Asianet Suvarna News Asianet Suvarna News

ಚಿರಂಜೀವಿ, ಪವನ್ ಕಲ್ಯಾಣ್‌ ಗುರುತು ನಿನಗಿದ್ಯಾ?; ನಾಗ ಬಾಬುಗೆ ಕೋಟ ಶ್ರೀನಿವಾಸ್ ರಾವ್ ಪ್ರಶ್ನೆ

 ಹಿರಿಯ ಕಲಾವಿದರ ಕಾಲೆಳೆದ ನಾಗ ಬಾಬು. ಮಾ ಎಲೆಕ್ಷನ್ ವೇಳೆ ಆಡಿದ ಮಾತುಗಳಿಗೆ ಈಗ ಉತ್ತರ ಕೊಟ್ಟ ಶ್ರೀನಿವಾಸ್ ರಾವ್... 
 

Telugu Kota Srinivas Rao questions Naga Babu identity  vcs
Author
Bangalore, First Published Oct 23, 2021, 5:04 PM IST
  • Facebook
  • Twitter
  • Whatsapp

ತೆಲುಗು ಚಿತ್ರರಂಗದಲ್ಲಿ (Tollywood) ಮನೋರಂಜನೆ ಮಾತುಗಳಿಗಿಂತ ರಾಜಕೀಯ (Political) ಮಾತುಗಳು ಹೆಚ್ಚಾಗುತ್ತಿವೆ. ಮಾ (MAA) ಎಲೆಕ್ಷನ್‌ ಸೋಲು ,ಗೆಲುವಿನಿಂದ ಅದೆಷ್ಟೋ ಹಿರಿಯ ಕಲಾವಿದರು ಬೇಸರ ಮಾಡಿಕೊಂಡಿದ್ದಾರೆ. ಕಲಾವಿದರು ಒಬ್ಬರಿಗೊಬ್ಬರ ನೋವಿಗೆ ಸ್ಪಂದಿಸಬೇಕೆಂದು ಮಾಡಿ ಕೊಂಡ ಸಂಘದ ಚುನಾವಣೆಯಿಂದ, ಒಬ್ಬರ ಮೇಲೆ ಕೆಸರೆರಚಾಟ ಮಾಡಿ ಕೊಳ್ಳುತ್ತಿದ್ದಾರೆ. ಸಿನಿಮಾ ಅವಕಾಶ ಮತ್ತು ಪ್ರೋತ್ಸಾಹ ಇದ್ದರೂ ಕೆಲವೊಬ್ಬರು ನಡೆಸುತ್ತಿರುವ ಕುತಂತ್ರದಿಂದ ಏನೆಲ್ಲಾ ಆಗುತ್ತಿದೆ ಎಂದು ಕೆಲವರು ವಿವರಿಸುತ್ತಿದ್ದಾರೆ. 

ಮಾ ಚುನಾವಣೆ ವೇಳೆ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ತಮ್ಮ ನಾಗ ಬಾಬು (Naga Babu) ಅವರು ಕೋಟಾ ಶ್ರೀನಿವಾಸ್ (Kota Srinivas Rao) ಅವರ ವ್ಯಕ್ತಿತ್ವ ಹಾಗೂ ಲೈಫ್ ಸ್ಪ್ಯಾನ್ (Life span) ಬಗ್ಗೆ ಮಾಡಿದ ಕಾಮೆಂಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಶ್ರೀನಿವಾಸ್ ಎಷ್ಟು ದಿನ ಬದುಕಬಹುದು, ಪ್ರಕಾಶ್ ರಾಜ್‌ರನ್ನು (Prakash Raj) ಪ್ರೋತ್ಸಾಹ ಮಾಡುತ್ತಿರುವ ಗುಣ ಸರಿ ಅಲ್ಲ ಎಂದಿದ್ದ ನಾಗ ಬಾಬು ಕಾಮೆಂಟ್‌ಗಳು ಕೂಡ ಪ್ರಕಾಶ್ ಸೋಲಿಗೆ ಕಾರಣವಾಗಿದೆ ಎನ್ನಬುದು. 

Telugu Kota Srinivas Rao questions Naga Babu identity  vcs

'ಇಷ್ಟೆಲ್ಲಾ ಮಾತನಾಡುತ್ತಿರುವ ನಾಗ ಬಾಬುಗೆ ಒಂದು ಪ್ರಶ್ನೆ ಕೇಳಬೇಕಿದೆ. ನಿಜಕ್ಕೂ ನಾಗ ಬಾಬು ಯಾರೆಂದು ಯಾರಿಗೂ ಗೋತ್ತಿಲ್ಲ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ (Pawan Kalyan) ಅವರೊಂದಿಗೆ ಹೊರತು ಪಡಿಸಿ, ಬಾಬು ಅವರಿನ್ನು ಬೇರೆಯಾಗಿ ನೋಡಲು ಹೇಗೆ ಸಾಧ್ಯ? ಅವರಿಗೆ ತಮ್ಮದೇ ಆದ ಐಡೆಂಟಿಟಿ (Identity) ಇಲ್ಲ,' ಎಂದು ಕೋಟ ಶ್ರೀನಿವಾಸ್ ಉತ್ತರ ನೀಡಿದ್ದಾರೆ. 

ಪ್ರಕಾಶ್ ರಾಜ್ ಪರ ನಿಂತ ಶ್ರೀನಿಜಾಗೆ ಚಪ್ಪಲಿಯಲ್ಲಿ ಹೊಡೆತೇನೆ ಎಂದ ಮೋಹನ್ ಬಾಬು ಬೆಂಬಲಿಗರು

ಕೆಲವು ದಿನಗಳ ಹಿಂದೆ ನಟಿ ಅನಸೂಯಾ ಭಾರದ್ವಾಜ್ (Anasuya Bharadwaj) ಟಿವಿ ಕಾರ್ಯಕ್ರಮವೊಂದಕ್ಕೆ ಧರಿಸಿದ್ದ ಬಟ್ಟೆ ಬಗ್ಗೆ ಕಾಮೆಂಟ್ ಮಾಡಿದ ಕೋಟ ಶ್ರೀನಿವಾಸ್ ರಾವ್‌ ಅವರಿಗೆ ಡೊಡ್ಡ ಪೋಸ್ಟ್ ಬರೆದುಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ. 'ಇದೇನಿದು? ಅನಸೂಯ ಒಳ್ಳೆ ಕಲೆ ಇರುವ ಕಲಾವಿದೆ, ನಿರೂಪಕಿ (Anchor). ವೇದಿಕೆಯ ಮೇಲೆ ಅವರ ನಡುವಳಿಕೆ, ಎಕ್ಸಪ್ರೆಶನ್ (Expression) ಎಲ್ಲವೂ ಸೂಪರ್. ಆದರೆ ಈ ಶೋಗೆ ಅವರು ಧಿರಿಸಿರುವ ಬಟ್ಟೆ ನೋಡಿ? ನನಗೆ ಇದು ಇಷ್ಟವೇ ಆಗಿಲ್ಲ.  ವೀಕ್ಷಕರ ಗಮನ ಸೆಳೆಯುವುದಕ್ಕೆ ಈ ರೀತಿ ಬಟ್ಟೆ ಧರಿಸಿರುವುದಾ?  ಸಿಂಪಲ್ ಆಗಿ ಸೀರೆ ಧರಿಸಿದ್ದರು ಪಬ್ಲಿಕ್ ಆಕೆಯನ್ನು ನೋಡುತ್ತಿತ್ತು. ಅದೇ ಕಾರ್ಯಕ್ರಮದಲ್ಲಿ ರೋಜಾ (Roja) ಇದ್ದಾರೆ ಅಲ್ವಾ? ವೀಕ್ಷಕರು ಆಕೆಯನ್ನು ಸೀರೆಯಲ್ಲಿ ನೋಡಿ ಒಪ್ಪಿಕೊಂಡಿದ್ದಾರೆ ತಾನೆ?' ಎಂದು ಶ್ರೀನಿವಾಸ್ ಪ್ರಶ್ನಿಸಿದ್ದಾರೆ. 

ತೆಲುಗು ನಟರಿಗೆ ಬುದ್ಧಿ ಕಡಿಮೆ; ವಿವಾದಾತ್ಮಕ ಹೇಳಿಕೆ ನೀಡಿದ ಕೋಟ ಶ್ರೀನಿವಾಸ್ ರಾವ್!

ಕೋಟ ಶ್ರೀನಿವಾಸ್ ಅವರ ಪ್ರಶ್ನೆಗೆ, ಕಾಮೆಂಟಿಗೆ ಅನಸೂಯ ಅವರು 'ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬೇಡದ ವಿಚಾರಗಳನ್ನು ಹೆಚ್ಚಾಗಿ ಹೈಲೈಟ್ ಮಾಡುತ್ತಿದೆ. ಈ ಹಿಂದೆ ಸೋಷಿಯಲ್ ಮೀಡಿಯಾ (Social Media) ಇದ್ದ ರೀತಿ ನೋಡಿದರೆ ಖಂಡಿತ ಯಾರೂ ಹೆಣ್ಣು ಮಕ್ಕಳ ಉಡುಪು ಬಗ್ಗೆ ಕಾಮೆಂಟ್ ಮಾಡುತ್ತಿರಲಿಲ್ಲ. ಮಾಡಿದರೂ ಇಷ್ಟು ಕೀಳಾಗಿ ಮಾಡುತ್ತಿರಲಿಲ್ಲ. ಅದರಲ್ಲೂ ಚಿತ್ರರಂಗದಲ್ಲಿರುವವರು, ಅನುಭವಸ್ಥರು ಚೀಪ್ ಕಾಮೆಂಟ್ ಮಾಡುವುದನ್ನು ನೋಡುವುದಕ್ಕೆ ಬೇಸರವಾಗುತ್ತಿದೆ. ನಮ್ಮ ಉಡುಪು ನಮ್ಮ ವ್ಯಕ್ತಿತ್ವಕ್ಕೆ ಬಿಟ್ಟಿದ್ದು. ವೃತ್ತಿ ಜೀವನದ ಕೆಲಸಗಳು ಕೆಲವೊಮ್ಮೆ ಡಿಮ್ಯಾಂಡ್ ಮಾಡುತ್ತದೆ.  ಈಗ ಸೋಷಿಯಲ್ ಮೀಡಿಯಾಗೆ ಕಾಲಿಡುತ್ತಿರುವವರನ್ನು ನೋಡಿ, ನನಗೆ ದಿನೇ ದಿನೇ ಕ್ಯೂರಿಯಾಸಿಟಿ ಹೆಚ್ಚಾಗುತ್ತಿದೆ,' ಎಂದು ಅನಸೂಯಾ ಬರೆದಿದ್ದರು. 

ನಟಿ ಅನಸೂಯ ಕೂಡ ಮಾ ಎಲೆಕ್ಷನ್‌ನಲ್ಲಿ ಸ್ಪರ್ಧಿಸಿ, ಸೋತಿದ್ದರು.

Follow Us:
Download App:
  • android
  • ios