Asianet Suvarna News Asianet Suvarna News

ಮಗು ಹುಟ್ಟಿದ್ದ ತಕ್ಷಣವೇ ರಾಧಾ ರಾಣಿ ಎಂದರು; ನಟಿ ಶ್ರಿಯಾ ಮಗಳಿಗೆ ಹೆಸರಿಟ್ಟಿದ್ದು ಹೀಗೆ....

ನಟಿ ಶ್ರಿಯಾ ಮಗಳ ಹೆಸರು ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಮಗು ಹೆಸರು ಕೇಳಿ ಶಾಕ್ ಆದ ಪತಿ, ಅದೇ ಹೆಸರಿಡಲು ಕಾರಣವಿಲ್ಲಿದೆ!

Tamil Shriya Saran reveals the reason for giving daughter a special name vcs
Author
Bangalore, First Published Oct 21, 2021, 4:43 PM IST
  • Facebook
  • Twitter
  • Whatsapp

ಕನ್ನಡ (Kannada), ತೆಲುಗು (Telugu) ಹಾಗೂ ತಮಿಳು (Tamil) ಚಿತ್ರರಂಗದ ಬ್ಯುಸಿ ನಟಿ ಶ್ರಿಯಾ (Shriya Sharan) ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಲೈಮ್‌ ಲೈಟ್‌ನಿಂದ ಕೊಂಚ ದೂರ ಸರಿದರು. ಕೆಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿ ಮಗುವಿಗೆ ಜನ್ಮ ನೀಡಿದ ನಂತರ ಭಾರತಕ್ಕೆ ಬಂದರು. ಶ್ರಿಯಾ ರಷ್ಯಾ (Russia) ಹುಡುಗನನ್ನು ಮದುವೆ ಆದ ಆರಂಭದಲ್ಲಿ ತುಂಬಾನೇ ಟ್ರೋಲ್‌ಗೆ (Trolls) ಒಳಗಾದರೂ, ನನ್ನ ಜೀವನವನ್ನು ನಾನೇ ಆಯ್ಕೆ ಮಾಡಿಕೊಂಡಿರುವೆ ಎಂದು ಗಟ್ಟಿ ಧ್ವನಿ ಎತ್ತಿದ್ದರು. 

ಅಮ್ಮನಾದ್ರು ಶ್ರಿಯಾ: ಗಂಡ ಫಾರಿನರ್ ಆದ್ರೂ ಮಗಳ ಹೆಸರು ರಾಧಾ

ಕೆಲವು ತಿಂಗಳ ಹಿಂದೆ ಮುದ್ದು ರಾಧೆಯನ್ನು ಕುಟುಂಬಕ್ಕೆ ಬರ ಮಾಡಿಕೊಂಡ ಶ್ರಿಯಾ, ನಾಮಕರಣ (Naming Cermony) ಮಾಡಿದ್ದಾರೆ. ಮಗಳಿಗೆ ರಾಧೆ (Radhe) ಎಂದು ಹೆಸರಿಟ್ಟಿದ್ದಾರೆ. ವಿದೇಶದಲ್ಲಿದ್ದೀರಿ, ರಷ್ಯಾ ಮೂಲದ ಪತಿ. ನೀವು ಯಾಕೆ ಇಷ್ಟು ಹಳೇ ಹೆಸರು ಆಯ್ಕೆ ಮಾಡಿದ್ದೀರಾ ಎಂದು ನೆಟ್ಟಿಗರು (Netizens) ಗೇಲಿ ಮಾಡಿದ್ದರು. ಖಾಸಗಿ ಸಂದರ್ಶದಲ್ಲಿ ಶ್ರಿಯಾ ಮಗಳಿಗೆ ಹೆಸರು ಆಯ್ಕೆ ಮಾಡಿದ ರೀತಿ ಬಗ್ಗೆ ವಿವರಿಸಿದ್ದಾರೆ. 

Tamil Shriya Saran reveals the reason for giving daughter a special name vcs

'ಹೆಣ್ಣು ಮಗು ಹುಟ್ಟಿದೆ ಎಂದು ಹೇಳಲು ನನ್ನ ತಾಯಿಗೆ (Mother) ಕರೆ ಮಾಡಿದೆ. ತಕ್ಷಣವೇ ಅಮ್ಮ 'ರಾಧೆ ರಾಣಿ' (Radhe Rani) ಬರ್ತಿದ್ದಾಳೆ ಎಂದರು. ಅದನ್ನು ಕೇಳಿಸಿಕೊಂಡ ಆ್ಯಂಡ್ರೇ (Andrei)ಅವರು ರಷ್ಯಾದಲ್ಲಿ ಏನೆಂದರು ಎಂದು ಕೇಳಿದ್ದರು. ಇದು ರಷ್ಯಾ ಭಾಷೆ ಅಲ್ಲ ಅಮ್ಮ ಹೇಳಿದ್ದು ರಾಧೆ ರಾಣಿ ಅಂತ ಎಂದು ನಾನು ಹೇಳಿದೆ. ಅದಕ್ಕೆ ಆ್ಯಂಡ್ರೇ ಹೇಳಿದರು, ರಷ್ಯಾ ಭಾಷೆಯಲ್ಲಿ ರಾಧೆ ಎಂದರೆ ಸಂತೋಷ (Happiness) ಎಂದು. ನಿಮ್ಮ ತಾಯಿ ಕೂಡ ಅದೇ ಹೇಳಿದ್ದಾರೆ ಎಂದರು. ಹೀಗಾಗಿ ನಾವು ಇದೇ ಹೆಸರನ್ನು ಇಡಬೇಕು ಎಂದು ನಿರ್ಧಾರ ಮಾಡಿದೆವು,' ಎಂದು ಶ್ರಿಯಾ ಹೇಳಿದ್ದಾರೆ. 

ಕ್ಯಾಮೆರಾ ನೋಡುತ್ತಿದ್ದಂತೆ ಪಬ್ಲಿಕ್‌ನಲ್ಲಿ ಪತಿಗೆ ಕಿಸ್ ಮಾಡಿದ ನಟಿ ಶ್ರೀಯಾ ಶರಣ್!

'ಈಗ ನಾನು ರಾಧೆ ಅರ್ಥ ಹೇಳಿರುವುದಕ್ಕೆ ಜನರು ಅದಕ್ಕೂ ಕಾಮೆಂಟ್ ಮಾಡುತ್ತಾರೆ. ರಾಧೆ ರಷ್ಯಾ ಪದ ಮಾತ್ರವಲ್ಲ ಅದು ಸಂಸ್ಕೃತದ (Sanskrit) ಪದವೂ ಹೌದು.' ಎಂದಿದ್ದಾರೆ. ಎರಡು ಕುಟುಂಬಗಳು ಸಂಭ್ರದಲ್ಲಿ ತೇಲುತ್ತಿವೆ. ಪರ್ಸನಲ್‌ ಲೈಫ್‌ ಅನ್ನು ತುಂಬಾನೇ ಪ್ರೈವೇಟ್ (private life) ಅಗಿಟ್ಟಿಕೊಂಡಿರುವ ಶ್ರಿಯಾ, ಮಗಳಿಗೆ ಯಾವುದೇ ಮೀಡಿಯಾ ಅಟೆನ್ಷನ್‌ ಸಿಗಬಾರದು. ಕ್ಯಾಮೆರಾಗಳಿಂದ ದೂರ ಉಳಿಯಬೇಕು, ಎಂದು ರಾಧೆ ಹುಟ್ಟಿ 9 ತಿಂಗಳ ನಂತರ ವಿಚಾರ ಬಹಿರಂಗ ಪಡಿಸಿದ್ದಾರೆ.

Follow Us:
Download App:
  • android
  • ios