ನಾನು ಶಿವಣ್ಣ ಅವರ ಕ್ಷಮೆಯನ್ನು ಒಪ್ಪಲ್ಲ: ತಮಿಳು ನಟ ಸಿದ್ದಾರ್ಥ್
ತಮಿಳು ನಟ ಸಿದ್ದಾರ್ಥ್ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಕನ್ನಡಪರ ಸಂಘಟನೆಗಳು ಅಡ್ಡಿ ಪಡಿಸಿದ ಬಳಿಕ, ನಟ ಶಿವರಾಜ್ ಕುಮಾರ್ ಅವರು ಕ್ಷಮೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿದ್ದಾರ್ಥ್, ಶಿವರಾಜ್ ಕುಮಾರ್ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ಚೆನ್ನೈ (ಅ.07): ತಮಿಳು ನಟ ಸಿದ್ದಾರ್ಥ್ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪತ್ರಿಕಾಗೋಷ್ಠಿಗೆ ಕನ್ನಡಪರ ಸಂಘಟನೆಗಳು ಅಡ್ಡಿ ಪಡಿಸಿದ ಬಳಿಕ, ನಟ ಶಿವರಾಜ್ ಕುಮಾರ್ ಅವರು ಕ್ಷಮೆ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿದ್ದಾರ್ಥ್, ಶಿವರಾಜ್ ಕುಮಾರ್ ಅವರು ಕ್ಷಮೆ ಕೇಳುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.
ನಮ್ಮ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದೆವು. ಈ ವೇಳೆ ಕೆಲವರು ಅಡ್ಡಿ ಪಡಿಸಿದರು. ಇದಾದ ಬಳಿಕ ಕನ್ನಡ ಸಿನಿಮಾ ಉದ್ಯಮದ ಪರವಾಗಿ ಹಿರಿಯ ನಟ ಶಿವರಾಜ್ ಕುಮಾರ್ ಅವರು ಕ್ಷಮೆ ಕೋರಿದ್ದಾರೆ. ಆದರೆ ಇದನ್ನು ನಾನು ಸ್ವೀಕರಿಸಲಾಗುವುದಿಲ್ಲ. ಈ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೆ ತಮ್ಮ ಉದಾತ್ತ ಹೃದಯದಿಂದಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಸಿದ್ದಾರ್ಥ್ ಹೇಳಿದ್ದಾರೆ.
ನನ್ನ ಚಿತ್ರಕ್ಕೂ ಕಾವೇರಿ ವಿವಾದಕ್ಕೂ ಸಂಬಂಧವೇ ಇಲ್ಲ: ಬೆಂಗಳೂರಿನಲ್ಲಿ ನಡೆಯುತ್ತಿದ್ದ ತಮ್ಮ ಸುದ್ದಿಗೋಷ್ಠಿಯಲ್ಲಿ ಮಧ್ಯಪ್ರವೇಶಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ತಮ್ಮ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದ ಘಟನೆಗೆ ಸಂಬಂಧಿಸಿದಂತೆ ಇದೇ ಮೊದಲಿಗೆ ಪ್ರತಿಕ್ರಿಯಿಸಿರುವ ನಟ ಸಿದ್ಧಾರ್ಥ್ ‘ಘಟನೆಯಿಂದ ನನಗೆ ನಿರಾಸೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ‘ತಮಿಳು ನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ಕಾವೇರಿ ನದಿ ವಿವಾದಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರ ನಿರ್ಮಾಪಕನಾಗಿ ಇದರಿಂದ ನನಗೆ ಹೆಚ್ಚು ನಷ್ಟವಾಗಿದೆ’ ಎಂದಿದ್ದಾರೆ. ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು ‘ಅಲ್ಲಿ ಏನಾಯಿತೆಂದು ಎಲ್ಲರೂ ನೋಡಿದ್ದೀರಿ. ಅನೇಕ ಕ್ಯಾಮರಾಗಳ ಮುಂದೆಯೇ ಆ ಘಟನೆ ನಡೆದಿದೆ. ಅದರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ.
ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ
ಅಲ್ಲಿನ ಜನರೊಂದಿಗೆ ಉತ್ತಮ ಚಿತ್ರವೊಂದನ್ನು ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬುದು ಬೇಸರವಾಗಿದೆ’ ಎಂದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಸಂಘದ ಕಾರ್ಯಕರ್ತರು ನಗರದಲ್ಲಿ ಆಯೋಜನೆಗೊಂಡಿದ್ದ ಸಿದ್ಧಾರ್ಥ್ ಅವರ ‘ಚಿಕ್ಕು’ ಸಿನಿಮಾ ಪ್ರಚಾರವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಈ ವೇಳೆ ‘ನಮ್ಮ ಸಿನಿಮಾ ನೋಡಿ’ ಎಂದು ಕನ್ನಡದಲ್ಲಿಯೇ ಹೇಳಿ ಕೈ ಮುಗಿದು ಸಿದ್ಧಾರ್ಥ್ ಹೊರನಡೆದಿದ್ದರು.