ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್‌ ಚರಣ್‌ ಮಾತುಗಳಿದು!

ಯಶಸ್ಸಿನಲ್ಲಿ ತೇಲುತ್ತಿರುವ ನಟ ರಾಮ್‌ಚರಣ್‌ ತಮ್ಮ ಆರ್‌ಆರ್‌ಆರ್‌ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಹಾಗೇ ಪತ್ನಿ ಉಪಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

Telugu actor Ram charan talks about working with priyanka chopra and alia bhatt vcs

ಎಸ್‌ಎಸ್‌ ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ (RRR) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಮ್‌ಚರಣ್‌ (Ram Charan) ಮತ್ತು ಜ್ಯೂನಿಯರ್ ಎನ್‌ಟಿಆರ್‌ (Jr NTR) ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಕೊಡಲಿರುವ ಸಿನಿಮಾ ಇದಾಗಲಿದೆ. ಬಿಡುಗಡೆಯಾದ ಎರಡೇ ದಿನಕ್ಕೆ 230 ಕೋಟಿ ಕೆಲೆಕ್ಷನ್ ಮಾಡಿದೆ. ಸಿನಿಮಾಗೆ ಒಟ್ಟು 336 ಕೋಟಿ ಬಂಡವಾಳ ಹಾಕಲಾಗಿದ್ದು, ಒಂದೇ ವಾರದಲ್ಲಿ ನಿರ್ಮಾಪಕರು ಮತ್ತು ಇಡೀ ತಂಡ ಗೆದ್ದು ಬಿಟ್ಟಿದೆ. 

'ಸಿನಿಮಾದ ಬಗ್ಗೆ ನನಗೆ ನಂಬಿಕೆ ಇದೆ ಹಾಗೇ ತುಂಬಾ ಎಕ್ಸೈಟ್ ಆಗಿರುವೆ. ನಮ್ಮ ಶ್ರಮ ಮತ್ತು ಸಂಪೂರ್ಣ ಎನರ್ಜಿಯನ್ನು ಚಿತ್ರಕ್ಕೆ ಹಾಕಿದ್ದೀವಿ' ಎಂದು ರಾಮ್‌ಚರಣ್ ಇಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಲಿವುಡ್‌ (Bollywood) ನಟಿ ಜೊತೆ ರಾಮ್ ಅಭಿನಯಿಸುತ್ತಿರುವುದು ಇದೇನು ಮೊದಲಲ್ಲ. ಹಲವು ವರ್ಷಗಳ ಹಿಂದೆ ತೆಲುಗು ಸಿನಿಮಾದಲ್ಲಿ ಪ್ರಿಯಾಂಕಾಗೆ (Priyanka Chopra) ಜೋಡಿಯಾಗಿದ್ದರು. 'ಇಬ್ಬರಿಗೂ ತುಂಬಾನೇ ಟ್ಯಾಲೆಂಟ್‌ ಇದೆ ಹೀಗಾಗಿ ಅವರಲ್ಲಿ ಇರುವ ಒಂದು ಒಳ್ಳೆಯ ಕ್ವಾಲಿಟಿ ಬಗ್ಗೆ ಹೇಳುವುದಕ್ಕೆ ಆಗೋಲ್ಲ. ಪ್ರಿಯಾಂಕಾ ಮತ್ತು ಆಲಿಯಾ ಭಟ್‌ (Alia Bhat) ಇಬ್ಬರೂ ತುಂಬಾನೇ ಫೈನ್ ಆಂಡ್ amazing ವ್ಯಕ್ತಿಗಳು.'ಎಂದಿದ್ದಾರೆ ರಾಮ್ ಚರಣ್.

Telugu actor Ram charan talks about working with priyanka chopra and alia bhatt vcs

ರಾಜಮೌಳಿ ಅವರ ಬಾಹುಬಲಿ (Bahubali) ಸಿನಿಮಾದಿಂದ ಪ್ರಭಾಸ್‌ಗೆ (Prabhas) ವೃತ್ತಿ ಜೀವನದಲ್ಲಿ ಒಂದು ನೇಮ್ ಟ್ಯಾಗ್ ಬಂದಿತ್ತು ಆರ್‌ಆರ್‌ಆರ್‌ ಸಿನಿಮಾದಿಂದಲ್ಲೂ ನಿಮಗೆ ಒಂದು ಟ್ಯಾಗ್ ಬರಲಿದೆ ಎನ್ನುವ ನಿರೀಕ್ಷೆ ಇದ್ಯಾ ಎಂದು ಪ್ರಶ್ನೆ ಮಾಡಿಲಾಗಿತ್ತು. 'ಸಿನಿಮಾಗಿಂತ ಇದು ಸಂಪೂರ್ಣ ರಾಜಮೌಳಿ ಅವರ vision ಆಗಿರಲಿದೆ. ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಗ್ಲೋಬಲ್ ರೆಕಗ್ನಿಷನ್ ಸಿಗಲಿದೆ' ಎಂದು ರಾಮ್ ಹೇಳಿದ್ದಾರೆ. ಅಲ್ಲದೆ ಮೆಗಾ ಸ್ಟಾರ್ ಚಿರಂಜೀವಿ (Mega star Chiranjeevi) ಪುತ್ರನಾಗಿ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಹೇಗೆ ಮತ್ತು ತಂದೆ ಕೊಟ್ಟ ಸಲಹೆ ಈಗಲೂ ನೆನಪಿಸಿಕೊಳ್ಳುತ್ತಾರಂತೆ. 'ತಂದೆ ಸದಾ ಶಿಸ್ತಿನ (Discipline) ಬಗ್ಗೆ ಹೇಳುತ್ತಾರೆ. ನಾನು ಚೆನ್ನಾಗಿ ಕೆಲಸ ಮಾಡಬೇಕು ಹಾಗೂ ನೆಮ್ಮದಿಯಿಂದ ಜೀವನ ಮಾಡಬೇಕು ಎಂದು ಹೇಳುತ್ತಾರೆ ಎಂದಿದ್ದಾರೆ.

Ram Charan Birthday; ಗೆಳೆಯನಿಗಾಗಿ ಪಾರ್ಟಿ ಆಯೋಜಿಸಿದ್ದ Jr.NTR...ಕನ್ನಡದಲ್ಲಿ ಧನ್ಯವಾದ ತಿಳಿಸಿದ ಚಿರು ಪುತ್ರ

'ನಾಟು ನಾಟು (Natu Natu) ಹಾಡಿಗೆ ತುಂಬಾನೇ ಎನರ್ಜಿ ಬೇಕಿದೆ. ಎನ್‌ಟಿಆರ್‌ ಜೊತೆ ಚಿತ್ರೀಕರಣ ಮಾಡಿದ್ದು ಹಾಗೇ ಈ ಹಾಡಿಗೆ ಡ್ಯಾನ್ಸ್‌ ಮಾಡಿದ್ದು ಅದ್ಭುತ ಕ್ಷಣಗಳು. ಡ್ಯಾನ್ಸ್‌ ಅಭ್ಯಾಸ ಮಾಡುವಾಗ NTR ಎಷ್ಟು ಎನರ್ಜಿ ಹೊಂದಿರುತ್ತಾರೆ ಚಿತ್ರೀಕರಣ ಮಾಡುವಾಗಲೂ ಅಷ್ಟೇ ಎನರ್ಜಿಟಿಕ್ ಆಗಿರುತ್ತಾರೆ. ಹಾಗೆ ತೆರೆ ಮೇಲೆ ಅಜಯ್ ದೇವಗನ್‌ (Ajay Devgan) ನೋಡಿ ಖುಷಿ ಆಯ್ತು ಅವರು ಕಣ್ಣಲ್ಲೇ ಅಭಿನಯಿಸುತ್ತಾರೆ. ಅಲಿಯಾ ಜೊತೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ' ಎಂದು ಚರಣ್ ಹೇಳಿದ್ದಾರೆ.

'RRR' ಕಲೆಕ್ಷನ್; 2ನೇ ದಿನವೂ ಭರ್ಜರಿ ಗಳಿಕೆ ಮಾಡಿದ ರಾಜಮೌಳಿ ಸಿನಿಮಾ

ಇನ್ನು ರಾಮ್‌ಚರಣ್‌ ಪತ್ನಿ ಉಪಾಸನ (Upasana) ಕುಟುಂಬಸ್ಥರ ಜೊತೆ ಸಿನಿಮಾ ನೋಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social media) ಹರಿದಾಡುತ್ತಿದೆ. ಈ ವಿಡಿಯೋ ವೈರಲ್ ಆಗುವುದಕ್ಕೆ ಕಾರಣ ಏನೆಂದರೆ ಚಿತ್ರಮಂದಿರದಲ್ಲಿದ್ದ ಅಭಿಮಾನಿಗಳು ಟಿಕೆಟ್‌ನ (RRR ticket) ಸ್ಕ್ರೀನ್‌ಗೆ ಎಸೆಯುತ್ತಾರೆ ಅವರ ಸಂತಸದಲ್ಲಿ ಉಪಾಸನ ಕೂಡ ಭಾಗಿಯಾಗಿ ಆ ಟೆಕೆಟ್‌ಗಳನ್ನು ದೊಡ್ಡ ಪರದೆ ಕಡೆ ಎಸೆಯುತ್ತಾರೆ. ಪತಿಗೆ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಸಂಭ್ರಮಿಸುತ್ತಿರುವ ಕ್ಷಣ ಎಂದೂ ಮರೆಯಲಾಗದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios