ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರಿಂ ಕೋರ್ಟ್‌ ತೀರ್ಪು ನೀಡಿದೆ. ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಾವಿನ ತನಿಖೆಯನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

"

ರಿಯಾ ಚಕ್ರವರ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ನೀಡಿದೆ. ಸುಶಾಂತ್ ಸಾವಿಗೆ ಸಂಬಂಧಿಸಿ ಮುಂಬೈ ಪೊಲೀಸರು ಕಲೆ ಹಾಕಿದ ಎಲ್ಲ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

ಸುಶಾಂತ್ ಸಿಂಗ್ ಸಾವು; ವಿಡಿಯೋ ಬಿಡುಗಡೆ ಮಾಡಿದ ಅಂಕಿತಾ ಲೋಕಂಡೆ

ಬಿಹಾರದ ಪಾಟ್ನಾದಲ್ಲಿ ಸುಶಾಂತ್ ತಂದೆ ಕೆಕೆ ಸಿಂಗ್ ಎಫ್‌ಐಆರ್ ದಾಖಲಿಸಿರುವುದು ಸರಿಯಾಗಿದೆ. ಹೀಗಾಗಿ ಬಿಹಾರ ಸರ್ಕಾರ ಘಟನೆಯಲ್ಲಿ ಸಿಬಿಐ ತನಿಖೆ ಆಗ್ರಹಿಸುವುದರಲ್ಲಿ ತಪ್ಪಿಲ್ಲ ಎಂದು ಕೋರ್ಟ್‌ ತಿಳಿಸಿದೆ.

ಪಟ್ನಾದಲ್ಲಿ ದಾಖಲಿಸಲಾದ ಎಫ್‌ಐಆರ್ ಮಾತ್ರವಲ್ಲದೆ, ಸುಶಾಂತ್ ಸಂಬಂಧ ದಾಖಲಾದ ಎಲ್ಲ ಕೇಸುಗಳಲ್ಲಿಯೂ ಸಿಬಿಐಗೆ ತನಿಖೆಗೆ ಅವಕಾಶವಿರುತ್ತದೆ. ಸಿಬಿಐ ಸಂಪೂರ್ಣವಾಗಿ ಪ್ರಕರಣ ತನಿಖೆ ಮಾಡಲಿದ್ದು, ಇದರಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಅವಕಾಶ ನಿರಾಕರಿಸಿ ಕೋರ್ಟ್ ಆದೇಶ ನೀಡಿದೆ.