60ನೇ ವರ್ಷಕ್ಕೆ ಕಾಲಿಡಲಿರುವ ಸಲ್ಮಾನ್ ಖಾನ್ ಅವರ ಡಿವೋರ್ಸ್ ಬಗ್ಗೆ ಹೇಳಿಕೆ ವೈರಲ್ ಆಗಿದೆ. ಕಪಿಲ್ ಶರ್ಮಾ ಶೋನಲ್ಲಿ ಡಿವೋರ್ಸ್‌ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ ಮತ್ತು ಹಲವು ನಟಿಯರೊಂದಿಗೆ ಅವರ ಹೆಸರು ತಳುಕು ಹಾಕಿಕೊಂಡಿದೆ.

ಇನ್ನೇನು 60ನೇ ವರ್ಷಕ್ಕೆ ಕಾಲಿಡಲಿರೋ ನಟ ಸಲ್ಮಾನ್‌ ಖಾನ್‌ ಇಂದು ಕೂಡ 'ಬಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌' ಆಗಿ ಉಳಿದುಕೊಂಡಿದ್ದಾರೆ. ಇನ್ನೂ ಮದುವೆಯಾಗದ ಸಲ್ಮಾನ್‌ ಖಾನ್‌ ಅವರು ಡಿವೋರ್ಸ್‌ ಬಗ್ಗೆ ಮಾತನಾಡಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಡಿವೋರ್ಸ್‌ ಬಗ್ಗೆ ಹೇಳಿದ್ದೇನು?

ನಟ ಕಪಿಲ್‌ ಶರ್ಮಾ ಅವರು ʼದಿ ಗ್ರೇಟ್‌ ಇಂಡಿಯನ್‌ ಕಪಿಲ್‌ಶೋʼ ಮೂಲಕ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಅರ್ಚನಾ ಪುರಾನಾ ಸಿಂಗ್‌ ಅವರು ಜಡ್ಜ್‌ ಆಗಿದ್ದಾರೆ. ಇನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿರುವ ವಿಡಿಯೋದಲ್ಲಿ ಸಲ್ಮಾನ್‌ ಖಾನ್‌ ಅವರು, "ಒಬ್ಬರು ಇನ್ನೊಬ್ಬರಿಗೋಸ್ಕರ ತ್ಯಾಗ ಮಾಡುತ್ತಿದ್ದರು. ಆಗ ಸಹಿಸಿಕೊಳ್ಳುವ ಶಕ್ತಿಯಿತ್ತು. ಈಗ ರಾತ್ರಿ ಮಲಗಿದ್ದಾಗ ಒಬ್ಬರ ಕಾಲು ಇನ್ನೊಬ್ಬರ ಮೇಲೆ ಬಂದರೆ, ಗೊರಕೆ ಹೊಡೆದರೆ ಡಿವೋರ್ಸ್‌ಆಗುತ್ತದೆ. ಒಂದು ಸಣ್ಣ ತಪ್ಪು ಕಲ್ಪನೆ ಡಿವೋರ್ಸ್‌ ಆಗುತ್ತದೆ. ಡಿವೋರ್ಸ್‌ ಆದ್ಮೇಲೆ ನಿಮ್ಮ ಅರ್ಧ ಆಸ್ತಿಯನ್ನು ಅವಳು ತೆಗೆದುಕೊಂಡು ಹೋಗ್ತಾಳೆ" ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್‌ಆಗ್ತಿದೆ.

ನಟಿಯರ ಜೊತೆ ಸಲ್ಮಾನ್‌ ಖಾನ್‌ ಹೆಸರು!

ಸಲ್ಮಾನ್‌ ಖಾನ್‌ ಇನ್ನೂ ಮದುವೆ ಆಗಿಲ್ಲ, ಅಂದಹಾಗೆ ಅವರಿಗೆ ಮದುವೆ ಆಗುವ ಆಲೋಚನೆ ಕೂಡ ಇದ್ದಂತಿಲ್ಲ. ಇನ್ನೊಂದು ಕಡೆ ಹಿರಿಯ ನಟಿ ಸಂಗೀತಾ ಬಿಜ್ಲಾನಿಯಿಂದ ಹಿಡಿದು, ಕತ್ರಿನಾ ಕೈಫ್‌ವರೆಗೆ ಸಾಕಷ್ಟು ನಟಿಯರ ಜೊತೆಗೆ ಸಲ್ಮಾನ್‌ ಹೆಸರು ಥಳುಕು ಹಾಕಿಕೊಂಡಿತ್ತು. ಈ ಹಿಂದೆ ಮಂಗಳೂರಿನ ಪೂಜಾ ಹೆಗ್ಡೆ ಜೊತೆ ಸಲ್ಮಾನ್‌ ಖಾನ್‌ ಹೆಸರು ಕೇಳಿಬಂದಾಗ ಅವರು ಸಿಕ್ಕಾಪಟ್ಟೆ ಗರಂ ಆಗಿದ್ದರು. ಈ ಹಿಂದೆ ಮದುವೆ ಪ್ಲ್ಯಾನ್‌ ನಡೆದಿದ್ದರೂ ಕೂಡ, ಅದು ಕಾರ್ಯರೂಪಕ್ಕೆ ಬಂದಿಲ್ಲ.

ನವಜೋತ್‌ ಸಿಂಗ್‌ ಸಿಧು ಕೂಡ ಜಡ್ಜ್!‌

ಅಂದಹಾಗೆ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌, ಸೊಹೈಲ್‌ ಖಾನ್‌ ಕೂಡ ಬೇರೆ ಬೇರೆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಇವರಿಬ್ಬರಿಗೂ ಮಕ್ಕಳಾದ ಮೇಲೆ ಡಿವೋರ್ಸ್‌ ಪಡೆದಿದ್ದಾರೆ. ಈ ಬಗ್ಗೆಯೂ ಸಲ್ಮಾನ್‌ ಖಾನ್‌ ಕಾಮಿಡಿ ಮಾಡಿದ್ದುಂಟು. ಅಂದಹಾಗೆ ಈ ಸೀಸನ್‌ನಲ್ಲಿ ನವಜೋತ್‌ ಸಿಂಗ್‌ ಸಿಧು ಅವರು ಕೂಡ ಜಡ್ಜ್‌ ಆಗಿ ಇರಲಿದ್ದಾರೆ ಎನ್ನಲಾಗಿದೆ.

ಸೋನಾಕ್ಷಿ ಜೊತೆ ಮದುವೆ ಆಗಿತ್ತಾ?

ಕೆಲ ವರ್ಷಗಳ ಹಿಂದೆಯೇ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ ರಹಸ್ಯವಾಗಿ ಮದುವೆಯಾಗಿದ್ದಾರೆ ಅನ್ನೋ ಗಾಳಿಸುದ್ದಿಗಳು ಹರಿದಾಡಿತ್ತು. ಆಗ ಸೋನಾಕ್ಷಿ ಮಾತನಾಡಿ, “ಸೋಶಿಯಲ್‌ ಮೀಡಿಯಾದಲ್ಲಿ ಏನಿದ್ರೂ ನಂಬೋ ಮೂರ್ಖರು ನಾವಲ್ಲ. ಅದು ನಿಜವಾದ ಫೋಟೋನಾ ಅಥವಾ ಎಡಿಟ್ ಮಾಡಿದ್ದಾ ಅಂತ ಜನರಿಗೆ ಗೊತ್ತು” ಅಂತ ಸೋನಾಕ್ಷಿ ಹೇಳಿದ್ದಾರೆ. ಆ ವೈರಲ್ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಮದುವೆ ಆಗಿಲ್ಲ ಅಂತ ಸ್ಪಷ್ಟಪಡಿಸಿದ್ದರು.

ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಸಲ್ಮಾನ್‌ ಖಾನ್!‌

2010 ರಲ್ಲಿ ಸೋನಾಕ್ಷಿ ಸಿನ್ಹಾ ಅವರು ಸಲ್ಮಾನ್ ಖಾನ್ ಜೊತೆ 'ದಬಂಗ್', 'ದಬಂಗ್ 2' ದಲ್ಲೂ ನಟಿಸಿದ್ದರು. ಈಗಾಗಲೇ ನಟ ಜಹೀರ್‌ ಇಕ್ಬಾಲ್‌ ಜೊತೆಗೆ ಸೋನಾಕ್ಷಿ ಮದುವೆಯಾಗಿದೆ. ಎಂದಿನಂತೆ ಸಲ್ಮಾನ್‌ ಖಾನ್‌ ಅವರು ಬ್ಯಾಚುಲರ್‌ ಆಗಿದ್ದಾರೆ. ಸಲ್ಮಾನ್ 'ಕಭೀ ಈದ್ ಕಭೀ ದಿವಾಳಿ' ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಏಪ್ರಿಲ್ ಮೊದಲ ವಾರದಲ್ಲಿ ಶುರುವಾಗುತ್ತೆ. 'ಟೈಗರ್ 3' ಸಿನಿಮಾದಲ್ಲೂ ನಟಿಸ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 21 ರಂದು ಬಿಡುಗಡೆಯಾಗಲಿದೆ.

https://www.instagram.com/reel/DK2aZGUMVu8/?utm_source=ig_embed&ig_rid=8ca53cfb-bf9d-4f90-828e-9cde6284bd61