Asianet Suvarna News Asianet Suvarna News

ಸಮಂತಾಗೆ ಅನೈತಿಕ ಸಂಬಂಧ; ಮಾತು ಬದಲಾಯಿಸಿದ ವೈದ್ಯ ವೆಂಕಟ್

ಡಾ.ವೆಂಕಟ್ ವಿರುದ್ಧ ಸಮಂತಾ ದೂರು ದಾಖಲಿಸಿದ ನಂತರ ತಮ್ಮ ಹೇಳಿಕೆ ಬದಲಾಯಿಸಿದ ವೈದ್ಯ. ಯುಟ್ಯೂಬ್‌ ವಿಡಿಯೋ ವೈರಲ್....

Telugu Samantha files defamation case Dr Venkat Rao asks sorry vcs
Author
Bangalore, First Published Oct 25, 2021, 1:22 PM IST
  • Facebook
  • Twitter
  • Whatsapp

ಟಾಲಿವುಡ್(Tollywood) ಬ್ಯೂಟಿ ಸಮಂತಾ (Samantha Prabhu) ವೃತ್ತಿ ಜೀವನದ ಬಗ್ಗೆ ಎಷ್ಟೇ ಓಪನ್ ಆಗಿದ್ದರೂ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಟ್ಟುಕೊಂಡಿದ್ದರು. ಪ್ರೀತಿಸಿ (Love) ಅದ್ಧೂರಿಯಾಗಿ ಮದುವೆ (Marriage) ಆದರೂ ಕೆಲವರ ಜೊತೆ ಅನೈತಿಕ  ಸಂಬಂಧ (Illicit Affair) ಇಟ್ಟುಕೊಂಡಿದ್ದಾರೆ ಎಂದು ಯುಟ್ಯೂಬ್ ಚಾನೆಲ್‌ ಒಂದರಲ್ಲಿ ಡಾ. ವೆಂಕಟ್ (Dr. Venkat Rao) ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಮಂತಾ ಸ್ಟೈಲಿಶ್ ಪ್ರೀತಂ ಸಲಿಂಗ ಕಾಮಿಯಂತೆ! ನಟಿ ಶ್ರೀರೆಡ್ಡಿ ಮತ್ತೆ ವಿವಾದಿತ ಹೇಳಿಕೆ

ವಿಚ್ಛೇದನ (Divorce) ನಂತರ ಸಮಂತಾ ಎಲ್ಲಿ ಹೋದರೂ, ಏನೇ ಮಾಡಿದರೂ ಸುದ್ದಿಯಾಗುತ್ತಿದ್ದಾರೆ. ಹೀಗಾಗಿ ಸಮಂತಾ ಪರ್ಸನಲ್‌ ಸೆಕ್ರೇಟರಿ (PA) ಈ ವಿಚಾರಗಳ ಬಗ್ಗೆ ತುಂಬಾನೇ ಗಮನ ಹರಿಸುತ್ತಿದ್ದಾರೆ. ತಮ್ಮದೇ ಬಟ್ಟೆ ಬ್ರ್ಯಾಂಡ್‌ (Saki) ಎಕ್ಸಪ್ಯಾಂಡ್ ಮಾಡಲು ನೋಡುತ್ತಿರುವ ಸಮಂತಾ ಇದೀಗ ಸೋಷಿಯಲ್ ಇಮೇಜ್ ಮೇಂಟೇನ್‌ ಮಾಡಲು ಮುಂದಾಗಿದ್ದಾರೆ. ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಇದೀಗ ಡಾ.ವೆಂಕಟ್ ವಿರುದ್ಧವೂ ದೂರು (Complaint) ದಾಖಲು ಮಾಡಿದ್ದಾರೆ.

Telugu Samantha files defamation case Dr Venkat Rao asks sorry vcs

'ಸಮಂತಾ ವೈಯಕ್ತಿಕ ಜೀವನದ (Personal Life) ಬಗ್ಗೆ ತಾವು ತಪ್ಪು ಮಾಹಿತಿ ಹಂಚಿಕೊಂಡಿರುವೆ. ಇದು ನನ್ನ ಬೇಜವಾಬ್ದಾರಿತನ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಮಾಹಿತಿಯನ್ನು ಸಂಗ್ರಹಿಸಿ ನಾನು ಮಾತನಾಡಿರುವೆ. ಸಮಂತಾ ಅಭಿಮಾನಿಗಳು ಡಾ.ವೆಂಕಟ್ ರಾವ್ ಅವರು ಹಿರಿಯರು ಎಂದು ಗೊತ್ತಿದ್ದರೂ, ಕೆಟ್ಟದಾಗಿ ರುಬ್ಬುತ್ತಿದ್ದಾರೆ. ಕ್ಷಮಿಸಿ,' ಎಂದು ವರಸೆ ಬದಲಾಯಿಸಿ ವೈದ್ಯರು ಮಾತನಾಡಿದ್ದಾರೆ. 

ವಿಚ್ಛೇದನ ನಂತರ ರಿಷಿಕೇಶ್‌ ಆಶ್ರಮ ಸೇರಿಕೊಂಡ್ರಾ ನಟಿ ಸಮಂತಾ!

ಡಾ.ವೆಂಕಟ್ ರಾವ್ ವೃತ್ತಿಯಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್ (Gastroenterologist). ಯುಟ್ಯೂಬ್ ವಿಡಿಯೋ ಆರಂಭಿಸಿ, ರಾಜ್ಯದಲ್ಲಿ ಆಗುವ ಆಗುಹೋಗು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ವೆಂಕಟ್ ಯುಟ್ಯೂಬ್ ಚಾನೆಲ್ (Youtube Channel) ಹಾಗೂ ಮತ್ತೊಂದು ಚಾನೆಲ್ ವಿರುದ್ಧ ದೂರು ದಾಖಲಿಸಿ, ಕೋರ್ಟ್‌ (Hyderabad court) ಮೆಟ್ಟಿಲೇರಿದ್ದರು. ಯುಟ್ಯೂಬ್ ಮಾಲೀಕರು ಪಬ್ಲಿಕ್‌ ಮಾಧ್ಯಮಗಳಲ್ಲಿ ಕ್ಷಮೆ ಕೇಳುವಂತೆ ಕೋರ್ಟ್ ಹೇಳಿತ್ತು. ಹೀಗಾಗಿ ವೆಂಕಟ್ ಕ್ಷಮೆ ಕೇಳಿ ಸಮಂತಾ ಬಗ್ಗೆ ಅಪ್ಲೋಡ್ ಮಾಡಿದ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಟ ನಾಗಚೈತನ್ಯರನ್ನು ವರಿಸಿದ್ದ ಸಮಂತಾ, ಹಲವು ತಿಂಗಳ ಊಹಾಪೋಹಗಳ ನಂತರ ವಿಚ್ಚೇದನ ನೀಡುತ್ತಿರುವುದಾಗಿ ಅಕ್ಟೋಬರ್ 2ರಂದು ಘೋಷಿಸಿದರು. ಆ ನಂತರ ಈ ಜೋಡಿ ಬೇರೆಯಾಗಲು ಕಾರಣಗಳನ್ನು ಹೇಳಿ, ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಮೊದ ಮೊದಲು ಮೌನವಾಗಿಯೇ ಇದ್ದ ಸಮಂತಾ, ಯಾವಾಗ ಎಲ್ಲೆ ಮೀರಿ ಗಾಳಿ ಸುದ್ದಿಗಳು ಹರಡಲು ಆರಂಭಿಸಿದವೋ ಆಗ ಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿ ಕೋರ್ಟ್‌ಗೆ ಆಗ್ರಹಿಸಿದ್ದರು. ಮಾನ ನಷ್ಟ ಮೊಕದ್ದಮೆಯನ್ನೂ ದಾಖಲಿಸಿದ್ದರು. ಸಮಂತಾ ಕಾನೂನು ಕ್ರಮಕ್ಕೆ ಹೆದರಿ, ಇದೀಗ ಕೆಲವು ಯೂಟ್ಯೂಬ್ ಚಾನೆಲ್‌ಗಳು ಕ್ಷಮೆ ಕೋರುತ್ತಿವೆ.

Follow Us:
Download App:
  • android
  • ios