Asianet Suvarna News Asianet Suvarna News

ವನಂಗಾನ್ ಚಿತ್ರದಿಂದ ನಟ ಸೂರ್ಯ ಔಟ್; ಬಾಲಾ ರಿಲೀಸ್ ಮಾಡಿದ ಸ್ಟೇಟ್ಮೆಂಟ್ ವೈರಲ್!

ಸ್ಟೇಟ್ಮೆಂಟ್ ರಿಲೀಸ್ ಮಾಡುವ ಮೂಲಕ ಸೂರ್ಯ ಜೊತೆ ಕೆಲಸ ಮಾಡುತ್ತಿಲ್ಲ ಎಂದು ತಿಳಿಸಿದ ನಿರ್ದೇಶಕ ಬಾಲಾ. 

Tamil actor Suriya opts out of Bala direction Vanangaan film vcs
Author
First Published Dec 6, 2022, 9:57 AM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸೂರ್ಯ ಮತ್ತು ನಿರ್ದೇಶಕ ಬಾಲಾ ಎರಡು ದಶಕಗಳ ನಂತರ ವನಂಗಾನ್ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಕೆಲವು ತಿಂಗಳುಗಳ ಹಿಂದೆ ಅನೌನ್ಸ್ ಮಾಡಿದ್ದರು. ಆದರೆ ಅದೇನಾಯ್ತೋ ಏನೋ ಗೊತ್ತಿಲ್ಲ ಸ್ಟೇಟ್ಮೆಂಟ್ ರಿಲೀಸ್ ಮಾಡುವ ಮೂಲಕ ಸೂರ್ಯ ಸಿನಿಮಾದಿಂದ ಹೊರ ನಡೆದಿದ್ದಾರೆ ಎಂದು ಬಾಲಾ ತಿಳಿಸಿದ್ದಾರೆ. ಕಥೆ ಇಷ್ಟವಿಲ್ಲ ಎಂದು ಸೂರ್ಯ ಹೊರ ನಡೆದಿಲ್ಲ, ಗೆಳೆಯ ಸೂರ್ಯನಿಗೆ ಈ ಕಥೆ ಸೂಕ್ತವಲ್ಲ ಎಂದು ಸ್ವತಃ ಬಾಲಾ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. 

ಸ್ಟೇಟ್ಮೆಂಟ್‌ನಲ್ಲಿ ಎನಿದೆ?

'ವನಂಗಾನ್ ಚಿತ್ರವನ್ನು ನನ್ನ ಪುಟ್ಟ ಸಹೋದರ ಸೂರ್ಯನಿಗೆ ನಿರ್ದೇಶನ ಮಾಡಬೇಕು ಅನ್ನೋ  ಮನಸ್ಸು ಇತ್ತು. ಆದರೆ ಕಥೆಯಲ್ಲಿ ಕೊಂಚ ಬದಲಾವಣೆಗಳು ಆಗಿರುವ ಕಾರಣ ಈ ಕಥೆ ಸೂರ್ಯನಿ ಸೂಟ್ ಆಗುತ್ತಾ ಇಲ್ವೋ ಅನ್ನೋ ಯೋಚನೆ ನನಗೆ ಶುರುವಾಗಿತ್ತು, ಅವರಿಗೆ ಇಷ್ಟ ಆಗುವ ಕಥೆ ತಯಾರಿ ಮಾಡುವೆ. ಸೂರ್ಯ ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ, ಅವರ ಹಿರಿಯ ಸಹೋದರನಾಗಿ ನಾನು ಆತನನ್ನು ತೆರೆ ಮೇಲೆ ಅದ್ಭುತವಾಗಿ ತೀರಿಸಬೇಕು ನನ್ನ ಜೀವನದಲ್ಲಿ ಇದೊಂದು ಟ್ರಿಕಿ ಸಂದರ್ಭ. ಈ ನಿರ್ಧಾರವನ್ನು ಸೂರ್ಯ ಮಾತ್ರವಲ್ಲ ನಾನು ಕೂಡ ಸೇರಿಕೊಂಡು ತಂಡದ ಜೊತೆ ಚರ್ಚಿಸಿ ಈ ತೀರ್ಮಾನಕ್ಕೆ ಬಂದಿರುವುದು. ನಿಜ ಹೇಳಬೇಕು ಅಂದ್ರೆ ಸೂರ್ಯ ಕೊಂಚ ಬೇಸರ ಮಾಡಿಕೊಂಡಿದ್ದರು ಆದರೆ ಅವರ ವೃತ್ತಿ ಜೀವನವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವೆ' ಎಂದು ಬಾಲಾ ಸ್ಟೇಟ್ಮೆಂಟ್ ರಿಲೀಸ್ ಮಾಡಿದ್ದಾರೆ. 

Tamil actor Suriya opts out of Bala direction Vanangaan film vcs

ಮುಂಬರುವ ದಿನಗಳಲ್ಲಿ ಸೂರ್ಯ ಅವರ ಜೊತೆ ನಾನು ಕೆಲಸ ಮಾಡಲು ಇಷ್ಟ ಪಡುವೆ. 'ನಂದಾ ಸಿನಿಮಾದಲ್ಲಿ ನಾನು ನೋಡಿದ ಸೂರ್ಯ ಅವರಿಗೂ ಪಿತಾಮಗನ್ ಸಿನಿಮಾದಲ್ಲಿ ನಟಿಸಿರುವ ಸೂರ್ಯ ಅವರಿಗೂ ಏನೂ ಬದಲಾಗಿಲ್ಲ. ಇಬ್ಬರೂ ಏನೇ ಸಮಯ ಸಂದರ್ಭವಿದ್ದರೂ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುತ್ತೇವೆ' ಎಂದಿದ್ದಾರೆ. ಸೂರ್ಯ ಇಲ್ಲದೆ ವನಂಗಾನ್ ಸಿನಿಮಾ ಕೆಲಸಗಳು ಆರಂಭವಾಗಲಿದೆ ಆದರೆ ಈ ಚಿತ್ರಕ್ಕೆ ನಾಯಕನ ಆಯ್ಕೆ ಶೀಘ್ರದಲ್ಲಿ ಗೊತ್ತಾಗಲಿದೆ. 

ಮೇ ತಿಂಗಳಿನಲ್ಲಿ ಬಾಲಾ ಮತ್ತು ಸೂರ್ಯ ಒಟ್ಟಿಗೆ ಸೇರಿ ವನಂಗಾನ್ ಹೆಸರಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತುಗಳು ಆರಂಭವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸೈಲೆಂಟ್ ಆಗಿ ಹೈಪ್ ಶುರುವಾಗಿತ್ತು. ಗಾಳಿ ಮಾತುಗಳಿ ಬ್ರೇಕ್ ಹಾಕಬೇಕು ಎಂದು ಇಬ್ಬರೂ ಒಟ್ಟಿಗೆ ಇರುವ ಹಳೆ ಸಿನಿಮಾ ಫೋಟೋ ಹಂಚಿಕೊಂಡಿದ್ದರು. ಯಾವ ಗಾಸಿಪ್‌ಗಳಿಗೆ ತಲೆ ಕೊಡದ ಸೂರ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದರ. ಬಾಲಾ ಜೊತೆ ಸಿನಿಮಾ ಮಾಡಲು ಕಾಯುತ್ತಿರುವೆ ಎಂದಿದ್ದರು. 

National Film Awards; ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಕುಟುಂಬದ ಜೊತೆ ಸಂಭ್ರಮಿಸಿದ ಸೂರ್ಯ

ವನಂಗಾನ್ ಬಗ್ಗೆ ಮಾಹಿತಿ:

ತಮಿಳು ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸಿದ ಸಿನಿಮಾ ವನಂಗಾನ್. ಎರಡು ದಶಕಗಳ ನಂತರ ಒಂದಾಗುತ್ತಿರುವ ಜೋಡಿ ಬ್ಲಾಕ್‌ ಬಸ್ಟರ್ ಹಿಟ್‌ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. 2001ರಲ್ಲಿ ನಂದಾ ಮತ್ತು 2003ರಲ್ಲಿ ಪಿತಾಮಗನ್ ಸಿನಿಮಾ ಒಟ್ಟಿಗೆ ಮಾಡಿ ಬಾಕ್ಸ್‌ ಆಫೀಸ್‌ ರೆಕಾರ್ಡ್‌ ಬ್ರೇಕ್ ಮಾಡಿದ್ದರು. ಸೂಯರ್ ವೃತ್ತಿ ಜೀವನದಲ್ಲಿ ಮರೆಯಲಾಗದ ಬ್ರೇಕ್‌ನ ಸೂರ್ಯ ಕೊಟ್ಟಿದ್ದಾರೆ.  ಸೂರ್ಯ ಸಂಸ್ಥೆ 2D ಎಂಟರ್ಟೈನಮೆಂಟ್ ನಲ್ಲಿ ವನಂಗಾನ್‌ ನಿರ್ಮಾಣ ಆಗಬೇಕಿತ್ತು, ಈ ವಿಚಾರದಲ್ಲಿ ಬದಲಾವಣೆಗಳು ಇರಲಿದ್ಯಾ ಎಂದು ಕಾದು ನೋಡಬೇಕಿದೆ. ವನಂಗಾನ್ ಚಿತ್ರಕ್ಕೆ ಕೀರ್ತಿಶೆಟ್ಟು ನಾಯಕಿ ಮತ್ತು ಜಿವಿ ಸಂಗೀತ ನಿರ್ದೇಶಕರು, ಈ ವಿಚಾರದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. 

Follow Us:
Download App:
  • android
  • ios