ತೆಲುಗು ಚಿತ್ರರಂಗ ಸ್ಟಾರ್ ನಟ, ನಟಿಯರಿಗೆ ಸಿನಿಮಾ ನಿರ್ಮಾಣ ಮಾಡಿರುವ ಕೆ. ಬಾಲು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲು ಕೋವಿಡ್‌ 19ಗೆ ಒಳಗಾಗಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೊಸ ವರ್ಷದ ಆರಂಭಕ್ಕೂ ಮುನ್ನ ಕೊನೇ ಉಸಿರೆಳೆದ ಖ್ಯಾತ ಹಾಸ್ಯ ನಟ ನರಸಿಂಗ್ ಯಾದವ್ 

ಕೆಪಿ ಫಿಲಂ ಸಂಸ್ಥೆ ನಿರ್ಮಾಪಕರಾಗಿರುವ ಬಾಲಿ ಪ್ರಭಾಸ್, ಖುಷ್ಬೂ ಸೇರಿದಂತೆ ಅನೇಕರಿಗೆ ಬಂಡವಾಳ ಹಾಕಿದ್ದಾರೆ. ಅದರಲ್ಲೂ 'ಚಿನ್ನ ತಂಬೂರಿ','ಪಂಚಲನುಕೂರಿ' ಹಾಗೂ 'ಜನಗ್ರಾಮನ್' ತುಂಬಾನೇ ಪಾಪ್ಯೂಲರ್ ಸಿನಿಮಾ. 

ನಟ ಹಾಗೂ ನಿರ್ದೇಶಕ ಶರತ್ ಕುಮಾರ್ ಟ್ಟಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. 'ಕಪಿ ಫಿಲ್ಮಂ ಬಾಲು ಇಂದು ನಮ್ಮನ್ನು ಅಗಲಿದ್ದಾರೆ.  ಚಿತ್ರರಂಗಕ್ಕೆ ಇದೊಂದು ದೊಡ್ಡ ಲಾಸ್. ಬಾಲು ಆತ್ಮಕ್ಕೆ ಶಾಂತಿ ಸಿಗಲಿ.ನನ್ನ ಕುಟುಂಬದ ಕಡೆಯಿಂದ ಸಂತಾಪಗಳು' ಎಂದು ಬರೆದಿದ್ದಾರೆ.

ಕಿಡ್ನಿ ವೈಫಲ್ಯದಿಂದ ಕಂಠಿ ಸಿನಿಮಾ‌ ನಿರ್ದೇಶಕ ಭರತ್ ನಿಧನ! 

ಜನವರಿ 1ರಂದು ಬಾಲು ಅಗಲಿದ್ದು 2ರಂದು ಚೆನ್ನೈನಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ವರ್ಷದ ಆರಂಭದಲ್ಲೇ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ತಮಿಳು ಚಿತ್ರರಂಗವಿದೆ.