ಕೆಜಿಎಫ್ ನಟಿ ತಮನ್ನಾ ಭಾಟಿಯಾ ಪೋಷಕರಿಗೆ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ. ಇದೀಗ ತಮನ್ನಾ ಫ್ಯಾನ್ಸ್ ಕೂಡಾ ತಮ್ಮ ನೆಚ್ಚಿನ ನಟಿಯ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ.

ಬಾಲಿವುಡ್ ಮತ್ತು ಸೌತ್ ಸಿನಿಮಾದಲ್ಲಿ ಆಕ್ಟಿವ್ ಆಗಿರುವ ಬಾಹುಬಲಿ ನಟಿ ಇತ್ತೀಚೆಗಷ್ಟೇ ಟ್ವಿಟರ್ ಮೂಲಕ ತಮ್ಮ ಪೋಷಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಉಳಿದ ಕುಟುಂಬಸ್ಥರಿಗೆ ಕೊರೋನಾ ನೆಗೆಟಿವ್ ಇರುವುದಾಗಿ ಅವರು ಹೇಳಿದ್ದಾರೆ.

ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

ನನ್ನ ಪೋಷಕರಲ್ಲಿ ಕೊರೋನಾ ಲಕ್ಷಣ ಕಾಣಿಸಿಕೊಂಡಿತ್ತು. ಹಾಗಾಗಿ ಮನೆಯವರೆಲ್ಲ ಕೊರೋನಾ ಪರೀಕ್ಷೆ ಮಾಡಿಸಿಕೊಂಡೆವು. ದುರದೃಷ್ಟವಶಾತ್ ನನ್ನ ಪೋಷಕರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಈಗಾಗಲೇ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಾವು ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ನನ್ನನ್ನು ಸೇರಿ ಮನೆಯ ಉಳಿದವರಿಗೆ ಕೊರೋನಾ ನೆಗೆಟಿವ್ ಬಂದಿದೆ ಎಂದಿದ್ದಾರೆ.

'ಲವ್ ಮಾಕ್‌ಟೇಲ್' ತೆಲುಗು ರಿಮೇಕ್‌ನಲ್ಲಿ ತಮನ್ನಾ

ಸೋಷಿಯಲ್ ಮೀಡಿಯಾದಲ್ಲಿ ತಮನ್ನಾ ಪೋಷಕರ ಆರೋಗ್ಯಕ್ಕಾಗಿ ಫ್ಯಾನ್ಸ್ ವಿಶ್ ಮಾಡಿ ಪ್ರಾರ್ಥಿಸಿದ್ದಾರೆ. ಈ ಮೊದಲು ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ, ಆರಾಧ್ಯ, ಕನ್ನಿಕ ಕಪೂರ್ ಸೇರಿ ಬಹಳಷ್ಟು ಸೆಲೆಬ್ರಿಟಿಗಳಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇವರೆಲ್ಲರೂ ಚಿಕಿತ್ಸೆ ಪಡೆದು ಹುಷಾರಾಗಿ ಮರಳಿದ್ದಾರೆ.