ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿದ ನಟಿ ಕಾವ್ಯಾ ತಾಪರ್ ಕಂಬಿ ಹಿಂದೆ. ನಡೆದ ಘಟನೆ ಏನು? 

ತೆಲುಗು (Tollywood), ತಮಿಳು (Kollywood) ಮತ್ತು ಹಿಂದಿ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ತಾಪರ್‌ (Kavya Thapar) ಇದೀಗ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಮೋಜು ಮಸ್ತಿ ಮಾಡಲು ಹೋಗಿ ನಟಿ ತಮ್ಮ ಕೈಯಾರೆ ತಮ್ಮ ಜೀವನ ಹಾಳು ಮಾಡಿಕೊಂಡಿದ್ದಾರೆ. ಎಲ್ಲಿ ನೋಡಿದರೂ ಕಾವ್ಯಾದ್ದೇ ಸುದ್ದಿ.

ಏನಿದು ಘಟನೆ: 

ಫೆವ್ರಬರಿ 17ರಂದು ನಟಿ ಕಾವ್ಯಾ ತಾಪರ್ ಸ್ನೇಹಿತರ ಜೊತೆ ಕುಡಿದು ಪಾರ್ಟಿ (Drinks Party) ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ತಡರಾತ್ರಿ ವೇಗವಾಗಿ ಕಾರು (Car) ಚಲಾಯಿಸಿಕೊಂಡು ಜುಹು (Juhu) ಏರಿಯಾದಲ್ಲಿ ನಿಂತಿದ್ದ ಕಾರೊಂದಕ್ಕೆ ಗುದ್ದಿದ್ದಾರೆ. ಹಾಗೇ ಸ್ಥಳದಲ್ಲಿದ್ದ ಪಾದಾಚಾರಿಗೂ ಗುದ್ದಿದ್ದಾರೆ. ಪಾದಾಚಾರಿಗೆ ಬಲವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಾರ್ವಜನಿರ ಎದುರೇ ಪೊಲೀಸರಿಗೆ (Police) ಅವಾಚ್ಯಾವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಮಾಡಿರುವುದು ಒಂದು ಹೆಣ್ಣು ಎಂದು ತಿಳಿಯುತ್ತಿದ್ದಂತೆ ಮತ್ತೊಂದು ವಾಹನದಲ್ಲಿ ಮಹಿಳಾ ಪೊಲೀಸರು (Lady Police) ಆಗಮಿಸಿದ್ದಾರೆ. ಕಾವ್ಯಾರನ್ನು ಪ್ರಶ್ನೆ ಮಾಡಿದ ಮಹಿಳಾ ಪೊಲೀಸ್‌ ಒಬ್ಬರ ಕೊರಳು ಪಟ್ಟಿ ಹಿಡಿದುಕೊಂಡು ಜಗಳ ಮಾಡಿದ್ದಾರೆ. ಇನ್ನಿತರ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಹೀಗಾಗಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. 

Blue Beer: ಚಿಯರ್ಸ್‌..ಮದ್ಯ ಪ್ರಿಯರಿಗೆ ಕಿಕ್‌ ಏರೋದು ಗ್ಯಾರಂಟಿ

ಕುಡಿದು ಕಾರು ಚಲಾಯಿಸಿರುವುದು, ನಿಂತಿದ್ದ ಕಾರಿಗೆ ಗುದ್ದಿರುವುದು, ಪಾದಾಚಾರಿಗೆ ಗುದ್ದಿರುವುದು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಷ್ಟು ಸೇರಿಸಿ ನಟಿ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಕಂಬಿ ಹಿಂದೆ ನಿಂತಿದ್ದಾರೆ. ಸೆಕ್ಷನ್ 353,504,427 ಗಳನ್ನು ಕಾವ್ಯಾ ಮೇಲೆ ಹಾಕಲಾಗಿದೆ.

ಮೂಲತಃ ಮುಂಬೈನವರಾದ (Mumbai)ಕಾವ್ಯಾ ಒಂದು ತಮಿಳು ಸಿನಿಮಾದಲ್ಲಿ ಹಾಗೂ ಎರಡು ತೆಲುಗು ಸಿನಿಮಾದಲ್ಲಿ, ಹಿಂದಿಯಲ್ಲಿ ಏಕ್ ಮಿನಿ ಕಥಾದಲ್ಲಿ ನಟಿಸಿದ್ದಾರೆ. ಕಡಿಮೆ ಸಿನಿಮಾ ಮಾಡಿದ್ದರೂ ಸೋಷಿಯಲ್ ಮೀಡಿಯಾ (Social Media) ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದು, ಕುಡಿದ ಮತ್ತಲ್ಲಿ ನಾನೇ ರಾಣಿ ಎನ್ನುವ ರೇಂಜ್‌ಗೆ ಮಾತನಾಡುತ್ತಿದ್ದರಂತೆ.

Home Remedies: ಗಂಟಲು ನೋವಿದೆಯೇ? ಇವನ್ನೆಲ್ಲಾ ಅವೈಡ್ ಮಾಡಿ ಸಾಕು

ಅದಲ್ಲದೆ ನಿರ್ಭಯ ಪ್ರಕರಣ ತನಿಖೆ ಮಾಡಿದ ಸ್ಕ್ವಾಡ್‌ನಲ್ಲಿ (Nirbhaya squad) ಇದ್ದ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿರುವುದಕ್ಕೆ ಇಡೀ ಪೊಲೀಸ್‌ ತಂಡ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಸ್ಥಳೀಯರು ಮಾಹಿತಿ ಕೊಟ್ಟಿರುವ ಪ್ರಕಾರ ಜೆಡ್ಬೂ ಮ್ಯಾರಿಟನ್ ಹೋಟೆಲ್‌ನ (JW Marriott hotel) ಎದುರು ಈ ಘಟನೆ ನಡೆದಿದೆ. ಕಾರಿನಲ್ಲಿ ನಟಿ ಕಾವ್ಯಾ ಮಾತ್ರವಲ್ಲದೆ ಇಬ್ಬರು ಹುಡುಗರೂ ಇದ್ದರು ಎನ್ನಲಾಗಿದೆ.

ಕಾವ್ಯಾ ಸದ್ಯಕ್ಕೆ Byculla women’s jailನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಕೋರ್ಟಿನಿಂದ ಜಾಮೀನು ಸಿಗುವವರೆಗೂ ಇಲ್ಲಿಯೇ ಇರಬೇಕಾಗುತ್ತದೆ ಎನ್ನಲಾಗಿದೆ.