ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದ ತಂದೆಯನ್ನು ಕಳೆದುಕೊಂಡು ನಟ ಅಜಿತ್ ಕುಮಾರ್...
ತಮಿಳು ಚಿತ್ರರಂಗ ತಲಾ ಎಂದೇ ಗುರುತಿಸಿಕೊಂಡಿರುವ ಅಜಿತ್ ಕುಮಾರ್ ಅವರ ತಂದೆ ಇಂದು ಅಗಲಿದ್ದಾರೆ. 85 ವರ್ಷದ ಸುಬ್ರಹ್ಮಣ್ಯಂ ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಜಿತ್ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ತಂದೆ ತುಂಬಾನೇ ಸಪೋರ್ಟ್ ಮಾಡಿದ್ದಾರೆ ಎಂದು ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.
ಸುಬ್ರಹ್ಮಣ್ಯಂ ಮೂಲತಃ ಕೇರಳದ ಪಾಲಕ್ಕಾಡ್‌ನ ಮಲೆಯಾಳಿ ಆಗಿದ್ದು ಚೆನ್ನೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ಪತ್ನಿ ಮೋಹಿನಿ ಮತ್ತು ಮೂರುವರು ಮಕ್ಕಳಾದ ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್‌ನ ಅಗಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಜಿತ್ ಅಭಿಮಾನಿಗಳು ಮತ್ತು ಸಿನಿಮ ಸ್ನೇಹಿತರು ಸಂತಾಪ ಸೂಚಿಸುತ್ತಿದ್ದಾರೆ. ಪತ್ನಿ ಶಾಲಿನಿ ಮತ್ತು ಮಕ್ಕಳ ಜೊತೆ ಅಜಿತ್ ಯುರೋಪ್‌ನಲ್ಲಿ ರಜೆ ಎಂಜಾಯ್ ಮಾಡುತ್ತಿದ್ದರು ಸುದ್ದಿ ಕೇಳಿದ ತಕ್ಷಣವೇ ಹೊರಟಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಅಷ್ಟರಲ್ಲಿ ಅಜಿತ್ ಕುಟುಂಬ ಜೊತೆ ಚೆನ್ನೈಗೆ ಆಗಮಿಸಲಿದ್ದಾರೆ.
ಅನೂಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಜಾಯಿಂಟ್ ಸ್ಟೇಟ್ಮೆಂಟ್ ರಿಲೀಸ್ ಮಾಡಿದ್ದಾರೆ. 'ಇಂದು ಪಿ.ಎಸ್. ಮಣಿ ಮುಂಜಾನೆ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ತುಂಬಾ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 85 ವರ್ಷವಾಗಿತ್ತು. ನಿಮ್ಮ ಪ್ರೀತಿ ಮತ್ತು ಸಪೋರ್ಟ್‌ಗೆ ನಾವು ಎಂದೂ ಚಿರಋಣಿ. ಈ ಸಮಯದಲ್ಲಿ ನಮ್ಮ ಪರ ನಿಂದ ವೈದ್ಯರಿಗೆ ಧನ್ಯವಾದಗಳು. ನಾಲ್ಕು ವರ್ಷಗಳಿಂದ ಪಾರ್ಶ್ಚವಾಯುವಿನಿಂದ ಬಳಲುತ್ತಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.
ಈ ಸಮಯದಲ್ಲಿ ನಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತಿರುವವರಿಗೂ ಧನ್ಯವಾದಗಳು. ಅನೇಕರು ಕರೆ ಮತ್ತು ಮೆಸೇಜ್ ಮಾಡುತ್ತಿದ್ದೀರಿ ರಿಪ್ಲೈ ಮಾಡಲು ಆಗುತ್ತಿಲ್ಲ. ಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ನಡೆಸಲಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ..
