ಭಾರತೀಯ ನೌಕಾಪಡೆಯ ಅಧಿಕಾರಿಗಳು ಜೊತೆ ಮೆಗಾ ಸ್ಟಾರ್ ಚಿರಂಜೀವಿ. ಗೋವಾದಿಂದ ಟ್ವೀಟ್ ಮಾಡಿದ ಫೋಟೋ ವೈರಲ್....

53ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇಂಡಿಯನ್ ಫಿಲ್ಮ ಪರ್ಸನಾಲಿಟಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದರ ಬೆನ್ನಲೆ ಗೋವಾದಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಜೊತೆ ಕ್ಲಿಕ್ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಟ್ವೀಟರ್‌ನಲ್ಲಿ ತಮ್ಮ ಎಸ್‌ಸಿಸಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಭಾರತೀಯ ನೌಕಾಪಡೆಯ ಅಧಿಕಾರಿಗಳು ಜೊತೆ ನಿಂತಿರುವ ಫೋಟೋ ಮತ್ತು ಕಾಲೇಜ್‌ ದಿನಗಳಲ್ಲಿ ಕ್ಲಿಕ್ ಮಾಡಿಕೊಂಡ ಫೋಟೋವನ್ನು ಹಂಚಿಕೊಂಡ ಚಿರಂಜೀವಿ 'ಗೋವಾ ವಿಮಾನ ನಿಲ್ದಾಣದಲ್ಲಿ ಒಂದು ದೊಡ್ಡ ಗುಂಪಿನ ಭಾರತೀಯ ನೌಕಾಪಡೆಯ ಅಧಿಕಾರಿಗಳು ಫೋಟೋ ಕ್ಲಿಕ್ ಮಾಡಿಕೊಳ್ಳಲು ನನ್ನನ್ನು ಕೇಳಿದ್ದರು ಆಗ ಅತಿ ಹೆಚ್ಚು ಸಂತೋಷದಿಂದ ನಾನು ಅವರ ಗುಂಪು ಸೇರಿಕೊಂಡೆ. ಆ ಕ್ಷಣ ನಾನು ನಾನು NCC ಗೆ ಸೇರ್ಪಡೆಗೊಂಡಾಗ....ನೇವಲ್ ಕೆಡೆಟ್ ದಿನಗಳು ನೆನಪಿಗೆ ಬಂತು' ಎಂದು ಚಿರಂಜೀವಿ ಟ್ವೀಟ್ ಮಾಡಿದ್ದರು. 

ತೆಲುಗು ಅಭಿಮಾನಿಗಳಿಗೆ ಆಭಾರಿ:

ಪ್ರಶಸ್ತಿ ಸ್ವೀಕರಿಸಿದ ಚಿರಂಜೀವಿ ಎಂದೂ ಜೀವನದಲ್ಲಿ ತೆಲುಗು ಸಿನಿಮಾ ಅಭಿಮಾನಿಗಳ ಪ್ರೀತಿಯನ್ನು ಮರೆಯುವುದಿಲ್ಲ ಎಂದು ಹೇಳಿದ್ದರು. ಇಂತ ಅದ್ಭುತ ಅವಾರ್ಡ್‌ ಕೊಟ್ಟಿರುವುದಕ್ಕೆ IFFI ಮತ್ತು ಭಾರತ ಸರ್ಕಾರಕ್ಕೆ ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆ. ಕೆಲವೊಂದು ಪ್ರಶಸ್ತಿಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ ಆ ಸಾಲಿಗೆ ಈ ನನ್ನ ಪ್ರಶಸ್ತಿ ಸೇರಲಿದೆ. ಮಿಡಲ್ ಕ್ಲಾಸ್‌ ಮನೆಯಲ್ಲಿ ಸ್ವಾಭಿಮಾನಿ ಪೋಷಕರಿಗೆ ಹುಟ್ಟಿದ್ದವನ್ನು ನಾನು. ನನ್ನ ಫೇಮ್, ಹೆಸರು, ಚರಿಸ್ಮಾ, ಸವಲತ್ತುಗಳು, ನನ್ನ ಅಭಿಮಾನಿಗಳ ಅಮೂಲ್ಯ ಪ್ರೀತಿ ಮತ್ತು ವಾತ್ಸಲ್ಯ ಮತ್ತು ಎಲ್ಲವೂ ಚಿತ್ರರಂಗದಿಂದ ಬಂದಿರುವುದು. ಕೊನಿಡೆಲಾ ಶಿವಾ ಶಂಕರ್ ವರದಾ ಪ್ರದಾಸ್‌ ಅವರಿಗೆ ಹುಟ್ಟಿದ ನನ್ನನ್ನು ಚಿರಂಜೀವಿ ಎಂದು ಮರು ನಾಮಕರಣ ಮಾಡಿದ್ದು ಇದೇ ಚಿತ್ರರಂಗ' ಎಂದು ವೇದಿಕೆ ಮೇಲೆ ಹೇಳಿದ್ದರು.

'45 ವರ್ಷಗಳಿಂದ ನಾನು ತಮಿಳು ಚಿತ್ರರಂಗದಲ್ಲಿ ಇರುವೆ. ಈ ನಾಲ್ಕುವರೆ ದಶಕದಲ್ಲಿ ನಾನು ಒಂದು ದಶಕ ರಾಜಕೀಯದಲ್ಲಿ ತೊಡಗಿಸಿಕೊಂಡಿರುವೆ. ಕೆಲವು ಕಾರಣಗಳಿಗೆ ನಾನು ಮತ್ತೆ ಚಿತ್ರರಂಗಕ್ಕೆ ಮರುಳಬೇಕಿತ್ತು. ಆ ಸಮಯದಲ್ಲಿ ಜನರು ನನ್ನನ್ನು ಮತ್ತೆ ಸ್ವೀಕರಿಸುತ್ತಾರಾ ಅದೇ ಪ್ರೀತಿ ಮತ್ತು ಜಯ ಕೊಡುತ್ತಾರಾ ಇಲ್ವಾ ಅನ್ನೋ ಯೋಚನೆ ನನಗೆ ಇತ್ತು. ಈ ರೀತಿ ಯೋಚನೆಗಳು ಬರಲು ಕಾರಣವೇ ಬದಲಾಗಿರುವ ಜನರೇಷನ್‌. ಆದರೆ ಅವರ ಮನಸ್ಸಿನಲ್ಲಿ ಕೊಟ್ಟಿರುವ ಜಾಗ ಪ್ರೀತಿ ಮತ್ತು ಜಯ ಕಿಂಚಿತ್ತು ಬದಲಾಗಿಲ್ಲ ಆಶ್ಚರ್ಯಕ್ಕೆ ಇನ್ನೂ ಡಬಲ್ ಅಗಿದೆ. ನನ್ನ ಅಭಿಮಾನಿಗಳ ಜೊತೆಗಿರುವ ನನ್ನ ಬಾಂಡ್‌ ಇದು. ಎಂದೂ ಚಿತ್ರರಂಗ ಬಿಡುವುದಿಲ್ಲ ಎಂದು ಅಭಿಮಾನಿಗಳಿಗೆ ಮಾತು ಕೊಡುತ್ತೇನೆ' ಎಂದಿದ್ದಾರೆ ಚಿರಂಜೀವಿ.

ಕೋಟಿಗಟ್ಟಲೆ ಆಸ್ತಿಯ ಮಾಲೀಕ ಈ ಸೂಪರ್‌ ಸ್ಟಾರ್‌ ತಮ್ಮ ಮನೆ ತಾವೇ ಕ್ಲೀನ್‌ ಮಾಡೋದು

ಗಾಡ್‌ಫಾದರ್‌ ಫೇಲ್:

ಮೆಗಾ ಸ್ಟಾರ್ ಚಿರಂಜೀವಿ ನಟಿಸಿದ ಗಾಡ್‌ ಫಾದರ್ ಸಿನಿಮಾ ಮೊದಲ ದಿನವೇ ಕಲೆಕ್ಷನ್‌ ಅಂಕಿ ಅಂಶದಲ್ಲಿ ನಿರಾಸೆ ಮೂಡಿಸಿತ್ತು. ಸುಮಾರು 90 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಕೇವಲ 18 ಕೋಟಿ ಗಳಿಸಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರದ ಸ್ಥಿತಿ ಇನ್ನೂ ಕೆಟ್ಟದಾಗಿದೆ. ಹಿಂದಿಯಲ್ಲಿ ಚಿತ್ರ ಗಳಿಸಿದ್ದು ಕೇವಲ 80 ಲಕ್ಷ ರೂ. 

Scroll to load tweet…