ಕಾಲಿವುಡ್‌ ಚಿತ್ರರಂಗದ ಚಾಕೋಲೇಟ್‌ ಬಾಯ್‌ ಎಂದೇ ಹೆಸರಾದ ನಟ ಕಮ್‌ ಚರ್ಮರೋಗ ವೈದ್ಯ ಸೇತುರಾಮನ್‌ ಲಘು ಹೃದಯಘಾತದಿಂದ ಚೆನ್ನೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗಿನ್ನು ಕೇವಲ 36 ವರ್ಷ ವಯಸ್ಸಾಗಿತ್ತು. ಸೇತುರಾಮನ್‌ ಅವರನ್ನು ಚಿತ್ರರಂಗದಲ್ಲಿ ಎಲ್ಲರೂ ಸೇತು ಎಂದೇ ಕರೆಯುತ್ತಿದ್ದರು. 

'ಕನ್ನ ಲಡ್ಡು ತಿನ್ನ ಆಸಯ್ಯ' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ  ಸೇತುರಾಮನ್‌  ಸುಮಾರು 3-4 ಚಿತ್ರಗಳಲ್ಲಿ ಮಿಂಚಿದ್ದಾರೆ. ಮಾಡಿದ್ದು ಕೆಲವೇ ಚಿತ್ರಗಳಾದರೂ  ಸಾಕಷ್ಟು ಹೆಸರು ಮಾಡಿದ್ದರು. ಹಾಗೆ ಕೆಲವೊಂದು ಕಿರುತೆರೆ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದರು.

ಹಿರಿಯ ನಿರ್ದೇಶಕ, ನಟ ಎಂ.ಆರ್‌. ವಿಶ್ವನಾಥನ್‌ ನಿಧನ

ಸೇತು ಚಿತ್ರರಂಗಕ್ಕೆ ಕಾಲಿಡುವ ಮುನ್ನ ಚೆನ್ನೈನಲ್ಲಿ ತಮ್ಮದೇ ಕ್ಲಿನಿಕ್‌ನಲ್ಲಿ ಚರ್ಮರೋಗ ವೈದ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸೇತು ಅವರ ಕುಟುಂಬಕ್ಕೆ ಆ ದೇವರು ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪಾರ್ಥಿಸೋಣ.

ಸೇತು ಅಗಲಿಕೆಗೆ ಮನನೊಂದ ಚಿತ್ರರಂಗದ ಗಣ್ಯರು ಸಾಂತ್ವಾನ ಹೇಳಿದ್ದಾರೆ. ಖ್ಯಾತ ನಟ ಸತಿಶ್‌ ' ಸ್ಯಾಡ್‌ ನ್ಯೂಸ್. ನಟ ಹಾಗೂ ವೈದ್ಯ ಸೇತುರಾಮನ್‌ ಕೆಲ ಗಂಟೆಗಳ ಹಿಂದೆ ಹೃದಯಘಾತದಿಂದ ನಿಧನರಾಗಿದ್ದಾರೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸೋಣ' ಎಂದು ಟ್ಟೀಟ್‌ ಮಾಡಿದ್ದಾರೆ.