Asianet Suvarna News Asianet Suvarna News

ವಿಚ್ಛೇದನ ವದಂತಿ ಬೆನ್ನಲ್ಲೇ ಏಕಾಂಗಿಯಾಗಿ ಚಿತ್ರಮಂದಿರಕ್ಕೆ ಬಂದ ದಳಪತಿ ವಿಜಯ್ ಪತ್ನಿ: ವಿಡಿಯೋ ವೈರಲ್

ತಮಿಳು ಸ್ಟಾರ್ ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿ ಇದೆ. ಈ ನಡುವೆ ವಿಜಯ್ ಪತ್ನಿ ಏಕಾಂಗಿಯಾಗಿ ಚಿತ್ರಮಂದಿರದಲ್ಲಿ ಕಾಣಿಸಿಕಂಡಿದ್ದಾರೆ. 

thalapathy vijay wife Sangeetha made a rare appearance at screening of Maaveeran sgk
Author
First Published Jul 14, 2023, 4:08 PM IST

ತಮಿಳಿನ ಖ್ಯಾತ ನಟ ದಳಪತಿ ವಿಜಯ್ ರಾಜಕೀಯ ಎಂಟ್ರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಜಯ್ ಸಿನಿಮಾರಂಗದಿಂದ ಬ್ರೇಕ್ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ನಡುವೆ ವಿಜಯ್ ಪತ್ನಿ ಸಂಗೀತಾ ಚಿತ್ರಮಂದಿರದಲ್ಲಿ ಕಾಣಿಸಿಕೊಂಡಿದ್ದಾರೆ. ದಳಪತಿ ಪತ್ನಿ ಸಂಗೀತಾ ಕ್ಯಾಮರಾಗಳಿಂದ ಸಿಕ್ಕಾಪಟ್ಟೆ ದೂರ. ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಇಂದು ಸಂಗೀತಾ ದಿಢೀರ್ ಅಂತ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದು ಅಚ್ಚರಿ ಮೂಡಿಸಿದೆ. ಅಂದಹಾಗೆ ಸಂಗೀತಾ ಎಂಟ್ರಿ ಕೊಟ್ಟಿದ್ದು ಶಿವಕಾರ್ತಿಕೇಯನ್ ಸಿನಿಮಾ ವೀಕ್ಷಿಸಲು. 

ಶಿವಕಾರ್ತಿಕೇಯನ್ ನಟನೆಯ ಮಾವೀರನ್ ಸಿನಿಮಾ ರಿಲೀಸ್ ಆಗಿದೆ. ಮಾವೀರನ್ ಸಿನಿಮಾ ವೀಕ್ಷಿಸಲು ಸಂಗೀತಾ ಥಿಯೇಟರ್‌ಗೆ ಎಂಟ್ರಿ ಕೊಟ್ಟಿದ್ದರು. ವಿಜಯ್ ಪತ್ನಿ ಸಿನಿಮಾ ವೀಕ್ಷಸಲು ಎಂಟ್ರಿ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕ್ಯಾಮರಾ ಕಣ್ಣುಗಳನ್ನು ತಪ್ಪಿಸಿ ಯಾರಿಗೂ ಗೊತ್ತಾಗದ ಹಾಗೆ ಕಾರಿನಿಂದ ಇಳಿದು ಹೋಗುತ್ತಿದ್ದ ಸಂಗೀತಾ ವಿಡಿಯೋವನ್ನು ಅಭಿಮಾನಿಗಳು ಸೆರೆಹಿಡಿದಿದ್ದಾರೆ. ಸಂಗೀತಾ ಥಿಯೇಟರ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಮಾವೀರನ್ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಮತ್ತು ನಿರ್ದೇಶಕ ಶಂಕರ್ ಅವರ ಪುತ್ರಿ ಅದಿತಿ ಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ವೀಕ್ಷಿಸಲು ವಿಜಯ್ ಪತ್ನಿ ಬಂದಿದ್ದರು. ಮುಖಕ್ಕೆ ಮಾಸ್ಕ್ ಧರಿಸಿದ್ದರು. ವಿಡಿಯೋ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ ಮುಖ ತಗ್ಗಿಸಿಕೊಂಡು ಹೋದರು. 

ವಿಜಯ್ ಜೊತೆ ವಿಚ್ಛೇದನ ವದಂತಿ 

ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ದೂರ ದಾರು ಆಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇಬ್ಬರೂ ಜೊತೆಯಲ್ಲಿಲ್ಲ. ಬೇರೆಯಾಗಿ ಅನೇಕ ತಿಂಗಳಾಗಿದೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇಬ್ಬರ ವಿಚ್ಛೇದನ ವದಂತಿಗೆ ಪುಷ್ಠಿ ನೀಡುವಂತೆ ಸಂಗೀತಾ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದೆ ಇರುವುದು. ವಿಜಯ್ ಜೊತೆ ಪತ್ನಿ ಸಂಗೀತ ಕಾಣಿಸಿಕೊಳ್ಳದೆ ಅನೇಕ ತಿಂಗಳಾಗಿದೆ. ಹಾಗಾಗಿ ಇಬ್ಬರೂ ದಾರ ಆಗಿದ್ದಾರೆ, ವಿಚ್ಧೇದನ ಪಡೆಯಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ವಿಜಯ್ ಕುಟುಂಬದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

ದಳಪತಿ ವಿಜಯ್ ಬಗ್ಗೆ ಹೀಗೊಂದು ಸುದ್ದಿ ವೈರಲ್: ಸಿನಿಮಾದಿಂದ ಬ್ರೇಕ್ ಪಡಿತಾರಂತೆ ಸ್ಟಾರ್ ನಟ

ವಿಜಯ್ ಸದ್ಯ ರಾಜಕೀಯ ಎಂಟ್ರಿ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ವಿಜಯ್ ಸದ್ಯದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ, ಸಿನಿಮಾರಂಗ ತೊರೆಯುತ್ತಾರೆ ಎನ್ನಲಾಗಿದೆ. ಲಿಯೋ ಸಿನಿಮಾ ಬಳಿಕ ವಿಜಯ್ ರಾಜಕೀಯದ ಕಡೆ ಹೆಚ್ಚು ಗಮನ ಕೊಡುತ್ತಾರೆ. ಈಗಾಗಲೇ ವಿಜಯ್ ತಮ್ಮ ಪಕ್ಷದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ ನಟ ದಳಪತಿ ವಿಜಯ್‌ಗೆ ಬಿತ್ತು ದಂಡ

ಲಿಯೋ ಸಿನಿಮಾ 

ವಿಜಯ್ ಸದ್ಯ ಲಿಯೋ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಬಹಿರಂಗ ಪಡಿಸಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಗ್ಯಾಂಗ್‌ಸ್ಟರ್ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ವಿಜಯ್ ಜೊತೆ ಈ ಸಿನಿಮಾದಲ್ಲಿ ನಾಯಕಿಯಾಗಿ ತ್ರಿಷಾ ನಟಿಸಿದ್ದಾರೆ. ಅನೇಕ ವರ್ಷಗಳ ಬಳಿಕ ತ್ರಿಷಾ ಮತ್ತು ವಿಜಯ್ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್, ಅರ್ಜುನ್ ಸರ್ಜಾ, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್, ಅರ್ಜುನ್ ದಾಸ್, ಮ್ಯಾಥ್ಯೂ ಥಾಮಸ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಧನುಷ್, ಕಮಲ್ ಹಾಸನ್ ಮತ್ತು ರಾಮ್ ಚರಣ್ ಅವರಂತಹ ನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

   

Follow Us:
Download App:
  • android
  • ios