ಲಾಕ್‌ಡೌನ್‌ನಲ್ಲಿ ಅಜ್ಜಿ ಜೊತೆ ಅಡುಗೆ ಮನೆಯಲ್ಲಿ ಕಾಲ ಕಳೆಯುತ್ತಿರುವ ರಾಮ್‌ ಚರಣ್. ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್....

ಅಲ್ಲಿ ಕತ್ರೀನಾ ಪಾತ್ರೆ ತೊಳೆದು, ಮನೆ, ಗುಡಿಸಿ, ಒರೆಸಿ ಮಾಡುತ್ತಿದ್ದರೆ, ಇತ್ತ ಪ್ರಿಯಾಂಕಾ ಉಪೇಂದ್ರ ಮಕ್ಕಳಿಗೆ ಅಡುಗೆ ಮಾಡಲು, ಪಾತ್ರೆ ತೊಳೆಯಲು ಹೇಳಿ ಕೊಡುತ್ತಿದ್ದಾರೆ. ಮತ್ತೊಂದೆಡೆ ಕೆಲವು ತಾರೆಯಲು ಬೀದಿಗಿಳಿದು ಪ್ರಾಣಿ-ಪಕ್ಷಿಗಳಿಗೆ ಅನ್ನ ನೀರು ಕೊಟ್ಟು ಮಾನವೀಯತೆ ತೋರುತ್ತಿದ್ದಾರೆ. ಮತ್ತೆ ಹಲವು ನಿರ್ಗತಿತಕರು, ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ಒಟ್ಟಿನಲ್ಲಿ ಭಾರತವೇ ಲಾಕ್‌ಡೌನ್ ಆಗಿದ್ದರೂ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬ್ಯುಸಿಯಾಗಿದ್ದು, ತಮ್ಮಮ್ಮ ಕೆಲಸಗಳನ್ನು ಮಾಡಿಕೊಳ್ಳುವುದನ್ನು ಕಲಿಯುತಿದ್ದಾರೆ ಎನ್ನುವುದು ಸುಳ್ಳಲ್ಲ. 

ಟಾಲಿವುಡ್‌ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ 'RRR' ಸಿನಿಮಾದ ಚಿತ್ರೀಕರಣದಲ್ಲಿ ಬ್ಯಸಿಯಾಗಿದ್ದ ರಾಮ್‌ ಚರಣ್‌ಗೆ ಲಾಕ್‌ಡೌಗ್‌ ಕೊಂಚ ರಿಲ್ಯಾಕ್ಸೇಶನ್ ನೀಡಿದೆ. ತಮ್ಮ ಬಾಲ್ಯದ ಫೋಟೋಗಳುನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡ ಚರಣ್‌ ಈಗ ಅಜ್ಜೆ ಜೊತೆ ಮೊಸರು ಕಡೆಯುತ್ತಿರುವ, ಬೆಣ್ಣೆ ತೆಗೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

'ಮಜ್ಜಿಗೆ ಮಾಡುವ ಮೊದಲು ತಾಜಾ ಬೆಣ್ಣೆ ತಯಾರಿಸಲು ಕಲಿಯುವುದು' ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಅಜ್ಜಿ ಅಂಜನಾ ದೇವಿ, ಸೊಸೆ ಜೊತೆ ಬೆಣ್ಣೆ ಕಡೆಯುತ್ತಿರುತ್ತಾರೆ. ಆ ನಂತರ ಮೊಮ್ಮಗ ರಾಮ್‌ ಕೆಲಸ ಕೈ ಜೋಡಿಸುತ್ತಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Scroll to load tweet…

ಬಿ ದ ರಿಯಲ್ ಮ್ಯಾನ್ ಎಂದ ಟಾಲಿವುಡ್

ಇನ್ನು ಲಾಕ್‌ಡೌನ್‌ ವೇಳೆ ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು #BeTheRealMan ಚಾಲೆಂಚ್‌ ನಡೆಸುತ್ತಿದ್ದಾರೆ. ಎಲ್ಲಾ ಗಂಡಸರು ಪತ್ನಿ-ತಾಯಿ ಮಾಡುವ ಮನೆಗೆಲಸಗಳನ್ನು ಹಂಚಿಕೊಳ್ಳುವುದು ಈ ಚಾಲೆಂಜ್‌ನ ವಿಶೇಷ. ಹೈದರಾಬಾದ್‌ನಲ್ಲಿ ನೆಲೆಸಿರುವ ರಾಮ್‌ ಮನೆ ನೆಲ ಒರೆಸಿ, ಗಿಡಗಳಿಗೆ ನೀರು ಹಾಕಿದ್ದಾರೆ ಆ ನಂತರ ಪತ್ನಿಗೆ ಕಾಫಿ ಮಾಡಿ ಕೊಟ್ಟಿದ್ದಾರೆ. ಈ ಸವಾಲನ್ನು ನಿರ್ದೇಶಕ ರಾಜಮೌಳಿಯೂ ಪಾಲಿಸಿದ್ದಾರೆ. ಅರೇ ಕ್ಯಾಮೆರಾ ಬಿಟ್ಟು ಪೊರಕೆ ಹಿಡಿದಿದ್ದೀರಾ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದರು. ಆಗ ರಾಜಮೌಳಿ ಇದನ್ನೂ ನೀವೂ ಪಾಲಿಸಿ ರಿಯಲ್‌ ಮೆನ್‌ ಆಗಿ ಎಂದು ಕಾಮೆಂಟ್‌ ಮಾಡಿದ್ದರು.

ಮನೆ ಕೆಲಸ ಮಾಡಿ, ಹೆಂಡತಿಗೆ ಕಾಫಿ ಮಾಡಿಕೊಟ್ಟ ಸೂಪರ್ ಸ್ಟಾರ್ ಗುರುತಿಸಬಲ್ಲೀರಾ?

ರಾಮ್‌ ಚರಣ್‌ ತಂದೆಯಂತೆ ಕೊಡುಗೈ ದಾನಿ. ಮೆಗಸ್ಟಾರ್ ಚಿರಂಜೀವಿ ಪುತ್ರ. ತಂದೆಯ ಅಭಿಮಾನಿಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದಾಕ್ಷಣ ಅವರಿಗೆ 10 ಲಕ್ಷ ರೂ. ಹಣವನ್ನು ನೀಡಿದ್ದಾರೆ. ಸಾಕಷ್ಟು NGOಗಳಿಗೆ ಆರ್ಥಿಕ ಸಹಾಯ ಮಾಡುತ್ತಾರೆ. ಅದರೆ ಎಲ್ಲಿಯೂ ಹೇಳಿಕೊಂಡಿಲ್ಲ. ಬಲಗೈ ಮಾಡುವ ಕೆಲಸ, ಎಡಗೈಗೆ ತಿಳಿಯಬಾರದು ಎಂಬ ಚಿಂತನೆಯನ್ನು ಚಿರಂಜೀವಿ ಪಾಲಿಸಿದ್ದು, ಪುತ್ರ ರಾಮ್‌ ಫಾಲೋ ಮಾಡುತ್ತಿದ್ದಾರೆ.

5 ವರ್ಷಗಳ ಕಾಲ ರಾಮ್‌ ಚರಣ್‌ ಹಾಗೂ ಉಪಾಸನಾ ಒಬ್ಬರನ್ನೊಬ್ಬರು ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 14,2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಉಪಾಸನಾ ವೃತ್ತಿಯಲ್ಲಿ 'ಬಿ- ಪಾಸಿಟಿವ್‌ ಮ್ಯಾಗಜೀನ್‌' ಮುಖ್ಯ ಸಂಪಾದಕಿ ಹಾಗೂ ಅಪೊಲೋ ಲೈಫ್‌ ಚಾರಿಟಿ ವೈಸ್‌ ಪ್ರೆಸಿಡೆಂಡ್. ಅಷ್ಟೇ ಅಲ್ಲದೆ 2019ರಲ್ಲಿ Philanthropist Of the year ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದಾರೆ. 

"

ದಿಲ್ ಸೇ ಥ್ಯಾಂಕ್ಸ್ ಎಂದ ಬಾಲಿವುಡ್
ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಬಾಲಿವುಡ್ ಸಿನಿ ಸೆಲೆಬ್ರಿಟಿಗಳು #DilSeThankYou ಅಭಿಯಾನವನ್ನು ಕೈಗೊಂಡಿದ್ದರು. ಇದಕ್ಕೆ ಸಾಥ್ ನೀಡಿದ ಇತರೆ ನಟ, ನಟಿಯರೂ ಕೈಯಲ್ಲಿ THANK YOU DIL SE ಎಂಬ ಬೋರ್ಟ್ ಹಿಡಿದು, ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರ ಕಾರ್ಮಿಕರು ಸೇರಿ ಕೊರೋನಾ ಯೋಧರಿಗೆ ಹೃದಯದಿಂದ ಥ್ಯಾಂಕ್ಸ್ ಹೇಳಿದ್ದರು. 

ಅಪ್ಪನ ಅಭಿಮಾನಿಗೆ ಆರ್ಥಿಕ ನೆರವು ನೀಡಿದ ಜೂನಿಯರ್ ಮೆಗಾಸ್ಟಾರ್!

ಒಟ್ಟಿನಲ್ಲಿ ಪ್ರತಿಯೊಬ್ಬ ನಟ. ನಟಿಯರೂ ಈ ಲಾಕ್‌ಡೌನ್ ಅವಧಿಯನ್ನು ಒಂದಲ್ಲ ಒಂದು ರೀತಿಯಲ್ಲಿ ರಚನಾತ್ಮಕವಾಗಿ ಕಳೆಯುತ್ತಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ಹೆಚ್ಚು ಆ್ಯಕ್ಟಿವ್ ಆಗಿ, ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿರಲು ಯತ್ನಿಸುತ್ತಿದ್ದಾರೆ. ತಮ್ಮ ಹಳೆ ಹಳೇ ನೆನಪುಗಳನ್ನು ಬಿಚ್ಚಿಟ್ಟು, ತಮ್ಮ ತಮ್ಮ ಸುಖ ದುಃಖ ನೋವುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಹೇಳೆ ಗಾಸಿಪ್‌ಗಳು ಇದೀಗ ಮತ್ತೆ ಗರಿಗೆದರಿಕೊಳ್ಳುತ್ತಿದೆ.