ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಸಿನಿಮಾ ತಂಡ ಇದೀಗ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರ ಎಂಜಿಆರ್ ಸ್ಟಿಲ್ಸ್ ರಿಲೀಸ್ ಮಾಡಿದೆ. ತಲೈವಿ ಪಾತ್ರದಷ್ಟೇ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂಜಿಆರ್ ಪಾತ್ರ.

ಮಾಜಿ ತಮಿಳುನಾಡು ಸಿಎಂ ಎಂಜಿ ರಾಮಚಂದ್ರನ್ ಅವರು 1977-1989ರ ತನಕ ಸಿಎಂ ಆಗಿದ್ದರು. ಅವರು ಡಿಸೆಂಬರ್ 24 1987ರಲ್ಲಿ ನಿಧನರಾದರು. ಎಂಜಿಆರ್ ಅವರ ಪುಣ್ಯಸ್ಮರಣೆ ದಿನ ಫೋಟೋಸ್ ರಿಲೀಸ್ ಮಾಡಲಾಗಿದೆ.

ತಲೈವಿ ಸಿನಿಮಾದಲ್ಲಿ ಕಂಗನಾ ಜೊತೆ MGR ಆಗಿ ಕಾಣಿಸ್ಕೊಳ್ತಿರೋ ನಟ ಯಾರು ಗೊತ್ತಾ..?

ಪುರಚ್ಚಿ ತಲೈವರ್ ಎಂಜಿಆರ್ ಪಾತ್ರವನ್ನು ನಿರ್ವಹಿಸುವುದು ಕೇವಲ ಗೌರವವಲ್ಲ, ದೊಡ್ಡ ಜವಾಬ್ದಾರಿ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ದೇಶಕ ಎ.ಎಲ್.ವಿಜಯ್ ಮತ್ತು ನಿರ್ಮಾಪಕರಾದ ವಿಷ್ಣು ವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಅವರಿಗೆ ಧನ್ಯವಾದ. ನಾನು ಈ ಚಿತ್ರಗಳನ್ನು ತಲೈವಾರ್ ಅವರ ನೆನಪಿನಲ್ಲಿ ವಿನಮ್ರವಾಗಿ ಪೋಸ್ಟ್ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ ನಟ ಅರವಿಂದ್.

ಬಹುನಿರೀಕ್ಷಿತ ತಲೈವಿ ಸಿನಿಮಾ ಮುಗಿಸಿದ ಕಂಗನಾ..! ಹೀಗಿದೆ ನ್ಯೂ ಲುಕ್

ಎಎಲ್ ವಿಜಯ್ ನಿರ್ದೇಶನದ ತಲೈವಿ ಸಿನಿಮಾದಲ್ಲಿ ನಟಿ ಕಂಗನಾ ರಣಾವತ್ ಜಯಲಲಿತಾ ಆಗಿ ನಟಿಸುತ್ತಿದ್ದಾರೆ. ಜಯಲಲಿತಾ ಬದುಕು ಮತ್ತು ರಾಜಕೀಯ ಜೀವನದಲ್ಲಿ ಎಂಜಿಆರ್ ಪ್ರಮುಖ ವ್ಯಕ್ತಿಯಾಗಿದ್ದರು. ಅರವಿಂದ್ ಅವರು ಫಸ್ಟ್‌ ಲುಕ್‌ನ್ನು ಜನವರಿಯಲ್ಲಿಯೇ ಶೇರ್ ಮಾಡಿಕೊಂಡಿದ್ದರು.