ಏಷ್ಯನ್ ಫಿಲ್ಮ್ ಅವಾಡ್ರ್ಸ್‌ 2020ಯಲ್ಲಿ ಅನುಭವ್ ಸಿನ್ಹಾ ನಿರ್ದೇಶನದ ತಾಪ್ಪಡ್ ಸಿನಿಮಾ 2 ಅವಾರ್ಡ್ ಬಾಚಿಕೊಂಡಿದೆ. ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ತಾಪ್ಪಡ್ ಸಿನಿಮಾ ಬೆಸ್ಟ್ ಫಿಲ್ಮ್ ಮತ್ತು ಬೆಸ್ಟ್ ಎಡಿಟಿಂಗ್ ವಿಭಾಗದಲ್ಲಿ 14ನೇ ಏಷ್ಯನ್ ಫಿಲ್ಮ್ ಅವಾಡ್ರ್ಸ್‌ಗೆ ಆಯ್ಕೆಯಾಗಿದೆ.

ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಿರ್ದೇಶದಕ ಅನುಭವ್ ಸಿನ್ಹಾ ತಾಪ್ಪಡ್ ಇನ್, ಯೇ..! ಎಂದು ಖುಷಿ ಹಂಚಿಕೊಂಡಿದ್ದಾರೆ. ಕೈ ಇಶಿಕಾವಾ ಅವರ ಲಿಸನ್‌ ಟು ದ ಯುನಿವರ್ಸ್, ಸೋ ಲಾಂಗ್, ಮೈ ಸನ್ ಬೈ ವಾಂಗ್ ಕ್ಸಿಯೋಶ್ವೈ, ಅ ಸನ್ ಬಯ್ ಚುಂಗ್-ಮಾಂಗ್-ಹಾಂಗ್, ಮಹಮ್ಮದ್ ರಸೋಲವ್ ಅವರ ದೇರ್ ಈಸ್ ನೋ ಎವಿಲ್ ಹಾಗೂ ಬಾಂಗ್ ಜೂನ್ ಹೋ ಅವರ ಆಸ್ಕರ್ ವಿನ್ನಿಂಗ್ ಪಾರಸೈಟ್ ತಾಪ್ಪಡ್ ಜೊತೆ ಆಯ್ಕೆಯಾಗಿದೆ.

ಗಂಡ ಕೊಡೋ ಆ ಒಂದು ಏಟು ಯಾವತ್ತೂ 'ಕೇವಲ ಒಂದೇಟು' ಆಗಿರೋಲ್ಲ...

ಬೆಸ್ಟ್ ಎಡಿಟಿಂಗ್ ವಿಭಾಗದಲ್ಲಿ ತಪ್ಪಾಡ್‌ನಿಂದ ರಾಮ್‌ಚಂದನಿ ಬೆಟ್ಟರ್ ಡೇಸ್‌ನ ಝಾಂಗ್ ಇರೋ ಜೊತೆ ಸ್ಪರ್ಧಿಸಲಿದ್ದಾರೆ. ಅನುಭವ್ ಸಿನ್ಹಾ ಅವರ ಟ್ವೀಟ್‌ಗೆ ಶುಭಾಶಯಗಳು ಹರಿದು ಬರುತ್ತಿವೆ. ರೀಮಾ ಕಗ್ಟಿ ಟ್ವೀಟ್ ಮಾಡಿ, ಶುಭಾಶಯಗಳು ಎಂದಿದ್ದಾರೆ.

ಅಲಂಕೃತಾ ಶ್ರೀವಾಸ್ತವ ಟ್ವೀಟ್ ಮಾಡಿ, ಆಸಂ, ಆಸಂ, ಶುಭಾಶಯ ಎಂದಿದ್ದಾರೆ. ಪತಿಯ ಜೊತೆ ಹ್ಯಾಪಿಯಾಗಿ ಬದುಕುತ್ತಿದ್ದ ಅಮೃತಾಗಿ ಪಾರ್ಟಿಯೊಂದರಲ್ಲಿ ಎಲ್ಲರ ಮುಂದೆ ಆಕೆಯ ಪತಿ ಹೊಡೆಯುತ್ತಾನೆ. ಇದನ್ನು ವಿರೋಧಿಸಿ ಆಕೆ ವಿಚ್ಛೇದನೆಗೆ ಅರ್ಜಿ ಸಲ್ಲಿಸುವುದೇ ಸಿನಿಮಾದ ಕಥೆ.