ಹೈದರಾಬಾದ್ (ಡಿ.20):  ಟಾಲಿವುಡ್‌ ಸಿನಿ ಪ್ರೇಮಿಗಳ ಮನಗೆದ್ದ ಖ್ಯಾತ ಹಾಸ್ಯ ನಟ ಅಲಿ  ಅವರ ತಾಯಿ ಜೈತುನ್ ಬೀಬಿ ಅನಾರೋಗ್ಯದಿಂದ ನರಳುತ್ತಿದ್ದು ಗುರುವಾರ ಬೆಳಗ್ಗೆ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪತಿ ತೀರಿಕೊಂಡ ದಿನವೇ ನಿಧನರಾದ ದಿ. ಉದಯ್ ಕುಮಾರ್ ಪತ್ನಿ!

ಸಿನಿಮಾವೊಂದರ ಶೂಟಿಂಗ್‌ಗೆಂದು ರಾಂಚಿಗೆ ತೆರಳಿದ್ದ ಅಲಿ ವಿಚಾರ ತಿಳಿಯುತ್ತಿದ್ದಂತೆ ಹಿಂತಿರುಗಿದ್ದಾರೆ. ರಾಜಮಂಡ್ರಿಯಿಂದ ತಮ್ಮ ಹೈದರಾಬಾದ್ ನಿವಾಸಕ್ಕೆ ಜೈತುನ್  ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು.  ಗುರುವಾರ ಸಂಜೆ ಹೈದರಾಬಾದ್‌ನಲ್ಲಿ ಅಂತ್ಯಕ್ರಿಯೆ ನಡೆದಿದೆ. 

ಕನ್ನಡ ಸೇರಿದಂತೆ 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಲಿ ಅವರು ನಟಿಸಿದ್ದಾರೆ.