Asianet Suvarna News Asianet Suvarna News

ಶೂಟಿಂಗ್ ವೇಳೆ ಗಾಯ: ಕತ್ರೀನಾ ಬಾಯ್‌ಫ್ರೆಂಡ್ ಗಲ್ಲದಲ್ಲಿ 25 ಸ್ಟಿಚ್

  • ಬಾಲಿವುಡ್ ನಟನ ಗಲ್ಲದಲ್ಲಿ ಆಳದ ಗಾಯ
  • ಕತ್ರೀನಾ ಬಾಯ್‌ಫ್ರೆಂಡ್ ಕೆನ್ನೆಯ ಮೇಲೆ 25 ಸ್ಟಿಚ್
The Scar On Vicky Kaushals Face Actor Shares How He Got 25 Stitches dpl
Author
Bangalore, First Published Oct 1, 2021, 5:53 PM IST
  • Facebook
  • Twitter
  • Whatsapp

ಸರ್ದಾರ್ ಉಧಮ್ ಚಿತ್ರೀಕರಣ ಆರಂಭವಾಗುವ ನಾಲ್ಕು ದಿನಗಳ ಮೊದಲು, ಭೂತ್: ದಿ ಹಾಂಟೆಡ್ ಶಿಪ್ ಚಿತ್ರದ ಸೆಟ್ ನಲ್ಲಿ ವಿಕ್ಕಿ ಕೌಶಲ್ ಗಾಯಗೊಂಡಿದ್ದಾರೆ. ನಟನ ಕೆನ್ನೆಗೆ ಒಳಗೆ ಮತ್ತು ಹೊರಗೆ ಸೇರಿ ಒಟ್ಟು 25 ಹೊಲಿಗೆಗಳನ್ನು ಹಾಕಲಾಗಿದೆ. ಅವರು ಮಾಡಿದ ಮೊದಲ ಕೆಲಸವೆಂದರೆ - ಅವರು ತಾವು ಗಾಯಗೊಂಡ ಫೋಟೋವನ್ನು ನಿರ್ದೇಶಕ ಶೂಜಿತ್ ಸಿರ್ಕಾರ್ ಅವರಿಗೆ ಕಳುಹಿಸಿದ್ದಾರೆ.

ಆಸ್ಕ್ ಮಿ ಎನಿಥಿಂಗ್ ಆನ್ ಅಮೆಝಾನ್ ಪ್ರೈಮ್‌ ಕ್ವಶ್ಚನ್ ಆನ್ಸರ್ ಸೆಷನ್‌ನಲ್ಲಿ ನಟ ತಮ್ಮ ಗಾಯದ ಬಗ್ಗೆ ರಿವೀಲ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ಶೂಟ್ ಸಂದರ್ಭ ಆದ ಭಯನಾಕ ಅನುಭವ ಏನು ಎಂದು ಕೇಳಿದಾಗ ನಟ ಘಟನೆ ವಿವರಿಸಿದ್ದಾರೆ. ಶೂಟಿಂಗ್ ಸಂದರ್ಭ ಒಂದು ಗಾಯವಾಗಿದೆ. ಕೆನ್ನೆಯ ಎಲುಬು ಗಾಯವಾಗಿದೆ. ಒಳಗೆ 12 ಹಿರಗೆ 13 ಸ್ಟಿಚ್ ಮಾಡಲಾಗಿದೆ ಎಂದಿದ್ದಾರೆ.

ಸಿರ್ಕಾರ್ ಅವರ ಆಪ್ತ ಸ್ನೇಹಿತರಾಗಿದ್ದ ಖಾನ್, 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಪಂಜಾಬ್ ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೆಲ್ ಒ'ಡಾಯರ್ ವಿರುದ್ಧ ಸೇಡು ತೀರಿಸಿಕೊಂಡ ಮರೆತುಹೋದ ಸ್ವಾತಂತ್ರ್ಯ ಹೋರಾಟಗಾರನ ಪಾತ್ರವನ್ನು ವಹಿಸಬೇಕಿತ್ತು.

ನನಗೆ ಸರ್ದಾರ್ ಉಧಮ್ ಕೇವಲ ಸಿನಿಮಾವಲ್ಲ, ಇದು ಕನಸು ನನಸಾಗುತ್ತಿರುವ ಕ್ಷಣ. ಭಾರತದ ಅತ್ಯಂತ ಭಯಾನಕ ದುರಂತಕ್ಕೆ ಸೇಡು ತೀರಿಸಿಕೊಳ್ಳಲು ತನ್ನ ಜೀವವನ್ನು ತ್ಯಾಗ ಮಾಡಿದ ಹುತಾತ್ಮ ಯೋಧನ ವೀರ ಕಥೆಯನ್ನು ಹಡುಕಿ ಅದನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಹಲವು ವರ್ಷಗಳ ಆಳವಾದ ಸಂಶೋಧನೆ ಬೇಕಾಯಿತು ಎಂದು ಟ್ರೈಲರ್ ಬಿಡುಗಡೆ ಮಾಡಿದಾಗ ಶೂಜಿತ್ ಸಿರ್ಕಾರ್ ಹೇಳಿದ್ದರು.

ಈ ಚಿತ್ರದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಒಂದು ಕುತೂಹಲಕಾರಿ ಪುಟವನ್ನು ಹಂಚಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಹಂಚಿಕೊಳ್ಳಬೇಕಾದ ಒಂದು ಕಥೆ. ಸರ್ದಾರ್ ಉಧಮ್ ಭೌಗೋಳಿಕತೆಯ ತಡೆ ಮೀರಿ ಪ್ರಪಂಚದಾದ್ಯಂತ ನಮ್ಮ ಇತಿಹಾಸದ ಒಂದು ಭಾಗವನ್ನು ತೆರೆದು ತೋರಿಸಲಿದೆ ಎಂದಿದ್ದರು. ಈ ಚಿತ್ರ ಅಕ್ಟೋಬರ್ 16 ರಂದು ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಬಿಡುಗಡೆಯಾಗಲಿದೆ.

Follow Us:
Download App:
  • android
  • ios