ಜೈಲರ್ 2 ಅಡ್ಡಾದಿಂದ ಹೊಸದೊಂದು ನ್ಯೂಸ್ ಬಂದಿದೆ. ಅದೂ ಜೈಲರ್ ಪಾರ್ಟ್ 2ನಲ್ಲಿ ನಟಿ ತಮನ್ನಾ ಹಾಡು ಇರೋದಿಲ್ಲ ಅಂತ. ಹಾಗಿದ್ರೆ ಹಾಡೇ ಇರೋದಿಲ್ವಾ ಅಥವಾ ತಮನ್ನಾ ಇರೋದಿಲ್ವಾ ಅಂತ ಕೇಳಿದ್ರೆ, ಹಾಡು ಇರಲಿದೆ, ಆದ್ರೆ ತಮನ್ನಾ ಭಾಟಿಯಾ (Tamannah Bhatia) ಅದರಲ್ಲಿ ಇರೋದಿಲ್ಲ ಎಂಬ ಉತ್ತರ ಸಿಕ್ಕಿದೆ.

ಜೈಲರ್ 2 ಸಾಂಗ್‌ನಲ್ಲಿ ತಮನ್ನಾ ಇರಲ್ಲ!

Rajinikanth Jailer 2 : ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ನಟನೆ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ 'ಜೈಲರ್' ಚಿತ್ರ 2023ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ಸುನಿಲ್, ಮೋಹನ್ ಲಾಲ್, ಜಾಕಿ ಶ್ರಾಫ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ, ಹಾಡೊಂದರಲ್ಲಿ ನಟಿ ತಮನ್ನಾ ಕಾಣಿಸಿಕೊಂಡು ಭಾರೀ ಮಿಂಚು ಹರಿಸಿದ್ದರು. ಇದೀಗ 'ಜೈಲರ್ 2' ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಸಾಕಷ್ಟು ಕುತೂಹಲ ಕೆರಳಿಸುತ್ತಿದೆ.

ಹಾಗೇ, ಜೈಲರ್ 2 ಅಡ್ಡಾದಿಂದ ಹೊಸದೊಂದು ನ್ಯೂಸ್ ಬಂದಿದೆ. ಅದೂ ಜೈಲರ್ ಪಾರ್ಟ್ 2ನಲ್ಲಿ ನಟಿ ತಮನ್ನಾ ಹಾಡು ಇರೋದಿಲ್ಲ ಅಂತ. ಹಾಗಿದ್ರೆ ಹಾಡೇ ಇರೋದಿಲ್ವಾ ಅಥವಾ ತಮನ್ನಾ ಇರೋದಿಲ್ವಾ ಅಂತ ಕೇಳಿದ್ರೆ, ಹಾಡು ಇರಲಿದೆ, ಆದ್ರೆ ತಮನ್ನಾ ಭಾಟಿಯಾ (Tamannah Bhatia) ಅದರಲ್ಲಿ ಇರೋದಿಲ್ಲ ಎಂಬ ಉತ್ತರ ಸಿಕ್ಕಿದೆ. ಹಾಗಿದ್ರೆ, ತಮನ್ನಾ ಜಾಗಕ್ಕೆ ಬಂದಿರೋದು ಯಾರು?

ಅನಿರುಧ್ ಸಂಗೀತ ಸಂಯೋಜಿಸಿದ್ದ ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿತ್ತು. 200 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಿಸಲಾದ ಜೈಲರ್ ವಿಶ್ವಾದ್ಯಂತ 600 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿತ್ತು. ಚಿತ್ರದ ಯಶಸ್ಸಿನ ನಂತರ ಜೈಲರ್ 2 ತೆರೆಗೆ ಬರಲು ಸಿದ್ದವಾಗುತ್ತಿದೆ.. ಈ ಚಿತ್ರವನ್ನೂ ಸನ್ ಪಿಕ್ಚರ್ಸ್ ಕೂಡ ನಿರ್ಮಿಸುತ್ತಿದೆ, ಇನ್ನೂ ಹೆಚ್ಚಿನ ಬಜೆಟ್‌ ಬಳಸಿಕೊಂಡು! ಆದರೆ, ಅದ್ರಲ್ಲಿ ನಟಿ ತಮನ್ನಾ ನೋಡಲು ಆಗೋದಿಲ್ಲ ಅನ್ನೋದು ಸತ್ಯ.. ಆದ್ರೆ ಅಳಬೇಡಿ, ಬೇರೆ ನಟಿ ಬರ್ತಿದಾರೆ..!

ವಿದ್ಯಾ ಬಾಲನ್ ಎಂಟ್ರಿ!

ಹೌದು, 'ಜೈಲರ್ 2' ಮುಂದಿನ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗಲಿದೆ. ವಿದ್ಯಾ ಬಾಲನ್ 'ಜೈಲರ್ 2' ಚಿತ್ರಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದುವರದಿಯಾಗಿದೆ. ಜೊತೆಗೆ, ಸಂತಾನಂ ಇದರಲ್ಲಿ ಹಾಸ್ಯ ಸೇರಿದಂತೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತೆಲುಗು ನಟ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ನಟ ಶಾರುಖ್ ಖಾನ್, ವಿಜಯ್ ಸೇತುಪತಿ ಕೂಡ ಇದರಲ್ಲಿ ನಟಿಸಬಹುದು ಎನ್ನಲಾಗುತ್ತಿದೆ.

ತಮನ್ನಾ ಜಾಗಕ್ಕೆ ಬಂದಿರೋದು ಯಾರು?

ಆದ್ರೆ.. 'ಜೈಲರ್' ಚಿತ್ರದಲ್ಲಿ 'ಕಾವಾಲಾ' ಹಾಡಿಗೆ ನಟಿ ತಮನ್ನಾ ಭಾಟಿಯಾ ಸ್ಪೆಷಲ್ ಸಾಂಗ್‌ನಲ್ಲಿ ಡಾನ್ಸ್‌ ಮಾಡಿದ್ದರು. ಆ ಹಾಡು ಸಖತ್ ಹಿಟ್ ಆಗಿತ್ತು. ಸೋಷಿಯಲ್ ಮೀಡಿಯಾಗಳಲ್ಲೂ ಸಖತ್ ಸಂಚಲನ ಮೂಡಿಸಿತ್ತು.. ಈ ಹಾಡು ಇಂದಿಗೂ ಅನೇಕ ಜನರಿಗೆ ಅಚ್ಚುಮೆಚ್ಚಿನದಾಗಿದೆ. ಉಂಬರುವ 'ಜೈಲರ್ 2' ಚಿತ್ರದಲ್ಲಿಯೂ ಇದೇ ರೀತಿಯ ಹಾಡನ್ನು ಸೇರಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿಗೆ ನೃತ್ಯ ಮಾಡಲು ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಸ್ಪೇಷಲ್ ಸಾಂಗ್‌ಗೆ ನೃತ್ಯ ಮಾಡಲು ನೋರಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು ಚಿತ್ರೀಕರಣ ಶೀಘ್ರದಲ್ಲೇ ಶುರು ಎನ್ನಲಾಗಿದೆ.