ಮಾಸ್ಟರ್ ಮೂಲಕ ಸೂಪರ್ ಪರ್ಫಾಮೆನ್ಸ್  ಕೊಟ್ಟಿರುವ ವಿಜಯ್ ಬಾಕ್ಸ್ ಅಫೀಸ್ ಕೆಲಕ್ಷನ್ ವಿಚಾರದಲ್ಲಿ ತಲೈವಾ ರಜನಿಯನ್ನು ಹಿಂದಿಕ್ಕಿ ಮುಂದೆ ಓಡ್ತಿದ್ದಾರೆ. ಕೊರೋನಾ ನಂತರ ಥಿಯೇಟರ್‌ನಲ್ಲಿ ಬಿಗ್ ಮೂವಿ ರಿಲೀಸ್ ಮಾಡಿ ಬಿಗ್ ಸಕ್ಸಸ್ ಪಡೆದಿದ್ದಾರೆ ವಿಜಯ್.

ಒಟ್ಟು 200 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದ್ದು, ತಮಿಳುನಾಡಿನಲ್ಲಿ ಮಾತ್ರ ಬರೋಬ್ಬರಿ 100 ಕೋಟಿ ಕಲೆಕ್ಷನ್ ಗಳಿಸಿದೆ ಸಿನಿಮಾ. ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾ ವಿಜಯ್‌ನ್ನು ತಮಿಳುನಾಡಿನಲ್ಲಿ 100 ಕೋಟಿ ದಾಟಿದ ನಾಯಕನನ್ನಾಗಿ ಮಾಡಿದೆ.

ಅಮೆಝಾನ್ ಪ್ರೈಂನಲ್ಲಿ ಮಾಸ್ಟರ್: ಡೇಟ್ & ಡೀಟೆಲ್ಸ್ ಹೀಗಿದೆ

ಈ ಮೂಲಕ ತಲೈವಾ ರಜನೀಕಾಂತ್ ಮತ್ತು ತಲ ಅಜಿತ್ ಅವರನ್ನೂ ಬೀಟ್ ಮಾಡಿದಂತಾಗಿದೆ. ರಜನೀಕಾಂತ್ ಮತ್ತು ಅಜಿತ್ ಅವರ ಒಂದೊಂದು ಸಿನಿಮಾ ತಮಿಳುನಾಡಿನಲ್ಲಿ 100 ಕೋಟಿ ದಾಟಿದ್ದಾರೆ.

ದಳಪತಿ ವಿಜಯ್‌ನ ಬಿಗಿಲ್, ಮರ್ಸಲ್, ಸರ್ಕಾರ್, ಮಾಸ್ಟರ್ ಸೇರಿ ನಾಲ್ಕು ಸಿನಿಮಾ 100 ಕೋಟಿ ದಾಟುವಲ್ಲಿ ಯಶಸ್ವಿಯಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಾಸ್ಟರ್ 13 ಕೋಟಿ ಬಾಚಿದೆ. ಅಲ್ಲಿಯೂ ಸಿನಿಮಾ ಬ್ಲಾಕ್‌ಬ್ಲಸ್ಟರ್ ಆಗಿ ಮೂಡಿಬಂದಿದೆ.