ಧರ್ಮಶಾಲಾ(ನ.12): ಸೆಲೆಬ್ರೆಟಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ ಅನ್ನೋ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಇದೀಗ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದ ಮತ್ತೊರ್ವ ನಟ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಿಂಗ್ ಜೊತೆ ಕೈ ಪೋಚೆ ಚಿತ್ರ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಚಿತ್ರದಲ್ಲಿ ನಟಿಸಿದ್ದ ಆಸಿಫ್ ಬಾಸ್ರ ಖಾಸಗಿ ಅತಿಥಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟ ​ಸು​ಶಾಂತ್‌ದು ಕೊಲೆ: ಏಮ್ಸ್‌ ವೈದ್ಯನ ಆಡಿಯೋದಿಂದ ಕೇಸ್‌ಗೆ ಬಿಗ್ ಟ್ವಿಸ್ಟ್!

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ಖಾಸಗಿ ಅತಿಥಿ ಗೃಹದಲ್ಲಿ ಆಸಿಫ್ ಬಾಸ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೊರೆನ್ಸಿಕ್ ತಂಡ, ಪೊಲೀಸರು ಸೇರಿದಂತೆ ಸ್ಥಳಕ್ಕೆ ಧಾವಿಸಿ ಆಸಿಫ್ ಬಾಸ್ರ ಶರೀರ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಮನೆಗೆಲಸದ ವಿಚಾರಕ್ಕೆ ತಾಯಿ ಬೈದಿದ್ದಕ್ಕೆ ಬಾಲಕಿ ಆತ್ಮಹತ್ಯೆ

ಜಬ್ ವಿ ಮೆಟ್ ಸೇರಿದಂತೆ ಖ್ಯಾತ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಆಸಿಫ್ ಬಾಸ್ರ ಆತ್ಮಹತ್ಯೆಗೆ ಬಾಲಿವುಡ್ ಬೆಚ್ಚಿ ಬಿದ್ದಿದೆ. ಲಾಕ್‌ಡೌನ್ ಆರಂಭಕ್ಕೂ ಮೊದಲು ಬಾಲಿವುಡ್ ನಟ ಮನೋಜ್ ಬಾಜಪೇಯಿ, ಆಸಿಫ್ ಬಾಸ್ರಾ ಜೊತೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಇದೀಗ ಆತ್ಮಹತ್ಯೆಗೆ ಮನೋಜ್ ಬಾಜಪೇಯಿ ತೀವ್ರ ನೋವುಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ತನಿಖೆಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಇದರ ನಡುವೆ ಸುಶಾಂತ್ ಜೊತೆ ನಟಿಸಿದ್ದ ಆಸಿಫ್ ಆತ್ಮಹತ್ಯೆ ಮಾಡಿಕೊಂಡಿರುವುದು ಹಲುವು ಅನುಮಾನಗಳಿಗೆ ಕಾರಣವಾಗಿದೆ. ಬಾಲಿವುಡ್ ನಟ, ನಿರ್ಮಾಪ, ಹಾಗೂ ನಿರ್ದೇಶಕರು ಆಸಿಪ್ ಬಾಸ್ರ ಸಾವಿಗೆ ಸಂತಾಪ ಸೂಚಿಸಿದ್ದಾರೆ.