Asianet Suvarna News

ತೆಲುಗು ನಟರಿಗೆ ಬುದ್ಧಿ ಕಡಿಮೆ; ವಿವಾದಾತ್ಮಕ ಹೇಳಿಕೆ ನೀಡಿದ ಕೋಟ ಶ್ರೀನಿವಾಸ್ ರಾವ್!

ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಹೊಸ ನಟರ ಬಗ್ಗೆ ಹಿರಿಯ ನಟ ಕೋಟ ಶ್ರೀನಿವಾಸ್ ಟೀಕೆ ಮಾಡಿದ್ದಾರೆ.

Actor Kota Srinivas Rao makes sensational comments on telugu actors vcs
Author
Bangalore, First Published Jul 14, 2021, 11:46 AM IST
  • Facebook
  • Twitter
  • Whatsapp

ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಕೋಟ ಶ್ರೀನಿವಾಸ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತೆಲುಗು  ಚಿತ್ರರಂಗಕ್ಕೆ ಆಗಮಿಸುತ್ತಿರುವ ಹೊಸ ಕಲಾವಿದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಲನ್ ಹಾಗೂ ಪೋಷಕ ನಟನಾಗಿ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರೀನಿವಾಸ್ ಹೇಳಿಕೆಯನ್ನು ಅನೇಕರು ಖಂಡಿಸಿದ್ದಾರೆ. 

'ನಮ್ಮ ತೆಲುಗು ನಟರು ಒಂದು ಚಿತ್ರಕ್ಕೆ ಬಟ್ಟೆ ಬದಲಾಯಿಸುತ್ತಾರೆ. ಆದರೆ ಅಷ್ಟೇ ವೇಗದಲ್ಲಿ ಅವರ ಬುದ್ಧಿ ಮಾತ್ರ ಬೆಳೆಯುವುದಿಲ್ಲ. ನಟನೆ ಮೇಲೆ ಯಾವುದೇ ರೀತಿಯ ಹಿಡಿತವೂ ಇಲ್ಲ ಪ್ರೀತಿಯೂ ಇಲ್ಲ. ಹಣವಿದ್ದರೆ ಸಾಕು ಎನ್ನುವವರು ಹೀರೋಗಳಾಗಿ ಬಿಡುತ್ತಾರೆ. ಇದು ತೆಲುಗು ಚಿತ್ರರಂಗದ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ,' ಎಂದು ಶ್ರೀನಿವಾಸ್ ಹೇಳಿದ್ದಾರೆ. 

ಕೆಲವು ತೆಲುಗು ಸ್ಟಾರ್ ನಟರನ್ನು ಹೊಗಳಿದ್ದಾರೆ. ಜೂನಿಯರ್ ಎನ್‌ಟಿಆರ್‌ ಯಾವುದೇ ಪಾತ್ರ ಕೊಟ್ಟರು ಅದ್ಭುತವಾಗಿ ನಟಿಸುತ್ತಾರೆ. ಯಾವುದೇ ಹಿನ್ನಲೆ ಇಲ್ಲದೆ ಬಂದ ನಟ ನಾನಿ ಕೂಡ ಸ್ವಂತ ಪ್ರತಿಭೆಯಿಂದ ಬೆಳೆದಿದ್ದಾರೆ. ಈಗಿನ ಹೊಸ ಕಲಾವಿದರಿಗೆ ಬುದ್ಧಿ ಕಡಿಮೆ, ಸಿನಿಮಾ ಪ್ರೇಮಿಗಳ ಬುದ್ಧಿ ಬೆಳೆಯುತ್ತಿದೆ. ಆದರೆ ನಮ್ಮ ನಟರ ಬುದ್ಧಿ ಬೆಳೆಯುತ್ತಿಲ್ಲ, ಎಂದು ಶ್ರೀನಿವಾಸ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಕ್ಷುರಿ ಕಾರು ಇಂಪೋರ್ಟ್ ಟ್ಯಾಕ್ಸ್ ಪ್ರಶ್ನಿಸಿದ್ದ ವಿಜಯ್‌ಗೆ 1 ಲಕ್ಷ ದಂಡ

ಶ್ರೀನಿವಾಸ್ ರಾವ್ MAA (Movie Artists Association) ಕಾಂಟ್ರವರ್ಸಿ ಬಗ್ಗೆಯೂ ಮಾತನಾಡಿದ್ದಾರೆ. ' ಯಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಅಂದ್ರೆ ಯಾಕೆ ಪ್ರೆಸ್‌ಮೀಟ್ ಮಾಡಬೇಕು? ನಡೆಯುತ್ತಿರುವ ಪ್ರತಿಯೊಂದೂ ವಿಚಾರಕ್ಕೂ ಪ್ರೆಸ್‌ ಫುಲ್ ಕವರೇಜ್‌ ನೀಡಿ ಸೆನ್ಸೇಷನ್ ಕ್ರಿಯೇಟ್ ಮಾಡಲಿ ಎಂದು ಅಲ್ವಾ? ಪ್ರೆಸ್ ಏನಾದರೂ ಇದರ ಸಮಸ್ಯೆ ನಿವಾರಿಸುತ್ತಾ?' ಎಂದು ಪ್ರಶ್ನೆ ಮಾಡಿದ್ದಾರೆ. 2018ರಲ್ಲಿ ಯುಎಸ್‌ಎನಲ್ಲಿ ನಡೆದ ಸಿಲ್ವರ್ ಜೂಬ್ಲಿ ಕಾರ್ಯಕ್ರಮಕ್ಕೆ ಬಿಡುಗಡೆ ಮಾಡಿದ್ದ  1 ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಈಗ ಜನರಲ್ ಆಗಿ ಕಂಪ್ಲೇಂಟ್ ಮಾಡಿದ್ದಾರೆ.

Follow Us:
Download App:
  • android
  • ios