ಕಾಲಿವುಡ್ ನಟ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಮಾಸ್ಟರ್ ಸಿನಿಮಾ ಬಾಕ್ಸ್‌ ಆಪೀಸ್ ಕೊಳ್ಳೆ ಹೊಡೆಯುತ್ತಿದೆ. ಈಗಾಗಲೇ ಅಮೆಝಾನ್ ಪ್ರೈಂ ಮಾಸ್ಟರ್ ಆನ್‌ಲೈನ್ ಸ್ಟ್ರೀಮಿಂಗ್ ಹಕ್ಕುಗಳನ್ನು ಭಾರೀ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿರುವುದು ಗೊತ್ತು.

ಇದೀಗ ಅಮೆಝಾನ್‌ನಲ್ಲಿ ಯಾವಾಗಿಂದ ಮಾಸ್ಟರ್ ನೋಡಬಹುದು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ. ಫೆಬ್ರವರು 12ರಿಂದ ಅಮೆಝಾನ್ ಪ್ರೈಂನಲ್ಲಿಯೂ ಮಾಸ್ಟರ್ ಸಿನಿಮಾ ಸ್ಟ್ರೀಮ್ ಆಗಲಿದೆ.

ವಿಜಯ್ 'ಮಾಸ್ಟರ್' ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಥಿಯೇಟರ್ ರಿಲೀಸ್ ನಂತರ ಒಂದು ತಿಂಗಳು ಕಳೆದು ಆನ್‌ಲೈನ್‌ ರಿಲೀಸ್ ಮಾಡಲು ಮಾಸ್ಟರ್ ಚಿತ್ರತಂಡ ಅಮೆಝಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ.

ಇದರಲ್ಲಿ ಮಾಳವಿಕಾ ಮೋಹನನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಕ್ಸ್‌ಬಿ ಫಿಲ್ಮ್ ಕ್ರಿಯೇಟರ್ಸ್ ಸಿನಿಮಾ ನಿರ್ಮಿಸಿದ್ದಾಎ. ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರಮಂದಿರದಲ್ಲಿ ಮಾಸ್ಟರ್ ಬ್ಲಾಕ್‌ ಬಸ್ಟರ್; ಹೇಗಿದೆ ಸಿನಿಮಾ?

ಸಿನಿಮಾ ತಮಿಳುನಾಡಿನಲ್ಲಿಯೇ 100 ಕೋಟಿ ದಾಟಿದೆ ಎನ್ನಲಾಗಿದೆ. 13ರಂದು ರಿಲೀಸ್ ಆದ ಸಿನಿಮಾ ಅದೇ ಡಿಮ್ಯಾಂಡ್‌ನಲ್ಲಿ ಥಿಯೇಟರ್‌ನಲ್ಲಿ ಓಡುತ್ತಿದೆ. ಹಿಂದಿ ರಿಮೇಕ್‌ನಲ್ಲಿ ವಿಜಯ್ ಸೇತುಪತಿ ಹಾಗೂ ಜಾನ್ ಅಬ್ರಹಾಂ ನಟಿಸಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ.