Asianet Suvarna News Asianet Suvarna News

ಲಡಾಖ್‌ನಲ್ಲಿ ಕನ್ನಡಿಗನ ಬೈಕ್ ರಿಪೇರಿ ಮಾಡಿಕೊಟ್ಟ ತಲಾ ಅಜಿತ್; ತನ್ನ ದೃಷ್ಟಿಕೋನ ಬದಲಾಯಿತು ಎಂದ ಫ್ಯಾನ್

ಅಜಿತ್ ಇತ್ತೀಚಿಗಷ್ಟೆ ಲಖಾಡ್‌ನಲ್ಲಿ ಬೈಡ್ ರೈಡ್ ಹೋಗಿದ್ದರು. ಈ ವೇಳೆ ನಡೆದ ಒಂದು ಇಂಟ್ರಸ್ಟಿಂಗ್ ಘಟನೆಯನ್ನು ಕನ್ನಡಿಗ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

Tamil Actor Ajith Kumar repaired a bike for a Kannadiga in Ladakh sgk
Author
First Published Sep 20, 2022, 5:56 PM IST

ಸೌತ್ ಸ್ಟಾರ್ ಅಜಿತ್ ಕುಮಾರ್ ತುಂಬಾ ಸಿಂಪಲ್. ಸ್ಟಾರ್ ಎನ್ನುವ ಅಹಂ ಕೊಂಚವು ಇಲ್ಲದ ನಟ.  ತುಂಬಾ ಸರಳವಾಗಿ ಜೀವನ ನಡೆಯೋ ಅಜಿತ್ ಅಭಿಮಾನಿಗಳ ಜೊತೆಯ ಅಷ್ಟೆ ಸರಳವಾಗಿ ಇರುತ್ತಾರೆ. ಹಾಗಾಗಿ ಅಜಿತ್ ಎಂದರೆ ಎಲ್ಲಾ ಸಿನಿಪ್ರಿಯರಿಗು ತುಂಬಾ ಇಷ್ಟ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಅಜಿತ್ ಕುಮಾರ್ ಅವರು ಸಿನಿಮಾ ಮಾತ್ರವಲ್ಲದೆ ಬೈಕ್ ರೇಸ್, ಸೈಕ್ಲಿಂಗ್, ಕ್ರೀಡೆ ಹೀಗೆ ನಾನಾರೀತಿ ತನ್ನನ್ನು ತೊಡಿಸಿಕೊಂಡಿದ್ದಾರೆ. ತುಂಬಾ ಇಷ್ಟ ಇಷ್ಟಪಡುತ್ತಾರೆ. ಹೆಚ್ಚಾಗಿ ಅಜಿತ್ ಬೈಕ್ ರೈಡ್ ಮಾಡುತ್ತಿರುತ್ತಾರೆ. ಬೈಕ್ ಏರಕಿ ಅಜಿತ್ ದೇಶ ವಿದೇಶಗಳನ್ನು ಸುತ್ತಾಡುತ್ತಿರುತ್ತಾರೆ. ದೇಶದ ಮೂಲ ಮೂಲೆಗಳಿಗೆ ಸೈಕ್ಲಿಂಗ್ ಮಾಡುತ್ತಾರೆ.  ಅಜಿತ್ ತಾನು ಸ್ಟಾರ್ ನಟ ಎಂದು ಯಾರಿಗೂ ಗೊತ್ತಾದ ಹಾಗೆ ಪ್ರಚಾರ ನೀಡದೆ ರೈಡ್ ಹೋಗುತ್ತಾರೆ. ಹಾಗಾಗಿ ಅಜಿತ್ ಅಭಿಮಾನಿಗಳ ಮಧ್ಯೆಯೇ ರೈಡ್ ಹೋದರು ಗೊತ್ತಾಗುವುದಿಲ್ಲ. 

ಅಜಿತ್ ಇತ್ತೀಚಿಗಷ್ಟೆ ಲಖಾಡ್ ರೈಡ್ ಹೋಗಿದ್ದರು. ಈ ವೇಳೆ ನಡೆದ ಒಂದು ಇಂಟ್ರಸ್ಟಿಂಗ್ ಘಟನೆಯನ್ನು ಕನ್ನಡಿಗ ಅಭಿಮಾನಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಜಿತ್ ಅಭಿಮಾನಿ ಮಂಜು ಕಶ್ಯಪ್ ಅವರು ಸಹ ಲಡಾಖ್ ಟ್ರಿಪ್ ಹೋಗಿದ್ದರು. ಈ ವೇಳೆ ತನ್ನ ಬೈಕ್ ಹಾಳಾದ ಸ್ವತಃ ಅಜಿತ್ ಅವರೇ ಬಂದು ಬೈಕ್ ರಿಪೇರಿ ಮಾಡಿಕೊಟ್ಟರು ಬಳಿಕ ಟೀ ಕುಡಿದು ಸಮಯ ಕಳೆದರು ಎಂದು ಹೇಳಿದ್ದಾರೆ. ಈ ಘಟನೆ ಬಳಿಕ ತನ್ನ ದೃಷ್ಟಿಕೋನ ಸಂಪೂರ್ಣ ಬದಲಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ವಿವರಿಸಿದ್ದಾರೆ. 

ಮಂಜು ತನ್ನ ಇನ್ಸ್ಟಾಗ್ರಾಮ್‌ನಲ್ಲಿ 'ನಾನು ಲಡಾಖ್‌ನಲ್ಲಿ ಬೈಕ್‌ ರೈಡ್ ಮಾಡುತ್ತಿದ್ದೆ. ನನ್ನ ಬೈಕ್ ಇದ್ದಕ್ಕಿದ್ದಂತೆಯೇ ನಿಂತು ಹೋಯಿತು. ರಸ್ತೆ ಬದಿ ನಿಲ್ಲಿಸಿಕೊಂಡಿದ್ದೆ. ಅದೇ ದಾರಿಯಲ್ಲಿ ಅಜಿತ್ ಮತ್ತು ಅವರ ಸ್ನೇಹಿತರು ಹೋಗುತ್ತಿದ್ದರು. ನಾನು ಸಹಾಯ ಕೇಳಿದಾಗ ಅಜಿತ್ ಅವರು ತಕ್ಷಣವೇ ತಮ್ಮ ಬೈಕ್ ನಿಲ್ಲಿಸಿ ಸಹಾಯಕ್ಕೆ ಧಾವಿಸಿದರು' ಎಂದು ಬರೆದುಕೊಂಡಿದ್ದಾರೆ.   

'ನನ್ನ ಬೈಕ್ ಟ್ರಿಪ್‌ನಲ್ಲಿ ಮೊದಲ ಬಾರಿಗೆ ನನಗೆ ನನ್ನ ಬೈಕ್ ಹಾಳಾಯಿತು. ನಾನು ಸಹಾಯಕ್ಕಾಗಿ ಅಲ್ಲಿ ಹುಡುಕುತ್ತಿದ್ದೆ, ಒಂದು bmw 1250GSA (ನನ್ನ ಕನಸಿನ ಬೈಕ್) ಬಂತು. ನಾನು ಅವತ್ತ ಕೈ ಬೀಸಿದೆ, ನಾನು ಅವನಿಗೆ ಏರ್ ಕಂಪ್ರೆಸರ್ ಕೇಳಿದೆ. ಅವರು ಇನ್ನೊಂದು ಬೈಕ್‌ನಲ್ಲಿ ಇದೆ ಎಂದು ಹೇಳಿದರು. ಆದರೆ ಅದು ಕಾರಿನಲ್ಲಿತ್ತು. ಆ ಕಾರು ಹಿಂದೆ ಇತ್ತು, ನಾನು ಅವನೊಂದಿಗೆ ಬೈಕಿನ ಬಗ್ಗೆ ಸ್ವಲ್ಪ ಚಾಟ್ ಮಾಡಿದೆ. ಬಳಿಕ ಅವರು ನಿಮ್ಮ ಹೆಸರೇನು ಮತ್ತು ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿದರು ಮತ್ತು ನಂತರ ಅವರು ಹಾಯ್ ನಾನು ಅಜಿತ್ ಎಂದು ಪರಿಚಯಿಸಿದರು ನಿನ್ನನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಯಿತು ಎಂದು ಪರಿಚಯಿಸಿಕೊಂಡರು' ಎಂದು ಹೇಳಿದ್ದಾರೆ. 

ಇಂಗ್ಲೆಂಡ್‌ನಲ್ಲಿ ಎರಡು ದಿನ ಬೈಕ್‌ ರೈಡ್ ಹೊರಟ ನಟ ಅಜಿತ್!

'ಆಗ ಸ್ವತಃ ಸೂಪರ್‌ಸ್ಟಾರ್ ಕೆಳಗಿಳಿದು ಬಂದು ಬೈಕ್ ಸರಿಪಡಿಸಲು ಸಹಾಯ ಮಾಡಿದರು, ನಂತರ ನಾವು ಎರಡು ಗಂಟೆಗಳ ನಂತರ ರೈಡ್ ಪ್ರಾರಂಭಿಸಿದೆವು. ಅವರು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮೊಂದಿಗೆ ಚಹಾವನ್ನು ಸೇವಿಸುವುದು. ಇದು ನಮ್ಮ ಭಾಗ್ಯ. ಅನೇಕ ಸಮಯ ಮಾತನಾಡಿ ನಮಗೆ ಶುಭಹಾರೈಸಿ ಅಲ್ಲಿಂದ ಹೊರಟರು' ಎಂದು ಬರೆದುಕೊಂಡಿದ್ದಾರೆ. 

Valimai Movie: ಅಜಿತ್ ಬಗ್ಗೆ ಸ್ಪೆಷಲ್ ಮಾಹಿತಿಯನ್ನು ಹಂಚಿಕೊಂಡ ಹುಮಾ ಖುರೇಷಿ ಹಾಗೂ ಕಾರ್ತೀಕೆಯ!

'ನಾನು ಇಡೀ ಕಥೆಯನ್ನು ಪೋಸ್ಟ್ ಮಾಡಲು ಕಾರಣ ಎರಡು ವಿಷಯ.
1. ಸ್ವತಃ ಲೆಜೆಂಡ್ ಜೀರೋ ಆಟಿಟ್ಯೂಡ್ ಮತ್ತು ತನ್ನ ಅಭಿಮಾನಿಗಳು ಮತ್ತು ಜನರ ಬಗ್ಗೆ ಅದ್ಭುತವಾದ ಪ್ರೀತಿಯನ್ನು ಹೊಂದಿರುತ್ತಾರೆ.2. ನಾನು ಅದೃಷ್ಟಶಾಲಿ ಮತ್ತು ಅವನು ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿದರು ಈ ದಿನವನ್ನು ನಾನು ಮರೆಯಲಾರೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ. 

ಮಂಜು ಅವರ ಈ ಪೋಸ್ಟ್ ಅಜಿತ್ ಅಭಿಮಾನಿಗಳ ಹೃದಯ ಗೆದ್ದಿದೆ. ಅಭಿಮಾನಿಗಳು ಪೋಸ್ಟ್ ವೈರಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಜಿತ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಈ ವರ್ಷ ಅಜಿತ್ ಅವರ 'ವಲಿಮೈ' ಸಿನಿಮಾ ತೆರೆಕಂಡಿತ್ತು. ಅದರಲ್ಲೂ ಬೈಕ್ ಚೇಸ್ ಸೀನ್‌ಗಳಿದ್ದವು. ಅದನ್ನು ಸ್ವತಃ ಅಜಿತ್ ಅವರೇ ಯಾವುದೇ ಡ್ಯೂಪ್ ಬಳಸದೇ ಮಾಡಿದ್ದರು. ಇದೀಗ ಅವರು ತಮ್ಮ 61ನೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ನಡುವೆಯೂ ಅಜಿತ್ ಬೈಕ್ ರೇಸ್ ಹೋಗುತ್ತಿರುತ್ತಾರೆ. 

Follow Us:
Download App:
  • android
  • ios