ನ್ಯಾಚುರಲ್ ಸ್ಟಾರ್ ನಾನಿ(Natural StarNnani) ಮತ್ತು ಮಲಯಾಳಂ ನಟಿ ನಜ್ರಿಯಾ ನಜೀಮ್(Malayalam Actress Nazriya Nazeem) ಅವರ ರೊಮ್ಯಾಂಟಿಕ್ ಬಸ್ ಜರ್ನಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇಬ್ಬರೂ ಯಾವ ಪಯಣ ಬೆಳೆಸಿದ್ದಾರೆ ಅಂತ ಯೋಚಿಸುತ್ತಿದ್ದೀರಾ, ಇಬ್ಬರೂ ಒಟ್ಟಿಗೆ ಬಸ್ ಏರಿ ಹೊರಟಿದ್ದು ಸಿನಿಮಾದಲ್ಲಿ.
ನ್ಯಾಚುರಲ್ ಸ್ಟಾರ್ ನಾನಿ(Natural StarNnani) ಮತ್ತು ಮಲಯಾಳಂ ನಟಿ ನಜ್ರಿಯಾ ನಜೀಮ್(Malayalam Actress Nazriya Nazeem) ಅವರ ರೊಮ್ಯಾಂಟಿಕ್ ಬಸ್ ಜರ್ನಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಇಬ್ಬರೂ ಯಾವ ಪಯಣ ಬೆಳೆಸಿದ್ದಾರೆ ಅಂತ ಯೋಚಿಸುತ್ತಿದ್ದೀರಾ, ಇಬ್ಬರೂ ಒಟ್ಟಿಗೆ ಬಸ್ ಏರಿ ಹೊರಟಿದ್ದು ಸಿನಿಮಾದಲ್ಲಿ. ಹೌದು, ನಾನಿ ಮತ್ತು ನಜ್ರಿಯಾ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ, ತಮಿಳಿನಲ್ಲಿ ತಮ್ಮದೇ ಆದ ಅಭಿಮಾನಿ ವರ್ಗ ಹೊಂದಿರುವ ಪ್ರತಿಭಾವಂತ ಮತ್ತು ಕ್ಯೂಟ್ ನಟಿ ನಜ್ರಿಯಾ ಮೊದಲ ಬಾರಿಗೆ ತೆಲುಗು ಸಿನಿಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಬೆಂಗಳೂರು ಡೇಸ್', ರಾಜಾ ರಾಣಿ, ನೇರಂ, ವಾಯಿ ಮೂಡಿ ಪೇಸುವಾ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಜ್ರಿಯಾ, ಇದೇ ಮೊದಲ ಬಾರಿಗೆ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಂದಹಾಗೆ ನಜ್ರಿಯಾ ಮೊದಲ ತೆಲುಗು ಸಿನಿಮಾಗೆ ಅಂತೆ ಸುಂದರನಿಕಿ ಎಂದು ಟೈಟಲ್ ಇಡಲಾಗಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಎರಡನೇ ಡಾಡಿನ ಟೀಸರ್ ರಿಲೀಸ್ ಆಗಿದ್ದು ನಾನಿ ಮತ್ತು ನಜ್ರಿಯಾ ಇಬ್ಬರ ಬಸ್ ಪಯಣಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂತೆ ಸುಂದರನಿಕೆ ಸಿನಿಮಾಗೆ ವಿವೇಕ್ ಆತ್ರೇಯ ನಿರ್ದೇಶನ ಮಾಡಿದ್ದಾರೆ.
ಈಗಾಗಲೇ ಟೀಸರ್ ಮತ್ತು ಮೊದಲ ಹಾಡು ಬಿಡುಗಡೆ ಮಾಡಿರುವ ಸಿನಿಮಾತಂಡೆ ಎರಡೇ ಹಾಡನ್ನು ಮೇ 9ರಂದು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಸದ್ಯ ಪೋಸ್ಟರ ಮೂಲಕವೇ ಕುತಹಲ ಮೂಡಿಸಿರುವ ಎರಡನೇ ಹಾಡು ಹೇಗಿರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ನಾನಿ ಮತ್ತು ನಜ್ರಿಯಾ ಅವರ ರೊಮ್ಯಾಂಟಿಕ್ ಜರ್ನಿ ನೋಡಬೇಕೆಂದರೆ ಜೂನ್ 10ರ ವರೆಗೂ ಕಾಯಲೇ ಬೇಕು. ಅಂದಹಾಗ ಈ ಸಿನಿಮಾ ತೆಲುಗು ಜೊತೆಗೆ ತಮಿಳು ಮತ್ತು ಮಲಯಾಳಂನಲ್ಲೂ ತೆರೆಗೆ ಬರುತ್ತಿದೆ.
ಕನ್ನಡಿಗರಿಗೆ ತೆಲುಗು ಚೆನ್ನಾಗಿ ಅರ್ಥವಾಗುತ್ತೆ, ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲ್ಲ: ನಟ ನಾನಿ
ನಜ್ರಿಯಾ ಸಿನಿಮಾ ಜರ್ನಿ ಬಗ್ಗೆ ಹೇಳುವುದಾದರೆ 2010 ರಿಂದ ಸಿನಿಮಾರಂಗದಲ್ಲಿರುವ ನಜ್ರಿಯಾ ಈ ವರೆಗೆ ನಟಿಸಿರುವುದು 15 ಸಿನಿಮಾಗಳಲ್ಲಿಯಷ್ಟೆ. ಅದರಲ್ಲೂ 12 ಸಿನಿಮಾಗಳಲ್ಲಿಯಷ್ಟೆ ನಾಯಕಿಯಾಗಿ ನಟಿಸಿದ್ದಾರೆ ನಾಜರಿಯಾ. 10 ಮಲಯಾಳಂ ಹಾಗೂ 5 ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 2014 ರಲ್ಲಿ ಫಹಾದ್ ಜೊತೆ ಮದುವೆಯಾದ ನಂತರ ನಟನೆಯಿಂದ ದೂರ ಉಳಿದ್ದರು. ಕೆಲವು ವರ್ಷಗಳು ಬ್ರೇಕ್ ಪಡೆದಿದ್ದ ನಜ್ರಿಯಾ ಇದೀಗ ಮತ್ತೆ ಬ್ಯುಸಿಯಾಗಿದ್ದಾರೆ. ಸದ್ಯ ತೆಲುಗು ಸಿನಿಮಾ ಮೂಲಕ ಮೋಡಿ ಮಾಡಲು ನಜ್ರಿಯಾ ಸಜ್ಜಾಗಿದ್ದಾರೆ.
ಕನ್ನಡಿಗರನ್ನು ಕೆರಳಿಸಿದ ಹೇಳಿಕೆ, ಕ್ಷಮೆಯಾಚಿಸಿ ತೇಪೆ ಹಚ್ಚಿದ ಟಾಲಿವುಡ್ ನಾನಿ..!
ಇನ್ನು ನಟ ನಾನಿ ಕೊನೆಯದಾಗಿ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ನಾನಿಗೆ ನಾಯಕಿಯಾಗಿ ಕೃತಿ ಶೆಟ್ಟಿ ಮತ್ತು ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದರು. ಸದ್ಯ ಅಂತ ಸುಂದರನಿಕಿ ಜೊತೆಗೆ ಇನ್ನೂ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
