Asianet Suvarna News Asianet Suvarna News

ವಿಮಾನದಲ್ಲಿ ನಟಿಯ ಸೊಂಟ ತಬ್ಬಿಕೊಂಡ ಉದ್ಯಮಿ

  • ನಟಿಯ ಸೊಂಟ ತಬ್ಬಿಕೊಂಡ ಉದ್ಯಮಿ
  • ವಿಮಾನದಲ್ಲಿ ನಟಿಯ ಜೊತೆ ಅಸಭ್ಯ ವರ್ತನೆ
The actress after businessman grabs Actress by the waist on flight dpl
Author
Bangalore, First Published Oct 21, 2021, 11:50 AM IST
  • Facebook
  • Twitter
  • Whatsapp

ಮುಂಬೈ(ಅ.21): ಗಾಜಿಯಾಬಾದ್‌ನ ಉದ್ಯಮಿಯೊಬ್ಬರು ದೆಹಲಿ-ಮುಂಬೈ ವಿಮಾನದಲ್ಲಿ ನಟಿಗೆ ಕಿರುಕುಳ ನೀಡಿದ್ದಾರೆ. ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿದ ನಂತರ ಆರೋಪಿ ತನ್ನ ಆಸನದಿಂದ ಎದ್ದಾಗ ಹಿಂದಿನಿಂದ ತನ್ನನ್ನು ಹಿಡಿದರು ಎಂದು ಮಹಿಳೆ ಆರೋಪಿಸಿದ್ದಾರೆ.

ಆರೋಪಿಯ ವರ್ತನೆಯಿಂದ ಕೋಪಗೊಂಡ ಮಹಿಳೆ ತಕ್ಷಣ ರಿಯಾಕ್ಟ್ ಮಾಡಿದ್ದಾರೆ. ಅಲ್ಲಿರುವ ಕ್ಯಾಬಿನ್ ಸಿಬ್ಬಂದಿಗೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ದೂರುದಾರರು ಸ್ಥಳದಲ್ಲೇ ಕೋಪದಿಂದ ಪ್ರತಿಕ್ರಿಯಿಸಿದಂತೆ, ಆರೋಪಿ ಕ್ಷಮೆಯಾಚಿಸಿದ್ದಾನೆ. ತಾನು ಅವಳನ್ನು ಇನ್ನೊಬ್ಬ ಪುರುಷ ಸಹ-ಪ್ರಯಾಣಿಕ ಎಂದು ತಪ್ಪಾಗಿ ಭಾವಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಬಿನ್ ಸಿಬ್ಬಂದಿ ಮಹಿಳೆಯ ದೂರನ್ನು ಸಹಾರ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ. ಕೇಸನ್ನು ಅಧಿಕೃತವಾಗಿ ನೋಂದಾಯಿಸಲಾಗಿದೆ.

ಆರೋಪಿಯು ಮಹಿಳೆ ಸೊಂಟದಿಂದ ಬಳಸಿದ ಆರೋಪಿ

ಮಹಿಳೆ ಅಕ್ಟೋಬರ್ 3 ರಂದು ದೆಹಲಿಯಿಂದ ಮುಂಬೈಗೆ ವಿಮಾನವನ್ನು ಹತ್ತಿದರು. ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಇಳಿದರು. ವಿಮಾನದಿಂದ ಕೆಳಗಿಳಿಯಲು ಎಲ್ಲಾ ಪ್ರಯಾಣಿಕರು ತಮ್ಮ ಆಸನಗಳ ಬಳಿ ನಿಂತಿದ್ದರು.

ಮಹಿಳೆ ಮುಂದಿನ ಸಾಲಿನಲ್ಲಿ ಪ್ರಯಾಣಿಕರು ಕೆಳಗಿಳಿಯಲು ಕಾಯುತ್ತಿದ್ದಾಗ, ಯಾರೋ ಅವಳನ್ನು ಸೊಂಟದಿಂದ ಹಿಡಿಯುತ್ತಿರುವಂತೆ ಅನಿಸಿ ಬೆಚ್ಚಿಬಿದ್ದಿದ್ದಾರೆ. ಆರೋಪಿಯು ಮಹಿಳೆಯನ್ನು ತನ್ನ ಕಡೆಗೆ ಎಳೆದುಕೊಂಡಿದ್ದಾನೆ. ಆಕ್ಷೇಪವನ್ನು ವ್ಯಕ್ತಪಡಿಸಿದಾಗ ನಾನು ನಿಮ್ಮನ್ನು ಪುರುಷ ಸಹ-ಪ್ರಯಾಣಿಕ ಎಂದು ನಾನು ಭಾವಿಸಿದೆ ಎಂದು ಹೇಳಿದ್ದಾರೆ.

ಆ ವ್ಯಕ್ತಿಯನ್ನು ಅಕ್ಟೋಬರ್ 14 ರಂದು ವಶಕ್ಕೆ ತೆಗೆದುಕೊಳ್ಳಲಾಯಿತು. ಘಟನೆಯಿಂದ ನಾನು ತುಂಬಾ ಕಂಗಾಲಾಗಿದ್ದೇನೆ ಎಂದಿದ್ದಾರೆ ಮಹಿಳೆ. ಆರೋಪಿಯ ಕುಟುಂಬವು ತನ್ನನ್ನು ಸಂಪರ್ಕಿಸಿ, ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ. ಅವರ ಪತ್ನಿ ಮತ್ತು ಕುಟುಂಬದ ಇನ್ನೊಬ್ಬ ಪುರುಷ ಸದಸ್ಯರು ನನ್ನ ನಿವಾಸಕ್ಕೆ ಬಂದಿದ್ದರು. ದೂರನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಿದರು. ಅವರಿಗೆ ನನ್ನ ನಿವಾಸ ವಿಳಾಸ ತಿಳಿದಿದೆ. ಹಾಗಾಗಿ ಯಾರಾದರೂ ಮತ್ತೆ ಬರಬಹುದೆಂಬ ಭಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios