ಕನ್ನಡ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ ಎಂದ ನಟ ನಾನಿ. ಕಾರಣ ಇಷ್ಟೆ ಅಂತೆ.
ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ಮಾಡುವ ರೀತಿ ಮತ್ತು ನಟ,ನಟಿಯರು ಭಾಷೆ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಬದಲಾಗಿದೆ. ದೊಡ್ಡ ಬಜೆಟ್ ಸಿನಿಮಾ ಅಂದ್ರೆ ಪ್ಯಾನ್ ಇಂಡಿಯಾ (Pan India films) ಆಗಲೇ ಬೇಕು ಅನ್ನೋದು ಈಗ ಶುರುವಾಗಿರುವ ಟ್ರೆಂಡ್. ಕನ್ನಡ, ತೆಲುಗು, ಮಲಯಾಳಂ, ತಮಿಳು, ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆದರೆ ಹಾಕಿರುವ ಬಂಡವಾಳಕ್ಕೆ ಒಂದು ಅರ್ಥ ಸಿಗುತ್ತದೆ ಅನ್ನೋದು ಚಿತ್ರತಂಡದ ಮಾತು. ಬಾಹುಬಲಿ, ಕೆಜಿಎಫ್ ಸಿನಿಮಾ ದೊಡ್ಡ ಹಿಟ್ ಆದಮೇಲೆ ನಿರ್ದೇಶಕರು ಮತ್ತು ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಆದರೆ ನಟ ನಾನಿ (Nani) ಬಿಟ್ಟು....
ಹೌದು! ತೆಲುಗು ನಟ ನಾನಿ ಅಭಿನಯಿಸಿರುವ 'ಅಲಾ ಸುಂದರಾನಿಕಿ' (Ante Sundaraniki) ಕಾಮಿಡಿ ಕಮ್ ಲವ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾ ತೆಲುಗು ಸೇರಿದಂತೆ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೂ (Karnataka) ತೆಲುಗು ವರ್ಶನ್ ರಿಲೀಸ್ ಅಗುತ್ತಿದೆ, ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಜನರಿಗೆ ನಾನಿ ಕ್ಲಾರಿಟಿ ಕೊಟ್ಟಿದ್ದಾರೆ. ಯಾವ ಕಾರಣಕ್ಕೆ ಕನ್ನಡ ಭಾಷೆಯಲ್ಲಿ ರಿಲೀಸ್ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
'ನಾನು ನಟನಾಗಿ ಜನರಿಗೆ ಸಿನಿಮಾವನ್ನು ಮೂಲ ರೂಪದಲ್ಲಿ ತೋರಿಸುವುದಕ್ಕೆ ಇಷ್ಟ ಪಡುತ್ತೇನೆ. ನಮ್ಮ ಭಾಷೆಯಲ್ಲಿ ಡೈಲಾಗ್ ಹೇಳಿನೇ ನಿಮಗೆ ಸಿನಿಮಾ ಅರ್ಥ ಮಾಡಿಸುವುದಕ್ಕೆ ಇಷ್ಟ ಆಗುತ್ತದೆ. ಆದರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಡಬ್ಬಿಂಗ್ (Dubbing) ಮಾಡಿಸುತ್ತಿದ್ದೇವೆ ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಬೇರೆ. ಅಲ್ಲಿ ನಮಗೆ ಯಾವ ಭಾಷೆ ಸಮಸ್ಯೆ ಆಗುತ್ತಿಲ್ಲ. ಅಲ್ಲಿನ ಜನರಿಗೆ ತೆಲುಗು ಚೆನ್ನಾಗಿ ಅರ್ಥವಾಗುತ್ತದೆ ಮತ್ತು ಹಲವು ತೆಲುಗು ಸಿನಿಮಾಗಳನ್ನು ನೋಡುತ್ತಾ ಬಂದಿದ್ದಾರೆ. ಈ ಕಾರಣಕ್ಕೆ ನಾನು ಅವರಿಗೆ ಸಿನಿಮಾವನ್ನು ಮೂಲ ಭಾಷೆಯಲ್ಲಿ ತೋರಿಸಬೇಕು ಎಂದು ನಿರ್ಧಾರ ಮಾಡಿ ಕನ್ನಡಕ್ಕೆ ಡಬ್ ಮಾಡಿಲ್ಲ' ಎಂದು ನಾನಿ ಹೇಳಿದ್ದಾರೆ.
Low Price For Movie Tickets: ಸಿನಿಮಾ ಟಿಕೆಟ್ ಬೆಲೆ ಇಳಿಕೆ, ಇದು ಪ್ರೇಕ್ಷಕರಿಗೆ ಅವಮಾನ ಎಂದ ನಾನಿ
ನಾನಿ ಮಾತುಗಳಿಗೆ ವಿರೋಧ ವ್ಯಕ್ತವಾಗಿದೆ. ಕನ್ನಡದಲ್ಲಿ ಸಿನಿಮಾ ಡಬ್ ಮಾಡಿಲ್ಲ ಅಂದ್ರೆ ನಾವು ಸಿನಿಮಾ ನೋಡುವುದಿಲ್ಲ ಕರ್ನಾಟಕದಲ್ಲಿ ಕಡಿಮೆ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಬೇಕು ಎಂದು ಕನ್ನಡಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 'ನಿಮ್ಮ ಲಾಜಿಕ್ ಚೆನ್ನಾಗಿದೆ. ತಮಿಳಿನ ಜನರಿಗೂ ತೆಲುಗು ಚೆನ್ನಾಗಿ ಅರ್ಥವಾಗುತ್ತದೆ ಅವರಿಗೆ ಯಾಕೆ ಡಬ್ಬಿಂಗ್ ಮಾಡಿದ್ದೀರಾ? ಅವರಿಗೂ ತೆಲುಗು ಮೂಲ ಭಾಷೆಯಲ್ಲಿ ಸಿನಿಮಾ ತೋರಿಸಿ. ಒಂದು ಭಾಷೆಯಲ್ಲಿ ಡಬ್ ಮಾಡಿ ಮತ್ತೊಂದು ಭಾಷೆಯಲ್ಲಿ ಡಬ್ ಮಾಡದೆ ಇರುವುದು ಸರಿ ಅಲ್ಲ' ಎಂದು ಖಂಡಿಸಿದ್ದಾರೆ.
ನಿದ್ರೆ ಬರುತ್ತಿಲ್ಲ, ಬಂದರೂ ಬೇಗ ಎದ್ದೇಳಲು ಆಗುತ್ತಿಲ್ಲ:ಸೋನಂ ಕಪೂರ್ ಪ್ರೆಗ್ನೆನ್ಸಿ ದಿನಗಳು!
ನಾನಿ ಮೂರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋತ್ತಿಗೆ ಹೀಗಾಗಿ ಕನ್ನಡದಲ್ಲಿ ಡಬ್ ಮಾಡಿ ಹಣ ಕಳೆದುಕೊಂಡು ಓಡಿಲ್ಲ ಅಂದ್ರೆ ನಷ್ಟವಾಗುತ್ತದೆ ಎಂದು ರಿಲೀಸ್ ಮಾಡಿಲ್ಲ. ನಾನಿ ಸಿನಿಮಾ ಮಾತ್ರವಲ್ಲ 'ವಿ', 'ಶಾಮ್ ಸಿಂಘ ರಾಯ್, ಮತ್ತು 'ಟಕ್ ಜಗದೀಶ್' ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆದವು.
'ಅಲಾ ಸುಂದರಾನಿಕಿ' ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ನಜ್ರಿಯಾ (Nazriya) ಕಾಣಿಸಿಕೊಂಡಿದ್ದಾರೆ. ಕಾಮಿಡಿ ರೊಮ್ಯಾನ್ಸ್ ಚಿತ್ರಕ್ಕೆ ವಿವೇಕ್ ಆತ್ರೇಯ ಆಕ್ಷನ್ ಕಟ್ ಹೇಳಿದ್ದಾರೆ. ಸುಂದರ್ ಒಬ್ಬ ಮಡಿವಂತ ಬ್ರಾಹ್ಮಣರ ಕುಟುಂಬದ ಹುಡುಗ, ಪ್ರೀತಿಯಲ್ಲಿ ತೇಲುತ್ತಿರುವವನಿಗೆ ಜೀವನದ ಪ್ರತಿ ಹಂತದಲ್ಲೂ ಜಾತಕ ನಂಬುವಂತೆ ಕುಟುಂಬದವರು ಹೇಳಿ ಬೆಳೆಸಿರುತ್ತಾರೆ. ಲೀಲಾ ಕ್ರಿಸ್ಚಿಯನ್ ಹುಡುಗಿ. ಇಬ್ಬರು ಪ್ರೀತಿಸಲು ಆರಂಭಿಸಿ ಇಡೀ ಕುಟುಂಬಕ್ಕೆ ದೊಡ್ಡ ಶಾಕ್ ಕೊಡುತ್ತಾರೆ. ಮದುವೆಯಾಗಲು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆಂದು ಈ ಚಿತ್ರದಲ್ಲಿ ಹೇಳಲಾಗುತ್ತದೆ.
