ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ಅಭಿಮಾನಿಯಾಗಿರುವ ಯುವಕನೊಬ್ಬ ಚಂದ್ರನಲ್ಲಿ ಜಾಗ ಖರೀದಿಸಿದ್ದಾರೆ. ಉಲ್ಲಾಸ್‌ನಗರದ ರಾಮ್ ವಾಧ್ವಾ (31) ಎಂಬವರು ಸುಶಾಂತ್ ಸಿಂಗ್‌ನಿಂದ ಪ್ರೇರೇಪಿತರಾಗಿ ಜಾಗ ಖರೀದಿ ಮಾಡಿದ್ದಾರೆ.

ಥಾನೆಯಲ್ಲಿ ತಂದೆಯ ಜೊತೆ ಡೆವಲಪರ್ ಆಗಿರುವ ಇವರು ನಟ ಸುಶಾಂತ್ ಅವರಿಂದ ಪ್ರಭಾವಿತರಾಗಿ ಚಂದ್ರನಲ್ಲಿ ಜಾಗ ಖರೀದಿಸಲು ನಿರ್ಧರಿಸಿದ್ದಾರೆ. ಸುಶಾಂತ್ ಚಂದ್ರನಲ್ಲಿ ಜಾಗ ಖರೀದಿಸಿದಾಗಲೇ ತಾವೂ ಖರೀದಿಸಲು ನಿರ್ಧರಿಸಿದ್ದರು ರಾಮ್.

ಸುಶಾಂತ್ ಸಿಂಗ್ ಜೊತೆ ನಟಿಸಿದ್ದ ನಟ ಆಸಿಫ್ ಆತ್ಮಹತ್ಯೆ, ಬೆಚ್ಚಿ ಬಿದ್ದ ಬಾಲಿವುಡ್

ಸುಶಾಂತ್ ಜಾಗ ಖರೀದಿಸಿದ್ದು ತಿಳಿದು ಈ ಬಗ್ಗೆ ನಾನು ಮಾಹಿತಿ ಕಲೆ ಹಾಕಿದೆ. ಅಮೆರಿಕದ ಸೊಸೈಟಿ ಲೂನರ್ ಲ್ಯಾಂಡ್ ರೆಕಾರ್ಡ್‌ ಇಲಾಖೆ ಮೂಲಕ ಜಾಗ ಖರೀದಿಸಿದ್ದೇನೆ ಎಂದಿದ್ದಾರೆ. ಒಂದು ಎಕರೆ ಜಾಗವನ್ನು ನಾನು ಚಂದ್ರನಲ್ಲಿ ಖರೀದಿಸಿದ್ದೇನೆ ಎಂದಿದ್ದಾರೆ. ಸುಶಾಂತ್ ಚಂದ್ರನಲ್ಲಿ ಜಾಗ ಖರೀದಿಸಿದ ಬಾಲಿವುಡ್‌ನ ಮೊದಲ ನಟ.