Asianet Suvarna News Asianet Suvarna News

ಮುಂದುವರೆದ ಯುವ ನಟಿಯರ ಆತ್ಮಹತ್ಯೆ ಸರಣಿ; ಶವವಾಗಿ ಪತ್ತೆಯಾದ ನಟಿ ದೀಪಾ

ತಮಿಳು ನಟಿ ದೀಪಾ ಶವವಾಗಿ ಪತ್ತೆಯಾಗಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

Tamil actress Deepa aka Pauline Jessica found dead after, police suspect her love life to be the cause of suicide sgk
Author
First Published Sep 19, 2022, 10:29 AM IST

ಯುವನಟಿಯರ ಸರಣಿ ಆತ್ಮಹತ್ಯೆ ಪ್ರಕರಣ ಮುಂದುವರೆದಿದೆ. ಕಳೆದ ಕೆಲವು ತಿಂಗಳಿಂದ ಕಲ್ಕತ್ತಾದಲ್ಲಿ ಅನೇಕ ಯುವ ನಟಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೋರ್ವ ನಟಿ ಶವವಾಗಿ ಪತ್ತೆಯಾಗಿದ್ದಾರೆ. ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ತಮಿಳು ನಟಿ ದೀಪಾ (ಪಾಲಿನ್​ ಜೆಸ್ಸಿಕಾ) ಶವವಾಗಿ ಪತ್ತೆಯಾಗಿದ್ದಾರೆ.  ನೇಣು ಬಿಗಿದ ಸ್ಥಿತಿಯಲ್ಲಿ ದೀಪಾ ಶವ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದೀಪಾ ಅವರಿಗೆ 29 ವರ್ಷ ವಯಸ್ಸಾಗಿತ್ತು. ಚೆನ್ನೈ ಹೊರವಲಯದ ಅಪಾರ್ಟ್​ಮೆಂಟ್​ನಲ್ಲಿ ನೆಲೆಸಿದ್ದ ದೀಪಾ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ (ಸೆಪ್ಟಂಬರ್ 17) ಈ ಪ್ರಕರಣ ನಡೆದಿದೆ. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ದೀಪಾ ಅವರ ಮೂಲ ಹೆಸರು ಪಾಲಿನ್​ ಜೆಸ್ಸಿಕಾ. ಆದರೆ ಚಿತ್ರರಂಗದಲ್ಲಿ ಅವರು ದೀಪಾ ಎಂದು ಖ್ಯಾತಿಗಳಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 

ಮೂಲಗಳ ಪ್ರಕಾರ ಪ್ರೀತಿ-ಪ್ರೇಮದ ವಿಚಾರವೇ ದೀಪಾ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆಳವಾದ ಪ್ರೀತಿಯಲ್ಲಿದ್ದ ದೀಪಾಗೆ ಪ್ರೀತಿ ಕೈಕೊಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ದೀಪಾ ಅವರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ದೀಪಾ ಬರೆದಿರುವ ಸೂಸೈಡ್​​ ನೋಟ್​ ಕೂಡ ಪತ್ತೆ ಆಗಿದೆ. ಆದರೆ ಯಾರ ಹೆಸರನ್ನೂ ಅದರಲ್ಲಿ ಪ್ರಸ್ತಾಪಿಸಿಲ್ಲ ಎಂದು ಹೇಳಲಾಗುತ್ತಿದೆ. ಅವರು ಯಾರನ್ನು ಪ್ರೀತಿಸುತ್ತಿದ್ದರು, ಪ್ರೀತಿಯಿಂದ ಏನು ಸಮಸ್ಯೆ ಆಗಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. 

ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು

ಹಲವು ಬಾರಿ ಫೋನ್​ ಮಾಡಿದಾಗ ದೀಪಾ ಅವರು ಕರೆ ಸ್ವೀಕರಿಸಲಿಲ್ಲ. ಆಗ ಕುಟುಂಬದವರಿಗೆ ಅನುಮಾನ ಬಂತು. ಅಪಾರ್ಟ್​ಮೆಂಟ್​ಗೆ ಬಂದು ನೋಡಿದಾಗ ಅವರ ಮೃತದೇಹ ಕಾಣಿಸಿತು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ಸಾವಿಗೆ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ತಮಿಳು ಚಿತ್ರರಂಗದಲ್ಲಿ ದೀಪಾ ಅವರು ಈಗತಾನೇ ಗುರುತಿಸಿಕೊಳ್ಳುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಎಲ್ಲರಿಗೂ ಈ ಸಾವಿನ ಸುದ್ದಿ ಶಾಕ್​ ನೀಡಿದೆ. ಸ್ನೇಹಿತರು, ಆಪ್ತರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ದೀಪಾ ಅವರ ಕೈಯಲ್ಲಿ ಅನೇಕ ಆಫರ್​ಗಳು ಇದ್ದವು ಎಂದು ಹೇಳಲಾಗುತ್ತಿದೆ. ವೈಯಕ್ತಿಕ ಕಾರಣದಿಂದಾಗಿ ಅವರು ಜೀವನ ಅಂತ್ಯ ಮಾಡಿಕೊಂಡಿರುವುದು ದುರಂತ.

Life after death: ಸತ್ತ ಮೇಲೆ ಆತ್ಮದ ಜೊತೆ ಏನೆಲ್ಲಾ ಹೋಗುತ್ತೆ ಗೊತ್ತಾ?

ನಟಿ ದೀಪಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಈ ವರ್ಷದ ಪ್ರಾರಂಭದಲ್ಲಿ ಬಂದ ವೈದಾ ಸಿನಿಮಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಿಟ್ ಸಿನಿಮಾ ಮಿಸ್ಕಿನ್ ಅವರ ತುಪ್ಪಾರಿವಾಲನ್ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಚಿಕ್ಕ ಪಾತ್ರವಾಗಿದ್ದರೂ ಅದ್ಭುತವಾಗಿ ನಟಿಸುತ್ತಿದ್ದರು. ಇದೀಗ ಪ್ರೀತಿ ವಿಚಾರಕ್ಕೆ ಜೀವ ಕಳೆದುಕೊಂಡಿರುವುದು ಅವರ ಅಭಿಮಾನಿಗಳಿಗೆ, ಕುಟುಂಬಕ್ಕೆ ನೋವು ತಂದಿದೆ. 

Follow Us:
Download App:
  • android
  • ios