ಮತ್ತೊಮ್ಮೆ ತಂದೆಯಾದ ಕಾಲಿವುಡ್ ನಟ ಧನುಷ್ ಇಬ್ಬರು ಕ್ಯೂಟ್ ಬೇಬೀಸ್ ಫೋಟೋ ಹಂಚಿಕೊಂಡ ನಟ

ಕರ್ಣನ್, ಅಸುರನ್ ಸಿನಿಮಾಗಳಿಂದ ಸುದ್ದಿಯಾದ ಕಾಲಿವುಡ್ ನಟ ಧನುಷ್ ಅವರು ಎರಡು ಹೊಸ ನಾಯಿಮರಿಗಳನ್ನು ಸ್ವಾಗತಿಸಿದ್ದಾರೆ. ಮುದ್ದಾದ ನಾಯಿಮರಿಗಳ ಫೊಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಧನುಷ್ ತನ್ನ ಎರಡು ಸೈಬೀರಿಯನ್ ಹಸ್ಕೀಗಳಿಗೆ ಕಿಂಗ್ ಮತ್ತು ಕಾಂಗ್ ಎಂದು ಹೆಸರಿಸಿದ್ದಾರೆ.

ಅವರು ತಮ್ಮ ಫೋಟೊ ಶೇರ್ ಮಾಡಿ ಕುಟುಂಬಕ್ಕೆ ಸ್ವಾಗತ ಕಿಂಗ್ ಮತ್ತು ಕಾಂಗ್. ಎಲ್ಲಾ ಹೊಸ ಸಾಹಸಗಳನ್ನು ಒಟ್ಟಿಗೆ ಎದುರು ನೋಡುತ್ತಿದ್ದೇವೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಧನುಷ್.

ಬರ್ತ್‌ಡೇ ದಿನ ಅಭಿಮಾನಿಗಳನ್ನು ಭೇಟಿ ಮಾಡ್ತಾರಾ ಕಿಚ್ಚ ?

ಚಿತ್ರದಲ್ಲಿ, ಧನುಷ್ ಸಂತೋಷದಿಂದ ಕಾಣುತ್ತಿದ್ದರು, ಎರಡು ಸುಂದರ ಮರಿಗಳ ತಂದೆಯಾದರು. ವರಲಕ್ಷ್ಮಿ ಶರತ್ ಕುಮಾರ್, ಟೊವಿನೋ ಥಾಮಸ್, ಪ್ರಸನ್ನ ಮತ್ತು ಗೀತಾಂಜಲಿ ಸೆಲ್ವರಾಘವನ್ ಅವರಂತಹ ಅನೇಕ ಖ್ಯಾತನಾಮರು ಅವರ ಕುಟುಂಬದ ಹೊಸ ಸದಸ್ಯರಿಗೆ ಪ್ರೀತಿಯನ್ನು ಕಳುಹಿಸಿದರು.

View post on Instagram

ಧನುಷ್ ಕೊನೆಯ ಬಾರಿಗೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರ ಜಗಮೆ ಥಂದಿರಂ ಚಿತ್ರದಲ್ಲಿ ಕಾಣಿಸಿಕೊಂಡರು. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ನಟ ಇತ್ತೀಚೆಗೆ ತನ್ನ ಹಿಂದಿ ಚಿತ್ರವಾದ ಅಟ್ರಾಂಗಿ ರೇಯಲ್ಲಿ ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಅವರ ಜೊತೆ ನಟಿಸುತ್ತಿದ್ದಾರೆ. ಅವರು ಹಾಲಿವುಡ್ ಚಿತ್ರ ದಿ ಗ್ರೇ ಮ್ಯಾನ್ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಅವರು ಕಾರ್ತಿಕ್ ನರೇನ್ ಅವರ ಚೆನ್ನೈನಲ್ಲಿ ನಡೆಯುತ್ತಿರುವ ಮಾರನ್ ಮತ್ತು ಮಿತ್ರನ್ ಜವಾಹರ್ ಅವರ ತಿರುಚಿತ್ರಂಬಲಂ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.