post on Instagram