ಬಾಲಿವುಡ್ ಕ್ವೀನ್ ಕಂಗನಾ ರಾಣಾವತ್ ಮೋಸ್ಟ್ ಕಾಸ್ಟ್ಲಿಯೆಸ್ಟ್  ನಟಿ ಮಾತ್ರವಲ್ಲ ಇವರು ಬಳಸುವ ಬ್ಯಾಗ್, ಆಕ್ಸಸೆರೀಸ್‌ಗಳು ಕೂಡಾ ಹೈಲಿ ಕಾಸ್ಟ್ಲಿ. 

ಇತ್ತೀಚಿಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಾಗ ಇವರು ಹಾಕಿರುವ ಬ್ಯಾಗ್ ಗಮನ ಸೆಳೆದಿದೆ.  ಇದರ ಬೆಲೆಯೂ ಕಡಿಮೆಯೇನಲ್ಲ. ಬರೋಬ್ಬರಿ 16 ಲಕ್ಷ ರೂ.  ಅಬ್ಬಾ! ಅಂತದ್ದೇನಿದೆ ಇದ್ರಲ್ಲಿ ಅಂತೀರಾ? ಬಂಗಾರದಿಂದ ಡಿಸೈನ್ ಮಾಡಲಾಗಿದೆ ಎನ್ನಲಾಗಿದೆ. ಜನ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತಲೂ ಜಾಸ್ತಿ ಆಯ್ತು ಎಂಬ ಮಾತುಗಳು ಕೇಳಿ ಬಂದಿದೆ.  

2 ನೇ ಚಾನ್ಸ್ ಕೊಟ್ಟ ಬದುಕಿಗೆ ನಾನು ಗ್ರೇಟ್‌ಫುಲ್‌; ಮನಿಶಾ ಕೊಯಿರಾಲಾ ಪೋಸ್ಟ್ ವೈರಲ್!

ಕೆಲ ದಿನಗಳ ಹಿಂದೆ ದೀಪಿಕಾ ಪಡುಕೋಣೆ, ನೀತಾ ಅಂಬಾನಿ ಬ್ಯಾಗ್‌ ಬೆಲೆ ಕೂಡಾ ಸುದ್ದಿಯಾಗಿತ್ತು. ಬಾಲಿವುಡ್ ಸೆಲಬ್ರಿಟಿಗಳಿಗೆ ಇದು ದೊಡ್ಡ ವಿಚಾರವೇ ಅಲ್ಲ ಬಿಡಿ! 

ಕಂಗನಾ ಸದ್ಯ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೀಪಿಕ್ 'ತಲೈವಿ'ಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು ಕಂಗನಾ ಲುಕ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆ ಲುಕ್ ಕಂಗನಾಗೆ ಮ್ಯಾಚ್ ಆಗ್ತಾಯಿಲ್ಲ ಎಂದು ನಟ್ಟಿಗರು ಹೇಳಿದ್ದಾರೆ. 

ಅನ್ನದಾತನ ಧ್ವನಿ ಆದ ದಾಸ ದರ್ಶನ್..!

ಇನ್ನು ಇದರ ಜೊತೆ ಜೊತೆಗೆ ರಾಮ ಮಂದಿರದ ಬಗ್ಗೆ 'ಅಪರಾಜಿತ ಅಯೋಧ್ಯಾ' ಎನ್ನುವ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.