Asianet Suvarna News Asianet Suvarna News

ವೈಸಮ್ಮ ದೇವಿಗೆ ವಿಸ್ಕಿ ಕುಡಿಸಿ ಮತ್ತೊಮ್ಮೆ ವಿವಾದದಲ್ಲಿ ರಾಮ್‌ ಗೋಪಾಲ್‌ ವರ್ಮಾ!

ಇದೇನ್ ಸರ್ ನೀವು ಎಣ್ಣೆ ಕುಡಿಯುತ್ತೀರಾ ಓಕೆ, ದೇವರಿಗೂ ಕೊಟ್ಟಿದ್ದೀರಾ ಯಾಕೆ? ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ ಆರ್‌ಜಿವಿ ವರಾಂಗಲ್‌ನ ಫೋಟೋ... 

Telugu director Ram gopal varma offers liquor to Warangal mysamma devi vcs
Author
Bangalore, First Published Oct 15, 2021, 2:35 PM IST
  • Facebook
  • Twitter
  • Whatsapp

ಸಿನಿಮಾ ಬಿಟ್ಟು ಬೇರೆಲ್ಲಾ ವಿಚಾರಕ್ಕೆ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ (Ram Gopal Varma) ಇದೀಗ ಮತ್ತೊಂದು ಎಡವಟ್ಟು ಕೆಲಸ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆರ್‌ಜಿವಿ ರಂಪಾಟ ನೋಡಿ ನೋಡಿ ಅಭ್ಯಾಸ ಆದವರು We donಟt care ಅಂತಾರೆ. ಆದರೆ ಹುಚ್ಚಾಟ ಜೋರಾಗುತ್ತಿದ್ದಂತೆ ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 

ಆರ್‌ಜಿವಿ ನಿರ್ದೇಶನ ಮಾಡುತ್ತಿರುವ ಹೊಸ 'ಕೊಂಡ' (Konda) ಸಿನಿಮಾ ಸಮಾರಂಭದಲ್ಲಿ ಭಾಗಿಯಾಗುವ ಮುನ್ನ ವರಾಂಗಲ್‌ಗೆ (Warangal) ತೆರಳಿ  ಅಲ್ಲಿನ ಮೈಸಮ್ಮ (Mysamma devi) ದೇವಿಗೆ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ವರ್ಮಾ ವಿಸ್ಕಿ (Whiskey) ಕುಡಿಸಿದ್ದಾರೆ. ಇದು ಮದ್ಯ ನೇವೇದ್ಯ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗುತ್ತಿದೆ. 'ನಾನು ವೋಡ್ಕಾ (Vodka) ಮಾತ್ರವೇ ಕುಡಿಯುತ್ತೇನೆ. ಆದರೆ ದೇವತೆ ಮೈಸಮ್ಮನಿಗೆ ವಿಸ್ಕಿ ಕುಡಿಸಿದೆ,' ಎಂದು ಬರೆದುಕೊಂಡಿದ್ದು, ವಿಪರೀತ ಎನ್ನುವಂತೆ ಉದ್ಧಟತನ ತೋರಿದ್ದಾರೆ.

'ಆರ್ಯನ್ ಖಾನ್ ಸೂಪರ್ ಸ್ಟಾರ್ ಮಾಡಿದ NCBಗೆ ಧನ್ಯವಾದ ಹೇಳ್ಬೇಕು'

ವರ್ಮಾಗೆ ಟ್ರೋಲ್ ಮಾಡುತ್ತಿರುವ ಕೆಲವರು ಈ ದೇವರ ಗುಡಿ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ವರಾಂಗಲ್‌ನಲ್ಲಿರುವ ಮೈಸಮ್ಮ ದೇವರಿಗೆ ಕಳ್ಳು ಅಂದರೆ ಸಾರಾಯಿ ನೈವೇದ್ಯ ನೀಡುವುದು ತೆಲಂಗಾಣ (Telangana) ರಾಜ್ಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಆಂಧ್ರ- ತೆಲಂಗಾಣದಲ್ಲಿ (Andrapradesh-Telangana) ಈ ಸಂಪ್ರದಾಯ ಹೆಚ್ಚಾಗಿದೆ. ಕರ್ನಾಟಕದಲ್ಲೂ (Karnataka) ಕೆಲವು ದೇವರಿಗೆ ಈ ರೀತಿ ನೈವೇದ್ಯ ಅರ್ಪಿಸಲಾಗುತ್ತದೆ. 

Telugu director Ram gopal varma offers liquor to Warangal mysamma devi vcs

ಸಮಾರಂಭದಲ್ಲಿ ವರ್ಮಾ ತಮ್ಮ ಕೊಂಡ ಚಿತ್ರದ ಬಗ್ಗೆ ಮಾತನಾಡಿದ್ದಾರೆ.  ಕೊಂಡ ಮುರುಳಿ ಮತ್ತು ಕೊಂಡ ಸುರೇಖಾ ಅವರ ಜೀವನ ಆಧರಿಸಿ ಮಾಡುತ್ತಿರುವ ಸಿನಿಮಾ 'ಕೊಂಡ'. ಭೂ ಮಾಲೀಕರ ವಿರುದ್ಧ ನಕ್ಸಲೈಟ್‌ ಚಲವಳಿ ನೋಡಿ, ಆನಂತರ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಈ ದಂಪತಿಯ ಸಾಹಸ ಬಗ್ಗೆ ವರಾಂಗಲ್‌ನಲ್ಲಿ ತಿಳಿಯದವರೇ ಇಲ್ಲ. ಇದು ಸಿನಿಮಾ ಅಲ್ಲ ಬದಲಿಗೆ ತೆಲಂಗಾಣದ ರಕ್ತ ಚರಿತ್ರೆ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.

ಉಪೇಂದ್ರಗೆ ರಾಮ್ ಗೋಪಾಲ್ ವರ್ಮಾ ಆ್ಯಕ್ಷನ್‌ಕಟ್‌!

ಒಟ್ಟಿನಲ್ಲಿ ಈ ರಾಮ್‌ಗೋಪಾಲ್ ವರ್ಮಾ ಎಂಬ ಚಿತ್ರ ನಿರ್ದೇಶಕ ತಮ್ಮ ಚಿತ್ರಗಳಿಗಿಂತಲೂ ವಿವಾದಾತ್ಮಕ ನಡೆಗಳಿಂದಲೇ ಸದಾ ಸುದ್ದಿಯಾಗುತ್ತಿರುತ್ತಾರೆ. ದೇವರಿಗೆ ಸಂಪ್ರದಾಯದಂತೆ ಕಳ್ಳು ಅರ್ಪಿಸಿದರೆ ಓಕೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಉತ್ಪ್ರೇಕ್ಷೆ ಮಾಡಿ ಹಾಕಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆರ್ಯನ್ ಖಾನ್ ಬಂಧನದ ನಂತರ ಎನ್‌ಸಿಬಿ ಶಾರೂಖ್ ಮಗನನ್ನು ದೊಡ್ಡ ಹೀರೋ ಮಾಡಿದೆ ಎಂದಿದ್ದರು. ಅಲ್ಲದೇ ಇತ್ತೀಚೆಗೆ ನಟಿಯಬರಿಬ್ಬರ ಮಧ್ಯೆ ಮದ್ಯದ ಕಪ್ ಹಿಡಿದು, ನಶೆಯಲ್ಲಿ ಹೆಜ್ಜೆ ಹಾಕಿದ ವೀಡಿಯೋ, ಸಕತ್ತೂ ಸದ್ದು ಮಾಡಿತ್ತು. ಟಾಲಿವುಡ್ ಸ್ಪೆಷಲ್ ಕಪಲ್ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ ಬ್ರೇಕ್ ಮಾಡಿದರೂ, ಅಂತೂ ನಾಗ ಚೈತನ್ಯಗೆ ಈಗ ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಮೂಲಕ ಸುದ್ದಿಯಾಗಿದ್ದರು. ಒಟ್ಟಿನಲ್ಲಿ ದೇಶದಲ್ಲಿ ಏನೇ ಘಟನೆ ನಡೆದರೂ ಬಾಲಿವುಡ್ ಕ್ವೀನ್ ಕಂಗನಾ ಒಂದು ರೀತಿ ರಿಯಾಕ್ಟ್ ಮಾಡಿದರೆ, ಈ ರಾಮ್ ಗೋಪಾಲ್ ವರ್ಮಾ ಮತ್ತೊಂದು ರೀತಿ ಪ್ರತಿಕ್ರಿಯೆ ನೀಡುವ ಮೂಲಕ ಸದಾ ಸದ್ದು ಮಾಡುತ್ತಿರುತ್ತಾರೆ.

Follow Us:
Download App:
  • android
  • ios