Asianet Suvarna News Asianet Suvarna News

Jai Bhim In Oscar YouTube Channel: ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಜೈ ಭೀಮ್

  • Jai Bhim: ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ತಮಿಳು ಸಿನಿಮಾ
  • ಪ್ರಾದೇಶಿಕ ಸಿನಿಮಾದ ಸಾಧನೆ ಇದು
  • ಸೌತ್ ಇಂಡಿಯನ್ ಸಿನಿಮಾಗೆ ವ್ಯಾಪಕ ಶ್ಲಾಘನೆ
Suriyas Jai Bhim featured on Oscars YouTube channel dpl
Author
Bangalore, First Published Jan 18, 2022, 4:19 PM IST

ಜೈಭೀಮ್ ಸಿನಿಮಾ ಕಳೆದ ವರ್ಷದ ಅತಿಯಾಗಿ ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ಒಂದು. ಕಾಲಿವುಡ್(Kollywood) ಸ್ಟಾರ್ ಜೋಡಿ ಜ್ಯೋತಿಕಾ ಹಾಗೂ ಸೂರ್ಯ ಒಡೆತನದ ನಿರ್ಮಾಣ ಕಂಪನಿ ಬಂಡವಾಳ ಹೂಡಿ ನಿರ್ಮಿಸಿದ ಸಿನಿಮಾ ಜೈ ಭೀಮ್(Jai Bhim) ವ್ಯಾಪಕ ಮೆಚ್ಚುಗೆ ಪಡೆಯಿತು. ಸೌತ್ ಮಾತ್ರವಲ್ಲ ದೇಶಾದ್ಯಂತ ಭಾಷೆಯ ಗಡಿ ಮೀರಿ ಸಿನಿಮಾ ಸದ್ದು ಮಾಡಿತು. ಅಷ್ಟೇ ಅಲ್ಲದೆ ನೈಜ್ಯ ಘಟನೆಯಾಧಾರಿತ ಸಿನಿಮಾ ಒಂದಷ್ಟು ವಿವಾದಗಳನ್ನೂ ಸೃಷ್ಟಿಸಿತು. ಇದೀಗ ಈ ಸಿನಿಮಾಗೆ ಮತ್ತೊಂದು ಗೌರವ ಸಿಕ್ಕಿದೆ. ಆಸ್ಕರ್ ಯೂಟ್ಯೂಬ್ ಚಾಲೆನ್‌ನಲ್ಲಿ ಸೂರ್ಯ ಅಭಿನಯಿಸಿದ ಜೈಭೀಮ್ ಪ್ರಸಾರವಾಗಿದೆ.

ಹಿಂದಿನ ನವೆಂಬರ್ 2021 ರಲ್ಲಿ, ನಟ ಸೂರ್ಯ-ನಟಿಸಿದ 'ಜೈ ಭೀಮ್' TJ ಜ್ಞಾನವೇಲ್ ನಿರ್ದೇಶನದ ಗೋಲ್ಡನ್ ಗ್ಲೋಬ್ಸ್ 2022 ಗೆ 'ಅತ್ಯುತ್ತಮ ಏತರ ಭಾಷಾ ಚಲನಚಿತ್ರ' ವಿಭಾಗದಲ್ಲಿ ಅಧಿಕೃತವಾಗಿ ನಾಮನಿರ್ದೇಶನವಾಗಿ ಪ್ರವೇಶಿಸಿತ್ತು. ಇದೀಗ, ಆಸ್ಕರ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನಿರ್ದೇಶಕರ ಕಥೆಯ ನಿರೂಪಣೆಯೊಂದಿಗೆ ಚಿತ್ರದ ದೃಶ್ಯವನ್ನು ತೋರಿಸಲಾಗಿದೆ. ಪತಿ ಪೊಲೀಸ್ ಕಸ್ಟಡಿಯಲ್ಲಿ ನಾಪತ್ತೆಯಾದ ನಂತರ ಒಬ್ಬ ವಕೀಲ ಚಂದ್ರು ಸಹಾಯವನ್ನು ಪಡೆಯುವ ಗರ್ಭಿಣಿ ಹೆಂಡತಿಯ ಕುರಿತಾದ ಸಿನಿಮಾ ಇದು. ಈ ಸಿನಿಮಾ ಜಾತಿಯ ಆಧಾರದ ಮೇಲೆ ಆದ್ಯತೆ ಮತ್ತು ಪೋಲೀಸರ ವರ್ತನೆಯನ್ನು ಚಿತ್ರಿಸಿರುವುದರಿಂದ ಚಿತ್ರವು ಅನೇಕ ವಿವಾದಗಳಿಗೆ ಕಾರಣವಾಯಿತು. ಆದರೂ ಇಡೀ ಪ್ರೇಕ್ಷಕರು ಸಿನಿಮಾವನ್ನು ಬೆಂಬಲಿಸಿದರು.

ಹಿಂದಿಯಲ್ಲಿ ಮಾತನಾಡಿದವನಿಗೆ ಕಪಾಳಮೋಕ್ಷ ಮಾಡಿದ ನಟ ಪ್ರಕಾಶ್ ರೈ; ವಿಡಿಯೋ ವೈರಲ್!

ಸೂರ್ಯ, ಲಿಜೋಮೋಲ್ ಜೋಸ್ ಮತ್ತು ಮಣಿಕಂದನ್ ಅಭಿನಯದ ಜೈ ಭೀಮ್ ನವೆಂಬರ್ 2, 2021 ರಂದು ಜನಪ್ರಿಯ OTT ಪ್ಲಾಟ್‌ಫಾರ್ಮ್‌ನಲ್ಲಿ ನೇರವಾಗಿ ಪ್ರಥಮ ಪ್ರದರ್ಶನಗೊಂಡಿತು. ಚಲನಚಿತ್ರದ ಬಿಡುಗಡೆಯ ನಂತರ, ಚಲನಚಿತ್ರವು ಬಹು ವಿವಾದಗಳಿಗೆ ಸಿಲುಕಿತು. ತಮ್ಮ ಅವಿರತ ಪ್ರಯತ್ನಗಳ ಮೂಲಕ ತಮಿಳುನಾಡಿನ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ನ್ಯಾಯವನ್ನು ಒದಗಿಸಿದ ಕಾರ್ಯಕರ್ತ-ವಕೀಲ ಚಂದ್ರು ಅವರ ನೇತೃತ್ವದಲ್ಲಿ ನೈಜ ಕೇಸ್ ಸ್ಟಡಿಗಳಲ್ಲಿ ಜೈ ಭೀಮ್ ಶ್ರಮವನ್ನು ಮಾನವೀಯ ಗುಣವನ್ನು ತೋರಿಸಿತು. 

ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ರೈ ನಟಿಸಿದ್ದಾರೆ. ಅವರ ಒಂದು ದೃಶ್ಯ ವಿವಾದ ಸೃಷ್ಟಿಸಿತ್ತು. ಪ್ರಕಾಶ್ ರೈ ಎದುರಿಗಿದ್ದ ವ್ಯಕ್ತಿಯೊಬ್ಬ ಹಿಂದಿಯಲ್ಲಿ (Hindi) ಮಾತನಾಡುತ್ತಾನೆ. ಹಿಂದಿಯಲ್ಲಿ ಮಾತನಾಡಬೇಡ ತಮಿಳಿನಲ್ಲಿ (Tamil) ಮಾತನಾಡು ಎಂದು ಕಪಾಳಕ್ಕೆ (Slap) ಹೊಡೆಯುತ್ತಾರೆ. ಆನಂತಕ ಆ ವ್ಯಕ್ತಿ ತಮಿಳಿನಲ್ಲಿ ಮಾತನಾಡುತ್ತಾರೆ. ಜೈ ಭೀಮಾ ಸಿನಿಮಾ ತಮಿಳು, ತೆಲುಗು (Telugu), ಕನ್ನಡ (Kannada) ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಭಾಷೆಯಲ್ಲೂ ಈ ಡೈಲಾಗ್ ಹಾಕಿದ್ದಾರೆ ಆದರೆ ಹಿಂದಿಯಲ್ಲಿ ಮಾತ್ರ ಕಪಾಳಕ್ಕೆ ಹೊಡೆದು, 'ಈಗ ಸತ್ಯ ಹೇಳು' ಎನ್ನುವ ಸಾಲಗೆ ಬದಲಾಯಿಸಿದ್ದಾರೆ. ನಿರ್ದೇಶಕರ ಉದ್ದೇಶ ಏನಿತ್ತೋ ಗೊತ್ತಿಲ್ಲ, ಆದರೆ ಪ್ರಕಾಶ್ ಸಿನಿಮಾದಲ್ಲೂ ತಮ್ಮ ಪ್ರೊಪೊಗಂಡ (Propoganda) ಹೇಳಿಕೊಂಡಿದ್ದಾರೆ ಎಂದು ವಿರೋಧಿಗಳು ಗೇಲಿ ಮಾಡಿದ್ದರು. ಜೈ ಭೀಮ್ ಗೂಗಲ್‌ನಲ್ಲಿ ಅತಿಯಾಗಿ ಸರ್ಚ್ ಆದ ಸಿನಿಮಾಗಳಲ್ಲಿ ಒಂದು ಎನ್ನುವುದು ಇನ್ನೊಂದು ಹಿರಿಮೆ.

ನಟ ಸೂರ್ಯ ಅವರ ಇತ್ತೀಚಿನ ಒಟಿಟಿ(OTT) ರಿಲೀಸ್ ಜೈ ಭೀಮ್(Jai Bhim) ಹಲವಾರು ವಿವಾದಗಳನ್ನು ಸೃಷ್ಟಿಸಿದೆ. ಸಿನಿಮಾದಲ್ಲಿ ತಮ್ಮ ಖ್ಯಾತಿಗೆ ಧಕ್ಕೆ ತಂದ ಆರೋಪದ ಮೇಲೆ ವನ್ನಿಯಾರ್ ಸಮುದಾಯದಿಂದ ಲೀಗಲ್ ನೋಟಿಸ್(Legal Notice) ಜಾರಿಯಾದ ನಂತರ, ಚೆನ್ನೈನಲ್ಲಿರುವ ನಟನ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

Follow Us:
Download App:
  • android
  • ios