Asianet Suvarna News Asianet Suvarna News

The Kerala story: ಉಚಿತ ಪ್ರದರ್ಶನ ಆಯೋಜಿಸಿದ ಪ್ರಶಾಂತ್ ಸಂಬರ್ಗಿ

ಗ್‌ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಉಚಿತ ಪ್ರದರ್ಶನ ಆಯೋಜಿಸಿದ್ದಾರೆ. ಮೇ 11ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರು ಕೋಣನ ಕುಂಟೆಯ ವಸಂತಪುರ ಮುಖ್ಯ ರಸ್ತೆಯಲ್ಲಿರುವ ಮಾನಸ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

The Kerala story:  free screening  organized by Prashant Sambargi at bengaluru rav
Author
First Published May 10, 2023, 12:00 AM IST | Last Updated May 10, 2023, 12:00 AM IST

ಬೆಂಗಳೂರು (ಮೇ.9) : ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ವಿವಾದಿತ ದಿ ಕೇರಳ ಸ್ಟೋರಿ ಚಲನಚಿತ್ರವನ್ನು ಹಲವು ರಾಜ್ಯಗಳು ನಿಷೇಧಿಸಿವೆ. ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು. ಟ್ಯಾಕ್ಸ್ ಫ್ರೀ ಮಾಡುವಂತೆ ಹಿಂದು ಸಂಘಟನೆಗಳು ಒತ್ತಾಯಿಸಿವೆ.  ಕೆಲವೆಡೆ ಉಚಿತ ಪ್ರದರ್ಶನ ಏರ್ಪಡಿಸುವಂತೆ ಕೇಳಿ ಬರುತ್ತಿರುವ ಹಿನ್ನೆಲೆ. ಬಿಗ್‌ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಉಚಿತ ಪ್ರದರ್ಶನ ಆಯೋಜಿಸಿದ್ದಾರೆ. ಮೇ 11ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರು ಕೋಣನ ಕುಂಟೆಯ ವಸಂತಪುರ ಮುಖ್ಯ ರಸ್ತೆಯಲ್ಲಿರುವ ಮಾನಸ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಥಿಯೇಟರ್‌ನಲ್ಲಿ 650 ಆಸನ ಸಾಮರ್ಥ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ಸಿಗಲಿದೆ.

‘ದಿ ಕೇರಳ ಸ್ಟೋರಿ(The Kerala story) ಬಲವಂತ ಮತಾಂತರದ ಜೊತೆಗೆ ಭಯೋತ್ಪಾದನೆಯ ನೈಜ ಸ್ಥಿತಿಯನ್ನೂ ಪ್ರತಿಬಿಂಬಿಸುತ್ತದೆ. ಕೇರಳದ ಮಹಿಳೆ(Kerala women)ಯರನ್ನು ಬಲವಂತದಿಂದ ಮತಾಂತರ ಮಾಡಿ ಆ ಮೂಲಕ ಭಯೋತ್ಪಾದನೆಗೆ ತಳ್ಳುವ ಕುಕೃತ್ಯದ ಕುರಿತಾಗಿ ಚಿತ್ರದಲ್ಲಿ ವಿವರಿಸಲಾಗಿದೆ.

 

The Kerala Story: ಟ್ಯಾಕ್ಸ್ ಫ್ರೀ ಮಾಡಲು ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

ಈ ಚಿತ್ರವು ಕಣ್ಣು ತೆರೆಸುವಂತಿದೆ. ಕೇರಳದಲ್ಲಿ ನಡೆದದ್ದು ದೇಶದ ಎಲ್ಲಿ ಬೇಕಾದರೂ ನಡೆಯಬಹುದು. ನಾವು ಇದನ್ನು ತಡೆಯದಿದ್ದರೆ ಧರ್ಮದ ಹೆಸರಿನಲ್ಲಿ ನಡೆಯುವ ಉಗ್ರವಾದವನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಸ್ಟೋರಿ ಚಿತ್ರ ನೈಜತೆಗೆ ಕನ್ನಡಿ ಹಿಡಿಯುವ ಜೊತೆಗೆ ಉತ್ತಮ ಸಂದೇಶವನ್ನೂ ನೀಡುತ್ತದೆ’ ಎಂದು ಸಂಬರ್ಗಿ ಹೇಳಿದ್ದಾರೆ.

ಕೇರಳ ಸ್ಟೋರಿಗೆ ತಡೆ ಕೋರಿ ಸುಪ್ರೀಂ ಗೆ ಅರ್ಜಿ: 15ಕ್ಕೆ ವಿಚಾರಣೆ

ನವದೆಹಲಿ: ವಿವಾದಾತ್ಮಕ ‘ದ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಯನ್ನು ಮೇ 15 ರಂದು ಸುಪ್ರೀಂ ಕೋರ್ಟ್(Suprim court) ವಿಚಾರಣೆಗೊಳಪಡಿಸಲಿದೆ. ಹಿರಿಯ ವಕೀಲ ಕಪಿಲ್‌ ಸಿಬಲ್‌ ಈ ಅರ್ಜಿಯನ್ನು ತುರ್ತು ವಿಚಾರಣಾ ಪಟ್ಟಿಗೆ ಸೇರಿಸಲು ಪ್ರಸ್ತಾಪಿಸಿದ ವೇಳೆ ಮುಖ್ಯ ನ್ಯಾ ಡಿ ವೈ ಚಂದ್ರಚೂಡ್‌ ಹಾಗೂ ನ್ಯಾ ಪಿ ಎಸ್‌ ನರಸಿಂಹ ಅವರ ಪೀಠವು ಸೋಮವಾರ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಇನ್ನು ಈ ವಿಚಾರದಲ್ಲಿ ಹೈಕೋರ್ಚ್‌ ಆದೇಶ ನಿಡಿದೆಯೇ ಎಂಬ ಪೀಠದ ಪ್ರಶ್ನೆಗೆ, ಚಿತ್ರ ಬಿಡುಗಡೆಗೆ ಕೋರ್ಚ್‌ ನಿರಾಕರಿಸಿದೆ ಎಂದು ಸಿಬಲ್‌ ತಿಳಿಸಿದರು.

The Kerala Story ಕುರಿತು ಬಳ್ಳಾರಿಯಲ್ಲಿ ಮಾತಾಡಿದ ಪ್ರಧಾನಿ ಮೋದಿ: ನಿರ್ಮಾಪಕ ಹೇಳಿದ್ದೇನು?

Latest Videos
Follow Us:
Download App:
  • android
  • ios