Blue Beer: ಚಿಯರ್ಸ್..ಮದ್ಯ ಪ್ರಿಯರಿಗೆ ಕಿಕ್ ಏರೋದು ಗ್ಯಾರಂಟಿ
ವೀಕೆಂಡ್ ಬಂದ್ರೆ ಪಾರ್ಟಿಯೇನೋ ಆಗುತ್ತೆ. ಆದ್ರೆ ಅದೇ ಡ್ರಿಂಕ್ಸ್ (Drinks), ಬಿಯರ್ ಕುಡ್ದು ಕುಡ್ದು ಬೋರಾಗಿದ್ಯಾ. ಟೆನ್ಶನ್ ನಾಟ್. ಈ ವಾರಾಂತ್ಯದ ಪಾರ್ಟಿ ಫುಲ್ ಕಲರ್ ಫುಲ್ ಆಗಿರುತ್ತೆ. ಫಾರ್ ಎ ಚೇಂಜ್ ಬ್ಲೂ ಬಿಯರ್ (Blue Beer) ಟೇಸ್ಟ್ ಮಾಡಿ. ಪಾರ್ಟಿ (Party) ಕಿಕ್ಕೇರೋದು ಗ್ಯಾರಂಟಿ.
ಹೊಸತನ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಓಲ್ಡ್ ಟ್ರ್ಯಾಕ್‌ನಲ್ಲೇ ಓಡೋದು, ಎಲ್ರಿಗೂ ಬೇಜಾರೇ. ಹೀಗಾಗಿ ಲೈಫ್‌ನಲ್ಲಿ ಹೊಸತನಕ್ಕಾಗಿ ಎಲ್ಲರೂ ಹಾತೊರೆಯುತ್ತಿರುತ್ತಾರೆ. ಎಜುಕೇಷನ್, ಜಾಬ್ ಎಲ್ಲವನ್ನೂ ಚೇಂಜ್ ಮಾಡಿ ನೋಡುತ್ತಿರುತ್ತಾರೆ. ಹಳೆಯ ವಿಷಯಗಳಲ್ಲಿ ಹೊಸ ಟಚ್ ನೀಡಿ ಖುಷಿ ಪಡುತ್ತಾರೆ. ಮುಖ್ಯವಾಗಿ ಆಹಾರ (Food)ದಲ್ಲೂ ಹೊಸ ಹೊಸ ಎಕ್ಸಪರಿಮೆಂಟ್‌ಗಳನ್ನು ಮಾಡುವುದನ್ನು ನೋಡಬಹುದು. ಅದರಲ್ಲೂ ಫುಡ್ ಬ್ಲಾಗರ್ಸ್ ಈ ರೀತಿಯ ಆಹಾರದ ಮೇಲೆ ಪ್ರಯೋಗ ಮಾಡುವುದನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಚಾಕೋಲೇಟ್ ಮ್ಯಾಗಿ, ಐಸ್ ಕ್ರೀಂ ಮಸಾಲೆ ದೋಸೆ, ಮಿರಿಂಡಾ ಗೋಲ್ ಗಪ್ಪಾ ಹೀಗೆ ಅದೆಷ್ಟೋ ಆಹಾರಗಳ ಎಕ್ಸಪರಿಮೆಂಟ್ ವೈರಲ್ ಆಗಿದೆ.
ಸದ್ಯ ನಾವ್ ಹೇಳ್ತಿರೋದು ಆಹಾರದ ಬಗ್ಗೆ ಅಲ್ಲ. ಡ್ರಿಂಕ್ಸ್ (Drinks) ಬಗ್ಗೆ. ಫುಡ್ ಅಲ್ಲೇನೋ ವೆರೈಟಿ ಬರುತ್ತೆ. ಆದ್ರೆ ಡ್ರಿಂಕ್ಸ್ ಮಾತ್ರ ಅದೇ ಅಲ್ವಾ ಅನ್ನೋರಿಗೆ ಇಲ್ಲಿದೆ ಕಿಕ್ಕೇರಿಸೋ ಸುದ್ದಿ. ಬಿಳಿ, ರೆಡ್ ಕಲರ್ ವೈನ್ ಕುಡಿದು ಬೋರಾದವರಿಗೆ ಬ್ಲೂ ಕಲರ್ ಬಿಯರ್ ಸಿದ್ಧವಾಗಿದೆ. ಇದು ನಾಲಗೆಗೂ ಹೊಸದು, ಕಣ್ಣಿಗೂ ಹೊಸದು. ಹೀಗಾಗಿ ವೀಕೆಂಡ್ ಪಾರ್ಟಿ ಕಲರ್ ಫುಲ್ ಆಗೋದು ಪಕ್ಕಾ.
ಬಿಯರ್ ಮೆಡಿಟೇಷನ್ ಮಾಡೋದು ಹೇಗೆ ಗೊತ್ತೆ?
ನಶೆ ಏರಿಸುವ ನೀಲಿ ಬಿಯರ್ !
ಬಿಯರ್ ಅಂದಾಗ ಬಿಳಿ, ಕೆಂಪು ಅಷ್ಟೇ ಬಣ್ಣ ಎಂಬುದನ್ನು ಬಿಟ್ಟು ಇಲ್ಲೊಂದು ಮದ್ಯದಂಗಡಿ ಹೊಸ ಎಕ್ಸಮರಿಮೆಂಟ್ ಮಾಡಿದೆ. ಸೇಮ್ ಕಲರ್ ಕುಡಿದು ಬೋರಾಯ್ತು ಅನ್ನೋರಿಗೆ ನೀಲಿ ಬಣ್ಣದ ಬಿಯರ್‌ನ್ನು ಪರಿಚಯಿಸಿದೆ. ಫ್ರೆಂಚ್‌ನ ಲೈನ್ ಎಂಬ ಬ್ರ್ಯಾಂಡ್ ನೀಲಿ ಬಣ್ಣದ ಬಿಯರ್‌ನ್ನು ಪರಿಚಯಿಸಿದೆ. ನಾರ್ಮಲ್ ಆಗಿರುವ ಬಿಯರ್ ಬಣ್ಣವನ್ನು ಬದಲಾಯಿಸುವ ಸಲುವಾಗಿ ಇದಕ್ಕೆ ನೈಸರ್ಗಿಕ ಬಣ್ಣವನ್ನೇ ಬಳಸಲಾಗುತ್ತಿದೆ. ಪಾಚಿ ಹಾಗೂ ಹಾವಸೆಯನ್ನು ಬಳಸಿ ಬ್ಲೂ ಬಿಯರ್ (Blue Beer) ಸಿದ್ಧಪಡಿಸಲಾಗುತ್ತದೆ. ಹಾವಸೆ ಅಥವಾ ಪಾಚಿಯನ್ನು ಆಹಾರ ಪೂರಕವಾಗಿ ಜನಪ್ರಿಯಗೊಳಿಸಲು ಬಯಸುತ್ತಿದ್ದ ಸಂಸ್ಥೆಯೊಂದಕ್ಕೆ ಬಿಯರ್ ಅಂಗಡಿ ಅವಕಾಶ ನೀಡಿದೆ. ಮದ್ಯವನ್ನು ಆಕರ್ಷಕವಾಗಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ ಮದ್ಯದಂಗಡಿ ಈ ಒಪ್ಪಂದಕ್ಕೆ ಒಪ್ಪಿಕೊಂಡಿದೆ. ಅದರ ಪರಿಣಾಮ ಸದ್ಯ ನೀಲಿ ಬಿಯರ್ ತಯಾರು ಮಾಡಲು ಆರಂಭಿಸಿದ್ದು, ಹೆಚ್ಚು ಜನಪ್ರಿಯವಾಗಿದೆ.
ಹಾಪಿ ಅರ್ಬಲ್ ಬ್ರ್ಯೂ ಹೆಸರಿನಲ್ಲಿ ಸದ್ಯ ಈ ನೀಲಿ ಬಿಯರ್ ಉತ್ತಮವಾಗಿ ಮಾರಾಟವಾಗುತ್ತಿದೆ ಎಂದು ಪಾನೀಯವನ್ನು ತಯಾರಿಸುವ ಹಾಪಿ ಅರ್ಬನ್ ಬ್ರ್ಯೂ ಸಂಸ್ಥೆಯ ಉದ್ಯೋಗಿ ಸೆಬಾಸ್ಟಿಯನ್ ವರ್ಬೆಕ್ ಹೇಳಿದ್ದಾರೆ. ಇದು ಸಾರ್ವಜನಿಕರ ಕಡೆಯಿಂದ ಅಪಾರ ಪ್ರಮಾಣದ ಆಸಕ್ತಿ ಮತ್ತು ಕುತೂಹಲವನ್ನು ಪಡೆಯುತ್ತಿದೆ’ ಎಂದು ತಿಳಿಸಿದ್ದಾರೆ.
Beer For Hair: ಬಿಯರ್ ಬಳಸಿದ್ರೆ ಕೂದಲು ಸಾಫ್ಟ್ ಆಗುತ್ತೆ ಅಂತಾರೆ..ನಿಜಾನ ?
ಬಿಯರ್ ನೀಲಿ ಬಣ್ಣ ಪಡೆಯೋದು ಹೇಗೆ ?
ನೀಲಿ ಬಣ್ಣವು ಸ್ಪಿರುಲಿನಾದಿಂದ ಬರುತ್ತದೆ, ಇದು ಉತ್ತರ ಫ್ರಾನ್ಸ್‌ನ ಎಟಿಕಾ ಸ್ಪಿರುಲಿನಾ ಎಂಬ ಕಂಪನಿಯಿಂದ ಬೇಸಿನ್‌ಗಳಲ್ಲಿ ಬೆಳೆಯಲಾಗುತ್ತದೆ. ಫೈಕೊಸೈನಿನ್ ಎಂದು ಕರೆಯಲ್ಪಡುವ ನೀಲಿ ಬಣ್ಣವನ್ನು ನೀಡುವ ಸ್ಪಿರುಲಿನಾದ ಘಟಕವನ್ನು ನಂತರ ಬ್ರೂಯಿಂಗ್ ಪ್ರಕ್ರಿಯೆಯಲ್ಲಿ ಬಿಯರ್‌ಗೆ ಸೇರಿಸಲಾಗುತ್ತದೆ. ಈ ಮೂಲಕ ಬಿಯರ್ ಬಣ್ಣ ಸಂಪೂರ್ಣವಾಗಿ ನೀಲಿಯಾಗುತ್ತದೆ.
ಬ್ರೂವರಿ ಉದ್ಯೋಗಿ ಮ್ಯಾಥಿಲ್ಡೆ, ಪಾಚಿಗಳನ್ನು ಸೇರಿಸುವುದೇ ನೀಲಿ ಬಣ್ಣದ ಬಿಯರ್ನ ವಿಶಿಷ್ಟತೆಯಾಗಿದೆ ಎಂದು ತಿಳಿಸಿದ್ದಾರೆ. ಕ್ಸೇವಿಯರ್ ಡೆಲಾನೊಯ್, ಸಿದ್ಧಪಡಿಸಿದ ಫಾರ್ಮ್ ಸ್ಪಿರುಲಿನಾವನ್ನು ಒದಗಿಸುತ್ತದೆ, ಹಲವಾರು ಪರೀಕ್ಷಾ ಬ್ಯಾಚ್‌ಗಳ ನಂತರ, ಬ್ರೂವರಿಯು ಗ್ರಾಹಕರನ್ನು ಆಕರ್ಷಿಸುವ ಮಿಶ್ರಣವನ್ನು ಕಂಡುಕೊಂಡಿದೆ ಎಂದರು. ಕಳೆದ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ 1,500 ಬಾಟಲಿಗಳ ನೀಲಿ ಬಿಯರ್ ಮಾರಾಟವಾಗಿದೆ ಮತ್ತು ಈಗ ಬೇಡಿಕೆಯನ್ನು ಪೂರೈಸಲು ಬ್ರೂವರಿ ಉತ್ಪಾದನೆಯನ್ನು ಹೆಚ್ಚಿಸಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ.