Asianet Suvarna News Asianet Suvarna News

ಟಾಲಿವುಡ್ ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಇಂದಿರಾ ದೇವಿ ಅವರು ಕಳೆದ ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದು, ಹೈದರಾಬಾದ್‍ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದಿರಾ ದೇವಿ ತೀವ್ರ ಅಸ್ವಸ್ಥರಾದ ಕಾರಣ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ.

tollywood superstar mahesh babu mother indira devi passed away gvd
Author
First Published Sep 28, 2022, 8:49 AM IST

ಟಾಲಿವುಡ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಇಂದು ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ. ಇಂದಿರಾ ದೇವಿ ಅವರು ಕಳೆದ ಕೆಲವು ವಾರಗಳಿಂದ ಅಸ್ವಸ್ಥರಾಗಿದ್ದು, ಹೈದರಾಬಾದ್‍ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದಿರಾ ದೇವಿ ತೀವ್ರ ಅಸ್ವಸ್ಥರಾದ ಕಾರಣ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಇಂದಿರಾದೇವಿ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 9 ಗಂಟೆಯ ನಂತರ ಇಂದಿರಾ ದೇವಿ ಅವರ ಪಾರ್ಥಿವ ಶರೀರವನ್ನು ಪದ್ಮಾಲಯ ಸ್ಟುಡಿಯೋದಲ್ಲಿ ಇರಿಸಲಾಗುವುದು ಎಂದು ಮಹೇಶ್ ಬಾಬು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. 

ಅಭಿಮಾನಿಗಳು ಪದ್ಮಾಲಯ ಸ್ಟುಡಿಯೋಗೆ ಆಗಮಿಸಿ ಇಂದಿರಮ್ಮ ಅವರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ಮಹಾಪ್ರಸ್ಥಾನದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ. ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಮ್ಮ ಅವರ ನಿಧನಕ್ಕೆ ಚಿತ್ರರಂಗ, ರಾಜಕೀಯ ಸೇರಿದಂತೆ ಎಲ್ಲಾ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದಿರಾ ದೇವಿ ಅವರನ್ನು ಎಲ್ಲರೂ ಇಂದಿರಮ್ಮ ಅಂತ ಕರೆಯುತ್ತಿದ್ದರು. ಮಹೇಶ್ ಬಾಬು ಅವರ ತಂದೆ ಕೃಷ್ಣ ಹಿರಿಯ ಕಲಾವಿದರು. 

ಪುತ್ರನಿಗಾಗಿ ಲಂಡನ್‌ಗೆ ಹಾರಿದ ಮಹೇಶ್ ಬಾಬು ಕುಂಟುಂಬ

ಇದೀಗ ವಿಷಯ ಇಂದಿರಮ್ಮ ಅವರ ನಿಧನದ ಸುದ್ದಿ ತಿಳಿಯುತ್ತಲೇ ಮಹೇಶ್ ಬಾಬು ಅವರ ನಿವಾಸದತ್ತ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಇನ್ನು ಈ ವರ್ಷ ಜನವರಿಯಲ್ಲಿ ಮಹೇಶ್ ಬಾಬು ಅವರ ಸೋದರ ರಮೇಶ್ ಬಾಬು ಮೃತರಾಗಿದ್ದರು. ಇದೀಗ ತಾಯಿ ಇಂದಿರಾದೇವಿ ಇಹಲೋಹ ತ್ಯಜಿಸಿದ್ದಾರೆ. ಕೃಷ್ಣ ಮತ್ತು ಇಂದಿರಾ ದೇವಿ ದಂಪತಿಗೆ ಮಹೇಶ್ ಬಾಬು ಮತ್ತು ರಮೇಶ್ ಬಾಬು, ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಸೇರಿ ಐದು ಜನ ಮಕ್ಕಳು. ಪ್ರಿಯದರ್ಶಿನಿ ಅವರ ಪತಿ ಸುಧೀರ್ ಬಾಬು ಸಹ ನಟರಾಗಿದ್ದಾರೆ. 

ಸದಾ ನನ್ನೊಂದಿಗೆ ನಗಲು ನೀನಿರುವೆ; ಪುತ್ರಿ Sitara ಬಗ್ಗೆ ಮಹೇಶ್ ಬಾಬು- ನಮ್ರತಾ ಮಾತು!

ಇನ್ನು ವಿಶ್ವ ತಾಯಂದಿರ ದಿನ ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಜೊತೆ ಪೋಟೋ ಹಾಕಿ ಮಹೇಶ್ ಬಾಬು ಅವರು ಅಮ್ಮ ಎಂದರೆ ತುಂಬಾ ಪ್ರೀತಿ ಇತ್ತು ಎಂದು ವಿಶ್ ಮಾಡಿದ್ದರು. ಈ ಮೂಲಕ ಮದರ್ಸ್​ ಡೇ ಅದ್ಧೂರಿಯಾಗಿ ಆಚರಿಸುವ ಮೂಲಕ ತಾಯಿಗೆ ಮಹೇಶ್ ಬಾಬು ಸರ್ಪ್ರೈಸ್ ನೀಡಿದ್ದರು.

Follow Us:
Download App:
  • android
  • ios