ನಟಿ ಕಂಗನಾ ರಣಾವತ್ ಅವರು ಮುಂಬರುವ ಚಿತ್ರ ತಲೈವಿ ಚಿತ್ರದ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿ ನಡೆಸುತ್ತಿದ್ದಾರೆ. ಶನಿವಾರ ನಟಿ ತನ್ನ ತಲೈವಿ ಸಿನಿಮಾ ಶೂಟಿಂಗ್ ಮುಗಿದಿದೆ ಎಂದಿದ್ದಾರೆ.

ಅವರು ಟ್ವಿಟರ್‌ಗೆ ಈ ವಿಚಾರ ತಿಳಿಸಿ ಅವರ ಪಾತ್ರದಿಂದ ಹೊರಬರುತ್ತಿರುವ ಬಗ್ಗೆ ಮಿಶ್ರ ಭಾವನೆ ಇದೆ ಎಂದು ಹೇಳಿದ್ದಾರೆ. ನಾವಿಂದು ನಮ್ಮ ಬಹನಿರೀಕ್ಷಿತ ಸಿನಿಮಾ ಶೂಟಿಂಗ್ ಮುಗಿಸಿದ್ದೇವೆ. ಪಾತ್ರದ ಜೊತೆ ನಮಗೆ ಪ್ರೀತಿಯಾಗುತ್ತದೆ. ಅದರಿಂದ ಹೊರ ಬರುವಾಗ ಮಿಶ್ರ ಭಾವನೆ ಇದೆ ಎಂದಿದ್ದಾರೆ.

ರಜನೀ ರಾಜಕೀಯ ಎಂಟ್ರಿ: ಬರ್ತ್‌ಡೇ ಕೇಕ್ ಮೂಲಕ ಕೊಟ್ರು ಹೊಸ ಹಿಂಟ್

ಡಿಸೆಂಬರ್ 5 ರಂದು ಜಯಲಲಿತಾ ಅವರ ನಾಲ್ಕನೇ ಪುಣ್ಯಸ್ಮರಣೆ ಸಂದರ್ಭದಲ್ಲಿ, ನಟಿ, ರಾಜಕಾರಣಿ ಜಯಲಲಿತಾ ಅವರಿಗೆ ಗೌರವ ಸಲ್ಲಿಸುವ ಸಿನಿಮಾ ಬಗ್ಗೆ ಕಂಗನಾ ಟ್ವೀಟ್ ಮಾಡಿದ್ದರು.

ಜಯ ಅಮ್ಮನ ಪುಣ್ಯಸ್ಮರಣೆಯಂದು, ನಮ್ಮ ಚಿತ್ರ ತಲೈವಿ- ಕ್ರಾಂತಿಕಾರಿ ನಾಯಕಿಯ ಕೆಲವು ಸ್ಟಿಲ್‌ಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನನ್ನ ತಂಡಕ್ಕೆ, ವಿಶೇಷವಾಗಿ ಕೆಲಸ ಮಾಡುತ್ತಿರುವ ನಮ್ಮ ತಂಡದ ನಾಯಕ ವಿಜಯ್ ಸರ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಎಎಲ್‌ ವಿಜಯ್ ನಿರ್ದೇಶನದ ತಲೈವಿ ಸಿನಿಮಾದಲ್ಲಿ ಪ್ರಕಾಶ್ ರಾಜ್, ಅರವಿಂದ್ ಸ್ವಾಮಿ ಕೂಡಾ ನಟಿಸುತ್ತಿದ್ದಾರೆ. ಕಂಗನಾ ಕೊನೆಯದಾಗಿ ಮಾಡಿದ ಸಿನಿಮಾ ಪಂಗ.