ಎರಡನೇ ಮದುವೆ ಕಷ್ಟ ಆದರೆ ನನಗೂ ಸಂಗಾತಿ ಬೇಕು: ನಟಿ ಪ್ರಗತಿ ಹೇಳಿಕೆ ವೈರಲ್
2ನೇ ಮದುವೆ ಬಗ್ಗೆ ಮೌನ ಮುರಿದ ಖ್ಯಾತ ನಟಿ ಪ್ರಗತಿ. ಪವಿತ್ರಾ ಲೋಕೇಶ್ ಈ ಟ್ರೆಂಡ್‌ಗೆ ಕಾರಣ ಎಂದು ಟಾಂಗ್ ಕೊಟ್ಟ ನೆಟ್ಟಿಗರು...

ತೆಲುಗು ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡಿರುವ ಪ್ರಗತಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆದ ನಂತರ ಸಮಾಜ ಆಗು ಹೋಗುಗಳ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾರೆ. ನಟಿ ಪವಿತ್ರಾ ಲೋಕೇಶ್ ಮೂರನೇ ಮದುವೆ ವಿಚಾರ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ನಾನು ಮದುವೆ ಆಗಬೇಕು ನನಗೂ ಸಂಗಾತಿ ಬೇಕು ಎಂದು ನೀಡಿರುವ ಹೇಳಿಕೆ ವೈರಲ್ ಅಗುತ್ತಿದೆ.
'ಪ್ರಯಾಣದಲ್ಲಿ ನಾನು ತುಂಬಾ ಆವೇಶ ಮತ್ತು ಈಗೋ ಹೊಂದಿದ್ದೆ ಎಂದು ಚಿಕ್ಕ ವಯಸ್ಸಿನಲ್ಲಿ ಮದುವೆ ಆಗಿದ್ದೆ. ಒಂದು ತಪ್ಪಿನಿಂದ ಹೊರ ಬರುವುದು ಅಷ್ಟು ಸುಲಭವಲ್ಲ. ನಾಯಕಿಯಾಗಿ ನಟಿಸುತ್ತಿದ್ದೆ, ವೃತ್ತಿ ಜೀವನದ ಪೀಕ್ ಸಮಯದಲ್ಲೇ ಮದುವೆ ಆದೆ. ಅದರಿಂದ ನಾನು ಸಾಕಷ್ಟು ಕಳೆದುಕೊಂಡೆ' ಎಂದು ಪ್ರಗತಿ ಮಾತನಾಡಿದ್ದಾರೆ.
'ಈಗ ಪೋಷಕ ನಟಿಯಾಗಿ ಶ್ರಮಿಸುತ್ತಿರುವ ರೀತಿಯಲ್ಲಿಯಲ್ಲಿ ನಾಯಕಿಯಾಗಿದ್ದಾಗ ಶ್ರಮ ಹಾಕಿ ಕೆಲಸ ಮಾಡಿದ್ದರೆ ನನ್ನ ಲೈಫ್ ಸೂಪರ್ ಆಗಿರುತ್ತಿತ್ತು ಬೇರೆ ತರ ಇರುತ್ತಿತ್ತು. ಪ್ರೈಮ್ ಸಮಯದಲ್ಲಿ ಮದುವೆ ಮಕ್ಕಳನ್ನು ಮಾಡಿಕೊಂಡು ತಪ್ಪು ನಿರ್ಧಾರ ತೆಗೆದುಕೊಂಡೆ. ಈಗ ನೋಡಿ ನಾನು ಟಿವಿಯಲ್ಲಿ ಕ್ಯಾರೆಕ್ಟರ್ ರೂಲ್ ಮಾಡುವ ಪರಿಸ್ಥಿತಿ ಬಂದಿದೆ. ಮದುವೆ ವಿಚಾರದಲ್ಲಿ ನಾನು ಹೇಳುವುದು ಒಂದೇ ಮದುವೆ ಆಗುವುದಕ್ಕಿಂತ ಮಿಗಿಲಾಗಿ ಬಾಳಿಗೆ ಸಂಗಾತಿ ಬೇಕು. ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಕಷ್ಟ. ಕೆಲವೊಂದು ವಿಚಾರದಲ್ಲಿ ನಾನು ನಿರ್ದಿಷ್ಟ ಇದಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವೆ. ಈಗ ಮತ್ತೊಬ್ಬರ ಆಗಮನದಿಂದ ನಾನು ಬದಲಾಗಬೇಕು ಅಂದ್ರೆ ಕಷ್ಟ. ಬದಲಾವಣೆ ಬಿಡಿ ಹೊಂದಿಕೊಳ್ಳುವುದು ಕಷ್ಟ. ಹೊಂದಿಕೊಂಡು ಜೀವನ ಮಾಡುವ ಬದಲು ನಾನು ಒಂಟಿಯಾಗಿ ಜೀವನ ನಡೆಸುವೆ' ಎಂದು ಪ್ರಗತಿ ಹೇಳಿದ್ದಾರೆ.
1994ರಲ್ಲಿ ನಾಯಕಿಯಾಗಿ ಪ್ರಗತಿ ಬಣ್ಣದ ಜರ್ನಿ ಆರಂಭಿಸಿದ್ದರು. 1997ರ ವರೆಗೂ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆನಂತರ ಮದುವೆ- ಮಕ್ಕಳು ಮಾಡಿಕೊಂಡು ಪರ್ಸನಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟರು. ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಬಾಬಿ ಸಿನಿಮಾ ಮೂಲಕ ಬೆಳ್ಳಿ ತೆರೆ ಕಮ್ ಬ್ಯಾಕ್ ಮಾಡಿದ್ದರು. 29ನೇಯ ವಯಸ್ಸಿಗೆ ಕಮ್ ಬ್ಯಾಕ್ ಮಾಡಿದ್ದರು ಪೋಷಕಿ ಪಾತ್ರ ಸಿಗುತ್ತಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು.
ಲಿಪ್ ಕಿಸ್ ವಿಡಿಯೋ ಮೂಲಕ ಮದುವೆ ಸುದ್ದಿ ಬಹಿರಂಗ ಪಡಿಸಿದ ಪವಿತ್ರಾ ಲೋಕೇಶ್-ನರೇಶ್
ಮದುವೆ ಮುರಿಯಲು ಕಾರಣವೇನು?
ಪ್ರಗತಿ ಪತಿಗೆ ಸರಿಯಾಗಿ ಕೆಲಸವಿರಲಿಲ್ಲ ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡರು. ಇದರಿಂದ ವೈಯಕ್ತಿಕ ಜೀವನ ಹಾಳಾಗುತ್ತಿದ್ದ ಕಾರಣ ವಿಚ್ಛೇದನ ಪಡೆದುಕೊಂಡರು ಎನ್ನಲಾಗಿದೆ. 'ಈಗ ನನ್ನ ಮಕ್ಕಳು ನನ್ನ ಪ್ರಪಂಚ. ವೃತ್ತಿ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ದೊಡ್ಡವರಾಗಿದ್ದಾರೆ. ಇದು ನನಗೆ ನಿಜವಾದ ಯಶಸ್ಸು. ನನ್ನ ತಾಯಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು ನಾನು ಅವರಂತೆ ಒಂಟಿಯಾಗಿ ಜೀವನ ನಡೆಸಬಾರದು ಎಂದು ನನ್ನ ಗಂಡನ ಜೊತೆ ಮಾತನಾಡಿ ಸಮಸ್ಯೆ ಸರಿ ಮಾಡಲು ಪ್ರಯತ್ನ ಪಟ್ಟರು ಆದರೆ ಆಗಲಿಲ್ಲ ಅವರ ಶ್ರಮಕ್ಕೆ ಬೆಲೆ ಇಲ್ಲ. ಹೀಗಾಗಿ ನಾನು ಡಿವೋರ್ಸ್ ಪಡೆದುಕೊಂಡೆ.' ಎಂದಿದ್ದರು ಪ್ರಗತಿ.