ದೆಹಲಿಯ ಸಿಂಗು ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸ್ವರಾ ಭಾಸ್ಕರ್ ಸೇರಿಕೊಂಡಿದ್ದಾರೆ. ನಟಿ ಇತರ ಮಹಿಳಾ ಪ್ರತಿಭಟನಾಕಾರರೊಂದಿಗೆ ಕುಳಿತಿರುವ ಫೋಟೋಗನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.

ಪ್ರತಿಭಟನಾ ನಿರತ ರೈತರು ಮತ್ತು ವೃದ್ಧರ ಮನೋಭಾವ, ಸಂಕಲ್ಪ ಮತ್ತು ದೃಢ ನಿಶ್ಚಯವನ್ನು ನೋಡುವ ದಿನ #SinghuBorder #FarmersProtests ಎಂದು ನಟಿ ಟ್ವೀಟ್ ಮಾಡಿದ್ದಾರೆ.

ಉಗ್ರ ಸಂಘಟನೆಯಿಂದ ರೈತ ಪ್ರತಿಭಟನೆ ಹೈಜಾಕ್; ಖಲಿಸ್ತಾನ ವಿರುದ್ಧ ತನಿಖೆಗೆ ಸಜ್ಜಾದ MHA!

ಪ್ರತಿಭಟನಾಕಾರರು ತಮ್ಮ ಟ್ರಕ್‌ಗಳಿಂದ ತಾತ್ಕಾಲಿಕ ಟೆಂಟ್, ಮನೆಗಳನ್ನು ಮಾಡಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ರೈತರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಮನೆಗಳು ಎಂದು ಕ್ಯಾಪ್ಶನ್ ಬರೆದಿದ್ದಾರೆ.

ಕೇಂದ್ರ ಸರ್ಕಾರವು ಹೊಸದಾಗಿ ಜಾರಿಗೆ ತಂದ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ದೆಹಲಿಯ ಸಿಂಗು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ಅಲ್ಲಿಯೇ  ಬಿಡಾರ ಹೂಡಿದ್ದಾರೆ. ರೈತರು ಮತ್ತು ಕೇಂದ್ರದ ನಡುವೆ ಮಾತುಕತೆ ನಡೆಯುತ್ತಿದೆ ಆದರೆ ಇನ್ನೂ ಅಂತಿಮ ನಿರ್ಧಾರಗಳಾಗಿಲ್ಲ.