Asianet Suvarna News Asianet Suvarna News

Suma Kanakala Comeback: 25 ವರ್ಷಗಳ ನಂತರ ಸಿನಿ ಕ್ಷೇತ್ರಕ್ಕೆ ಮರುಳಿದ ನಿರೂಪಕಿ!

ಮಲಯಾಳಿಯಾಗಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಇದೀಗ 25 ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. 

Telugu anchor Suma Kanakala talks about Jayamma character and comeback vcs
Author
Bangalore, First Published Dec 26, 2021, 4:53 PM IST

ಕಲಾವಿದರು ವೀಕ್ಷಕರ ಮನಸ್ಸಿಗೆ ಹತ್ತಿರ ಆಗಬೇಕು ಅಂದ್ರೆ ಮೊದಲು ಆಯ್ಕೆ ಮಾಡಿಕೊಳ್ಳುವುದು ಕಿರುತೆರೆ.  ಸಣ್ಣ ಪಾತ್ರ ಇರಲಿ, ದೊಡ್ಡ ನಿರೂಪಣೆ (Anchor) ಇರಲಿ, ಟಿವಿಯಲ್ಲಿ ಒಮ್ಮೆ ಕಾಣಿಸಿಕೊಂಡರೆ ಅವರ ನಸೀಬ್‌ ಬೇರೆ ಅನ್ನೋ ಮಾತು ಆಗಾಗ ಕೇಳಿದ್ದೀವಿ. ಮಲಯಾಳಿ (Malayali) ಆಗಿ ತೆಲುಗು (Tollywood) ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಸುಮಾ ಕನಕಲ (Suma Kanakala) ಇದೀಗ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. 

'ನಾನು ಟಿವಿ ಬೆಳವಣಿಗೆಯನ್ನು ನೋಡಿದ್ದೀನಿ, ದೂರದರ್ಶನದಿಂದ (Doordarshan) ಸ್ಯಾಟಿಲೈಟ್‌ಗೆ (Satellite) ಬದಲಾಗಿರುವುದನ್ನು ನಾನು ವರ್ಷಗಳಲ್ಲಿ ಗಮನಿಸಿದ್ದೀನಿ. ನಾನು ಸಿನಿಮಾ ಕ್ಷೇತ್ರಕ್ಕೆ ಮರುಳಲಿಲ್ಲ ಅಂದ್ರೆ ನನ್ನ ಜರ್ನಿ ಸಂಪೂರ್ಣ ಅನಿಸುವುದಿಲ್ಲ,' ಎಂದು ಹೈದರಾಬಾದ್ ಟೈಮ್ಸ್‌ ಜೊತೆ ಸುಮಾ ಮಾತನಾಡಿದ್ದಾರೆ. 

'ನಾನು ವರ್ಷಗಳಿಂದ ಸ್ಟೇಜ್ ಮೇಲೆ ಮತ್ತೆ ಬರಬೇಕು ಎಂಬ ಆಸೆ ಇತ್ತು. ಆದರೆ ಟಿವಿ (TV) ಕ್ಷೇತ್ರದಲ್ಲಿ ನಾನು ಸಖತ್ ಬ್ಯುಸಿಯಾಗಿರುವೆ. ಈ ಎರಡು ವರ್ಷದ ಪ್ಯಾಂಡಮಿಕ್‌ ಅನ್ನು (Pandemic) ಗಮನಿಸಿ ಜೀವನದಲ್ಲಿ ಚಾಲೆಂಜ್‌ ಸ್ವೀಕರಿಸಲು ರೆಡಿಯಾಗಿರುವೆ. ನಾನು ಒಳ್ಳೆಯ ಸ್ಕ್ರಿಪ್ಟ್‌ (Script) ಕೇಳಿ, ಇದು ನನ್ನ ಕಮ್‌ ಬ್ಯಾಕ್ ಮಾಡುವುದಕ್ಕೆ ಸರಿ ಎಂದು ಪ್ಲ್ಯಾನ್ ಮಾಡಿದೆ. ಈ ಸಿನಿಮಾ ಮಾಡುವ processನಲ್ಲಿ ನಾನು ಮಿಡ್ 40'sನಲ್ಲಿರುವ ಹೆಂಗಸರಿಗೆ (Women) ಎಷ್ಟೊಂದು ಕಥೆ ಹೇಳಬಹುದು ಎಂದು ತಿಳಿದುಕೊಂಡೆ. ರಿಯಲಿಸ್ಟಿಕ್‌ ಕಥೆಗಳನ್ನು ನಾನು ಹೆಣ್ಣು ಮಕ್ಕಳಿಗೆ ಹೇಳಬೇಕು. ನಿರೂಪಣೆ ಮಾಡುವುದು ನನ್ನ ಆಯ್ಕೆಗಳಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತದೆ,' ಎಂದು ಸುಮಾ ಮಾತನಾಡಿದ್ದಾರೆ. 

Telugu anchor Suma Kanakala talks about Jayamma character and comeback vcs

'1996ರಲ್ಲಿ ಕಾಲೇಜ್ ಹುಡುಗಿ (College Girl) ತನ್ನ ಕನಸು ನನಸು ಮಾಡಿಕೊಳ್ಳಲು ಸೆಟ್‌ನಲ್ಲಿದ್ದಳು. ಆಗ ಹೇಳಲು ಏನೂ ಇರಲಿಲ್ಲ. ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸದ ಸಮಯದಲ್ಲಿ ಸೆಟ್‌ನಲ್ಲಿರಲು ಭಯ ಆಗುತ್ತಿತ್ತು. ಈಗ ನಾನು Older and Wiser. ನನ್ನ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುವ ಜನರ ಜೊತೆ ಕೆಲಸ ಮಾಡುವುದಕ್ಕೆ ತುಂಬಾನೇ empowering ಅನಿಸುತ್ತದೆ. ಕ್ಯಾಮೆರಾವನ್ನು (Camera) ಮತ್ತೆ ಎದುರಿಸುವುದಕ್ಕೆ ಸಂತೋಷವಾಗುತ್ತದೆ. ಈಗ ತುಂಬಾನೇ ಬದಲಾಗಿದ್ದೀನಿ. ನಾನು ಕ್ಯಾಮೆರಾ ಎದುರಿಸುವ ರೀತಿಯಲ್ಲಿ ಮೆಚ್ಯೂರಿಟಿ (Maturity) ಕಾಣಿಸುತ್ತದೆ, ನಟನೆಯಲ್ಲಿ ಕೂಡ,' ಎಂದಿದ್ದಾರೆ ಸುಮಾ.

Deepika Das Warning: ನನ್ನ ವೈಯಕ್ತಿಕ ಜೀವನ ನಿಮ್ಮ ಬ್ಯುಸಿನೆಸ್‌ ಅಲ್ಲ ಎಂದ ನಟಿ!

'ನಾನು ತೆಲಗು ಭಾಷೆಯನ್ನು ಸೂಪರ್ ಆಗಿ ಮಾತನಾಡುತ್ತೀನಿ. ಆದರೆ ಸಿನಿಮಾಗಾಗಿ ನಾನು Srikakulam yasa (dialect) ಮಾತನಾಡಬೇಕಿದೆ. ಇಡೀ ಸ್ಕ್ರಿಪ್ಟ್‌ ನನ್ನ ಮಡಿಲಿನಲ್ಲಿದೆ, ಮೊನಾಟನಿ (Monotony) ಬ್ರೇಕ್ ಮಾಡಬೇಕು ಎಂದು ನಾನು ಮನಸ್ಸು ಮಾಡಿರುವೆ. ನನ್ನ ಕ್ಯಾರೆಕ್ಟರ್ ಜಯಮ್ಮ (Jayamma) ತುಂಬಾನೇ ಬೋಲ್ಡ್, ಒಂದು ಒಳ್ಳೆಯ ಉದ್ದೇಶಕ್ಕೆ ಫೈಟ್ ಮಾಡುತ್ತಾಳೆ. ತುಂಬಾನೇ ಚಾಲೆಂಜಿಂಗ್ ಆಗಿದ್ದು, ಏನೆಂದರೆ ನಾವು Sync soundನಲ್ಲಿ ಕೆಲಸ ಮಾಡಿದ್ದೇವೆ. ಡಬ್ಬಿಂಗ್ (Dubbing) ಮಾಡುವ ಸಮಯದಲ್ಲಿ ನಾನು ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶಗಳೇ ಇರಲಿಲ್ಲ. ಲೋಕಲ್ ಜನರ ಜೊತೆ ಚಿತ್ರೀಕರಣ ಮಾಡಿದಕ್ಕೆ ತುಂಬಾನೇ ಸುಲಭವಾಯ್ತು,' ಎಂದು ಸುಮಾ ಹೇಳಿದ್ದಾರೆ.

Ashwini Puneeth Rajkumar: ಅಪ್ಪು ಪಡೆದುಕೊಂಡಿದ್ದ ಅಡ್ವಾನ್ಸ್‌ ಹಣವನ್ನು ಹಿಂದಿರುಗಿಸಿದ ಪತ್ನಿ!

'ತೆಲುಗು ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾಗಳನ್ನು ಜನರು ನೋಡುವ ರೀತಿ ಬದಲಾಗಿದೆ. ವಯಸ್ಸಿನ ಹುಡುಗಿಯರಿಗೆ ಮಾತ್ರ ಒಳ್ಳೆಯ ಪಾತ್ರ ಸಿಗುತ್ತದೆ ಎನ್ನುವಂತಿಲ್ಲ. ಓಟಿಟಿ (OTT) ಕ್ಷೇತ್ರಗಳೂ ದೊಡ್ಡ ಬದಲಾವಣೆ ತಂದಿದೆ. ಜೈ ಭೀಮಾ (Jai Bhima) ಮತ್ತು ಗಂಗುಬಾಯ್ (Gangubai) ಪಕ್ಕಾ ಕಮರ್ಷಿಯಲ್ ಸಿನಿಮಾಗಳು.ಈಗಿನ ಕಾಲದಲ್ಲಿ ಮಹಿಳೆಯರಿಗೆ ಒಳ್ಳೆಯ ಕಥೆ ಬರೆಯುವುದು ಕಷ್ಟವಲ್ಲ. ಮಹಿಳೆಯರನ್ನು  damsels-in-distresses ರೀತಿ ತೋರಿಸುವುದನ್ನು ನಿಲ್ಲಿಸಿ ಅವರಿಗೆ ಇನ್ನೂ ಹೆಚ್ಚಿನ ಗಟ್ಟಿ ಪಾತ್ರ ನೀಡಬೇಕು,' ಎಂದಿದ್ದಾರೆ.

Follow Us:
Download App:
  • android
  • ios