Thriller And Suspense Web Series: ಐಎಂಡಿಬಿ 7.2 ರೇಟಿಂಗ್ ಪಡೆದ ಹಾರರ್ ವೆಬ್ ಸಿರೀಸ್ ನಿಗೂಢ ಸಾವುಗಳು ಮತ್ತು ಜೇಡದ ಬಲೆಯಿಂದ ಕೂಡಿದ ಒಂದು ಊರಿನ ಕಥೆಯನ್ನು ಹೇಳುತ್ತದೆ. ಇನ್‌ಸ್ಪೆಕ್ಟರ್ ಕೊಲೆಗಳ ಹಿಂದಿನ ರಹಸ್ಯವನ್ನು ಬಯಲು ಮಾಡುತ್ತಾನೆಯೇ?

OTT Horror Thriller Web Series: ಕೆಲವರಿಗೆ ಕ್ರೈಂ ಥ್ರಿಲ್ಲರ್ ಆಂಡ್ ಹಾರರ್ ಸಿನಿಮಾ ನೋಡಲು ಇಷ್ವಪಡುತ್ತಾರೆ. ಇನ್ನೊಂದಿಷ್ಟು ವರ್ಗದ ಜನರು ಭಯದಿಂದಲೇ ಹಾರರ್ ಸಿನಿಮಾಗಳನ್ನು ನೋಡುತ್ತಾರೆ. ನೀವು ಸಹ ಈ ತರಹದ ಸಿನಿಮಾ ಅಥವಾ ವೆಬ್ ಸಿರೀಸ್ ನೋಡಲು OTT ಪ್ಲಾಟ್‌ಫಾರಂಗಳಲ್ಲಿ ಹುಡುಕಾಟ ಮಾಡುತ್ತಿದ್ರೆ ಇದು ನಿಮಗೆ ಬೆಸ್ಟ್ ಆಯ್ಕೆಯಾಗಲಿದೆ. ಈ ಸಸ್ಪೆನ್ಸ್ ಆಂಡ್ ಹಾರರ್ ವೆಬ್ ಸಿರೀಸ್‌ಗೆ ಐಎಂಡಿಬಿ 7.2 ರೇಟಿಂಗ್ ನೀಡಿದೆ. ಈ ವೆಬ್ ಸಿರೀಸ್ ನೋಡಿದವರು ರೇಟಿಂಗ್ 9.5 ನೀಡುತ್ತಾರೆ. ಈ ವೆಬ್ ಸಿರೀಸ್ ಪೂರ್ಣವಾಗಿ ನೋಡಿದ ಬಳಿಕ ನಿಮ್ಮ ಕಣ್ಮುಂದೆ ಶವಗಳು ಮತ್ತು ಅದರ ಸುತ್ತಲೂ ಹೆಣೆಯುವ ಬಲೆ ಕಣ್ಮುಂದೆ ಬರುತ್ತದೆ. 2024ರಲ್ಲಿ ಪ್ರೈಮ್ ವಿಡಿಯೋ ಪ್ಲಾಟ್‌ಫಾರಂನಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗಿತ್ತು.

ಮೂಲ ತಮಿಳು ಭಾಷೆಯಲ್ಲಿದ್ದು, ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿಯೂ ಈ ವೆಬ್ ಸಿರೀಸ್ ಡಬ್ ಆಗಿದೆ. ಹಾಗಾಗಿ ವೀಕ್ಷಕರು ತಮ್ಮಿಷ್ಟದ ಭಾಷೆಯಲ್ಲಿ ವೆಬ್ ಸಿರೀಸ್ ವೀಕ್ಷಿಸಬಹುದು. ಇಷ್ಟೊತ್ತು ನಾವು ಹೇಳುತ್ತಿರುವ ವೆಬ್ ಸಿರೀಸ್ ಹೆಸರು ಇನ್‌ಸ್ಪೆಕ್ಟರ್ ರಿಷಿ (Inspector Rishi). ಈ ಸಸ್ಪೆನ್ಸ್ ವೆಬ್ ಸಿರೀಸ್ ಜೆ.ಎಸ್.ನಂದಿನಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇನ್‌ಸ್ಪೆಕ್ಟರ್ ರಿಷಿ ಪಾತ್ರದಲ್ಲಿ ನಟ ನವೀನ್ ಚಂದ್ರ ಅದ್ಭುತವಾಗಿ ನಟಿಸಿದ್ದಾರೆ. ಇನ್ನುಳಿದಂತೆ ಸುನೈನಾ ಯೆಲ್ಲಾ, ಕನ್ನಾ ರವಿ, ಶ್ರೀಕೃಷ್ಣ ದಯಾಳ್, ಮಾಲಿನಿ ಜೀವರತ್ನಮ್, ಕುಮಾರ್ ವೇಲ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. 29ನೇ ಮಾರ್ಚ್ 2024ರಂದು ಪ್ರೈಮ್ ವಿಡಿಯೋದಲ್ಲಿಈ ಸಿರೀಸ್ ಸ್ಟ್ರೀಮ್ ಆಗಿತ್ತು.

ವೆಬ್ ಸಿರೀಸ್ ಕಥೆ ಏನು?
ದಟ್ಟವಾದ ಅರಣ್ಯ, ಸುತ್ತಲೂ ಪರ್ವತಗಳು. ದಟ್ಟಾರಣ್ಯದ ನಡುವೆಯೊಂದು ನಿಗೂಢತೆಯನ್ನು ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿರುವ ಊರು. ಈ ಗ್ರಾಮದಲ್ಲಿ ಸಂಜೆಯಾಗುತ್ತಿದ್ದಂತೆ ಜನರು ಮನೆ ಸೇರಿಕೊಳ್ಳುತ್ತಾರೆ. ಆದ್ರೂ ಪ್ರತಿದಿನ ಕಾಡಿನಲ್ಲಿ ಭೀಕರವಾಗಿ ಮೃತವಾಗಿರುವ ಶವ ಸಿಗುತ್ತಿರುತ್ತದೆ. ಶವದ ಸುತ್ತಲೂ ಜೇಡದ ಬಲೆ ಇರುತ್ತದೆ. ಒಂದೇ ದಿನದಲ್ಲಿ ಭಯಾನಕ ಜೇಡದ ಬಲೆ ಇಲ್ಲಿ ಎಲ್ಲರನ್ನು ಅಚ್ಚರಿಪಡಿಸುತ್ತದೆ. 

ಇದನ್ನೂ ಓದಿ: 44 ಪ್ರಶಸ್ತಿ ಗೆದ್ದ ಸಿನಿಮಾ ಗಳಿಸಿದ್ದು 500 ಕೋಟಿ; ಥಿಯೇಟರ್‌ನಿಂದ ಭಾವುಕರಾಗಿ ಹೊರಬಂದ ವೀಕ್ಷಕರು!

ಇಂತಹ ನಿಗೂಢವಾದ ಊರಿಗೆ ಇನ್‌ಸ್ಪೆಕ್ಟರ್ ರವಿ ಬರುತ್ತಾನೆ. ಅನುಮಾನಾಸ್ಪದ ಸಾವುಗಳ ತನಿಖೆ ಆರಂಭಿಸುವ ರವಿ, ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುತ್ತಾನೆ. ಈ ಸಂಬಂಧ ಗ್ರಾಮಸ್ಥರನ್ನು ಪ್ರಶ್ನೆ ಮಾಡಿದಾಗ ಎಲ್ಲರೂ ನೀಡುವ ಉತ್ತರ ವನರಾಚಿ. ಈ ಎಲ್ಲಾ ಕೊಲೆಗಳನ್ನು ಮಾಡುತ್ತಿರೋದು ವನರಾಚಿ. ಈ ಹಿಂದೆ ಆಕೆ ಕಾಡಿನ ರಾಣಿಯಾಗಿದ್ದಳು ಮತ್ತು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದ್ದಳು. ಆದ್ರೆ ಈಗ ದೆವ್ವವಾಗಿ ಬದಲಾಗಿದ್ದಾಳೆ ಎಂಬ ಕಥೆಯನ್ನು ಗ್ರಾಮಸ್ಥರು, ಇನ್‌ಸ್ಪೆಕ್ಟರ್ ರಿಷಿ ಮುಂದೆ ಹೇಳುತ್ತಾರೆ. 

ಗ್ರಾಮಸ್ಥರು ಹೇಳಿದ ಈ ಕಥೆಯನ್ನು ಇನ್‌ಸ್ಪೆಕ್ಟರ್ ರಿಷಿ ನಂಬಲ್ಲ. ಇದೆಲ್ಲಾ ದಂತಕಥೆ, ಮೂಢನಂಬಿಕೆಯಾಗಿದ್ದು, ಕೊಲೆಗಳ ಹಿಂದೆ ಮನುಷ್ಯರ ಕೈವಾಡವಿದೆ ಎಂದು ಇನ್‌ಸ್ಪೆಕ್ಟರ್ ರಿಷಿ ಅನುಮಾನ ವ್ಯಕ್ತಪಡಿಸಿ, ತನ್ನ ತನಿಖೆಯನ್ನು ಮುಂದುವರಿಸುತ್ತಾನೆ. ನಿಗೂಢ ಸಾವುಗಳ ತನಿಖೆ ನಡೆಸುವಾಗ ರಿಷಿ ಊಹೆಗೂ ನಿಲುಕದ ಘಟನೆಗಳು ನಡೆಯುತ್ತವೆ. ಇನ್‌ಸ್ಪೆಕ್ಟರ್ ರಿಷಿ ಕೊಲೆಗಳ ಹಿಂದಿನ ರಹಸ್ಯ ಬಯಲು ಮಾಡ್ತಾನಾ? ಗ್ರಾಮಸ್ಥರು ಹೇಳಿದಂತೆ ನಿಜವಾಗ್ಲೂ ವನರಾಚಿ ಎಂಬ ದೆವ್ವ ಇದೆಯಾ ಅನ್ನೋದು ಈ ವೆಬ್ ಸೀರಿಸ್ ಕಥೆಯಾಗಿದೆ. ಇದು ಒಟ್ಟು 10 ಎಪಿಸೋಡ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ಈ ಸಿನಿಮಾ ಥಿಯೇಟರ್‌ಗಾಗಿ ಕಾದಿದ್ದು ಬರೋಬ್ಬರಿ 12 ವರ್ಷ; ಬಿಡುಗಡೆಯಾಗುತ್ತಲೇ ಬಾಕ್ಸ್‌ ಆಫಿಸ್ ಧೂಳಿಪಟ, 3 ಪಟ್ಟು ಗಳಿಕೆ

Scroll to load tweet…

YouTube video playerYouTube video player