ಟ್ವಿಟರ್‌ ಖಾತೆನೇ ಇಲ್ಲ ಫೋಟೋ ಯಾಕೆ ಲೀಕ್ ಅಯ್ತು? ನೆಟ್ಟಿಗರನ್ನು ಪ್ರಶ್ನೆ ಮಾಡಿದ ನಟಿ ಜಯವಾಣಿ..

ನಟ ರವಿತೇಜ ಜೊತೆ ವಿಕ್ರಮಾರ್ಕುಡು ಚಿತ್ರದಲ್ಲಿ ಮಾಸ್ ಮಹಾರಾಣಿ ರೀತಿ ಕಾಣಿಸಿಕೊಂಡ ಜಯವಾಣಿ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು. ಅದಾದ ಮೇಲೆ ಇದ್ದಕ್ಕಿದ್ದಂತೆ ಬಣ್ಣದ ಪ್ರಪಂಚದಿಂದ ದೂರ ಉಳಿದು ಬಿಟ್ಟರು. ಸದ್ಯಕ್ಕೆ ಮೂವಿ ಆರ್ಟಿಸ್ಟ್‌ ಸಂಘದ ಕಾರ್ಯಕಾರಿಣಿ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತುಂಬಾ ಚೆನ್ನಾಗಿರುವ ಕಥೆ ಅಥವಾ ತಮ್ಮ ಪಾತ್ರಕ್ಕೆ ಸ್ಕೂಪ್ ಇದ್ದರೆ ಮಾತ್ರ ನಟಿಸುತ್ತಿದ್ದಾರೆ. ಜಯವಾಣಿ ಬೋಲ್ಡ್‌ ಆಕ್ಟಿಂಗ್ ಈಗ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 

ಹೌದು! ಜಯವಾಣಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಅದರಲ್ಲೂ ಫೇಸ್‌ಬುಕ್‌ನಲ್ಲಿ ದೊಡ್ಡ ಅಭಿಮಾನಿ ಸಂಘವೇ ಇದೆ. ಇತ್ತೀಚಿಗೆ ಜಯವಾಣಿ ಅವರ ಬೆತ್ತಲೆ ಫೋಟೋ ಮತ್ತು ವಿಡಿಯೋ ಒಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಜಯವಾಣಿ ಹೆಸರಿನಲ್ಲಿರುವ ಟ್ವಿಟರ್‌ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಆಗಿರುವ ಕಾರಣ ಪ್ರಚಾರ ಹಣ ಮತ್ತು ಜನರಿಗೋಸ್ಕರ ಜಯವಾಣಿನೇ ಹೀಗೆ ಮಾಡಿರುವುದು ಎಂದು ನೆಟ್ಟಿಗರು ಆರೋಪ ಮಾಡಿದ್ದರು ಅಷ್ಟೆರಲ್ಲಿ ಜಯವಾಣಿ ಸ್ಪಷ್ಟನೆ ಕೊಟ್ಟಿದ್ದಾರೆ.

ಅಣ್ಣಾವ್ರ ಮೊಮ್ಮಗ ಯುವ ಜೊತೆ ಸಿನಿಮಾ ಮಾಡುವುದು ಸುಳ್ಳು: 'ಕೆಂಪೇಗೌಡ' ಸಿನಿಮಾ ಬಗ್ಗೆ ನಾಗಾಭರಣ ಸ್ಪಷ್ಟನೆ!

ವಿಚಿತ್ರ ಏನೆಂದರೆ ಈ ಟ್ವಿಟರ್‌ ಖಾತೆಗೆ ನೀಲಿ ಟಿಕ್‌ ಕೂಡ ಇತ್ತು. ಖಾತೆ ತೆರೆದ ಕೆಲವೇ ದಿನಗಳಲ್ಲಿ 17 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಇದ್ದರು. ಇದೇ ಟ್ವಿಟರ್‌ ಖಾತೆಯಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಆಗಿದೆ. ಕೆಲವು ಇದು ಜಯವಾಣಿ ಅವರೇ ಎನ್ನುತ್ತಾರೆ ಇನ್ನು ಕೆಲವರು ಮತ್ತೊಬ್ಬ ಹೆಣ್ಣಿನ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಇವ್ರು ರೀ-ಟ್ವೀಟ್ ಮಾಡಿದ್ದಾರೆ ಎನ್ನುತ್ತಾರೆ. ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿರುವ ಸುದ್ದಿಗೆ ಕ್ಲಾರಿಟಿ ನೀಡಬೇಕು ಇಲ್ಲವಾದರೆ ವೃತ್ತಿ ಜೀವನಕ್ಕೆ ಕಷ್ಟ ಎಂದು ಸ್ಪಷ್ಟನೆ ನೀಡಿದ್ದಾರೆ. 

2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

'ನನ್ನ ಬಳಿ ಟ್ವಿಟರ್‌ ಖಾತೆಯೇ ಇಲ್ಲ ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಾರೆ. ಆ ನಗ್ನ ಫೋಟೋ ನನ್ನದಲ್ಲ. ಆ ಟ್ವಿಟರ್‌ ಅಕೌಂಟ್‌ ಕೂಡ ನನ್ನದಲ್ಲ. ದಯವಿಟ್ಟು ಆ ಟ್ವೀಟ್‌ಗಳನ್ನು ನಂಬಬೇಡಿ' ಎಂದು ಜಯವಾಣಿ ಮನವಿ ಮಾಡಿಕೊಂಡಿದ್ದಾರೆ. ಈ ಕೃತ್ಯ ಮಾಡುತ್ತಿರುವವರು ತಕ್ಷಣವೇ ನಿಲ್ಲಿಸಬೇಕು ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಮತ್ತೊಂದು ತಿರುವು ಏನೆಂದರೆ ಜಯವಾಣಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಶೂರ್ಪನಖಿ ತೆಲುಗು ಭಾಷೆಯಲ್ಲಿ ನಟಿಸುತ್ತಿದ್ದಾರೆ. ಆ ಸರಣಿ ಫೋಟೋ ಕೂಡ ಆಗಿರಬಹುದು ಎನ್ನಲಾಗಿದೆ. ಒಟ್ಟಾರೆ ಎಲ್ಲವೂ ಫುಲ್ ಕನ್ಫ್ಯೂಶನ್ ಕನ್ಫ್ಯೂಶನ್....