ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ತಲೈವಿ ಸಿನಿಮಾ ಶೂಟಿಂಗ್ ಮುಗಿದಿದೆ. ಜಯಲಲಿತಾ ಅವರ ಬಯೋಪಿಕ್‌ನಲ್ಲಿ ಎಂಜಿಆರ್ ಪಾತ್ರ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಹಾಗಾದ್ರೆ ಆ ಪಾತ್ರ ಮಾಡೋದ್ಯಾರು..?

ಉಯಿರೇ.. ಉಯಿರೇ ಅನ್ನೋ ತಮಿಳು ಸಾಂಗ್ ನೆನಪಿದ್ಯಾ..? ಭಾಷೆಯನ್ನು ಮೀರಿ ಎಲ್ಲರಿಗೂ ಫೇವರೇಟ್ ಆದ ಪ್ರೇಮ ಗೀತೆ. ಇದರಲ್ಲಿ ನಟಿಸಿದ ನಟನ ನೆನಪಿದ್ಯಾ..? ನಟ ಅರವಿಂದ್ ಸ್ವಾಮಿ ಕಂಗನಾ ಜೊತೆ ನಟಿಸಲಿದ್ದಾರೆ.

ಬಹುನಿರೀಕ್ಷಿತ ತಲೈವಿ ಸಿನಿಮಾ ಮುಗಿಸಿದ ಕಂಗನಾ..! ಹೀಗಿದೆ ನ್ಯೂ ಲುಕ್

ಲೆಜೆಂಡರಿ ಸೂಪರ್‌ಸ್ಟಾರ್ ಹಾಗೂ ತಮಿಳುನಾಡಿನ ಸಿಎಂ ಆಗಿದ್ದ ಎಂಜಿ ರಾಮಚಂದ್ರನ್ ಪಾತ್ರವನ್ನು ಹಿರಿಯ ನಟ ಅರವಿಂದ ಸ್ವಾಮಿ ಮಾಡಲಿದ್ದಾರೆ. ವಿಜಯ್ ನಿರ್ದೇಶನದ ಸಿನಿಮಾದಲ್ಲಿ ಕಂಗನಾ ಜಯಲಲಿತಾ ಪಾತ್ರ ಮಾಡುತ್ತಿದ್ದು, ಅವರ ಫೋಟೋಗಳು ಈಗಾಗಲೇ ವೈರಲ್ ಆಗಿವೆ.

ಮಧುಬಾಲಾ ಜಾನಕಿ, ಶಮ್ನಾ ಕಾಸಿಂ ಶಶಿಕಲಾ ಪಾತ್ರ ಮಾಡಲಿದ್ದಾರೆ. ಈ ಬಯೋಪಿಕ್ ಈಗಾಗಲೇ ಸಾಕಷ್ಟು ಕುತೂಹಲ ಸೃಷ್ಟಿಸಿದ್ದು, ಕಂಗನಾಳ ಬಹು ನಿರೀಕ್ಷಿತ ಸಿನಿಮಾ ಆಗಿದೆ