Asianet Suvarna News Asianet Suvarna News

Jai Bhim Controversy: ನಟ ಸೂರ್ಯನ ಮನೆಗೆ ಸಶಸ್ತ್ರ ಪೊಲೀಸ್ ಭದ್ರತೆ

Jai Bhim ಸಿನಿಮಾ ಕಾಂಟ್ರವರ್ಸಿ ವಿಚಾರವಾಗಿ ಸೂರ್ಯನಿಗೆ ಬೆದರಿಕೆ ಒಡ್ಡಿದ ಹಿನ್ನೆಲೆ ನಟನ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ವಾನ್ನಿಯಾರ್ ಸಂಘಟನೆಗಳಿಂದ ಬೆದರಿಕೆ ಬಂದಿದ್ದು, ಈಗಾಗಲೇ ಇದು ಸಾಕಷ್ಟು ವಿವಾದಕ್ಕೆ ದಾರಿ ಮಾಡಿದೆ

Suriyas house in Chennai gets police protection over Jai Bhim row dpl
Author
Bangalore, First Published Nov 18, 2021, 2:33 PM IST
  • Facebook
  • Twitter
  • Whatsapp

ನಟ ಸೂರ್ಯ ಅವರ ಇತ್ತೀಚಿನ ಒಟಿಟಿ(OTT) ರಿಲೀಸ್ ಜೈ ಭೀಮ್(Jai Bhim) ಹಲವಾರು ವಿವಾದಗಳನ್ನು ಸೃಷ್ಟಿಸಿದೆ. ಸಿನಿಮಾದಲ್ಲಿ ತಮ್ಮ ಖ್ಯಾತಿಗೆ ಧಕ್ಕೆ ತಂದ ಆರೋಪದ ಮೇಲೆ ವನ್ನಿಯಾರ್ ಸಮುದಾಯದಿಂದ ಲೀಗಲ್ ನೋಟಿಸ್(Legal Notice) ಜಾರಿಯಾದ ನಂತರ, ಚೆನ್ನೈನಲ್ಲಿರುವ ನಟನ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಟಿಜೆ ಜ್ಞಾನವೇಲ್ ನಿರ್ದೇಶಿಸಿದ ಜೈ ಭೀಮ್ ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ಜಾತಿ ಆಧಾರಿತ ತಾರತಮ್ಯದ ಹೋರಾಟದ ಕುರಿತು ನಡೆದ ಘಟನೆಯ ಆಧಾರಿತ ಕೋಟ್‌ ಡ್ರಾಮಾ ಆಗಿದೆ. ಈ ಸಿನಿಮಾದಲ್ಲಿ(Cinema) ಸೂರ್ಯ ನಿಜ ಜೀವನದ ವಕೀಲ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಒಂದೇ ಒಂದು ಪೈಸೆ ಶುಲ್ಕವಿಲ್ಲದೆ ತುಳಿತಕ್ಕೊಳಗಾದವರಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

Jai Bheem: ಸಿನಿಮಾಗೆ ಪ್ರೇರಣೆಯಾದ ಪಾರ್ವತಿ ಅಮ್ಮಾಳ್ ಹೆಸರಲ್ಲಿ 10 ಲಕ್ಷ ಠೇವಣಿ ಇಟ್ಟ ಸೂರ್ಯ

ಇತ್ತೀಚೆಗೆ ಒಂದು ಕ್ಯಾಲೆಂಡರ್ ಶಾಟ್ ಕೋಮು ಚಿಹ್ನೆಯನ್ನು ಒಳಗೊಂಡಿರುವ ಸಿನಿಮಾದ ನಿರ್ದಿಷ್ಟ ದೃಶ್ಯಕ್ಕೆ ಕೆಲವು ವೀಕ್ಷಕರು ನೊಂದುಕೊಂಡಿದ್ದರು. ಜನರ ಭಾವನೆಗಳಿಗೆ ಧಕ್ಕೆ ತರಬಾರದು, ತಯಾರಕರು ಕೋಮು ಚಿಹ್ನೆಯನ್ನು ಲಕ್ಷ್ಮಿ ದೇವಿಯ ಚಿತ್ರದೊಂದಿಗೆ ಬದಲಾಯಿಸಿದ್ದಾರೆ ಎಂದು ನಿರ್ಮಾಪಕರು ಹೇಳಿಕೆಯ ಮೂಲಕ ತಿಳಿಸಿದ್ದಾರೆ.

ಜೈ ಭೀಮ್ ಚಿತ್ರದ ಕೆಲವು ದೃಶ್ಯಗಳು ತಮ್ಮ ಖ್ಯಾತಿಗೆ ಮಸಿ ಬಳಿದಿದೆ ಎಂದು ನಟ ಸೂರ್ಯ ಅವರಿಗೆ ವನ್ನಿಯಾರ್ ಸಮುದಾಯವು ಲೀಗಲ್ ನೋಟಿಸ್ ನೀಡಿದೆ. ನೋಟಿಸ್ ನಂತರ, ನಟನಿಗೆ ಬೆದರಿಕೆಗಳು ಬಂದವು. ಸೂರ್ಯ ಅವರ ನಿವಾಸದ ಹೊರಗೆ ಶಸ್ತ್ರಾಸ್ತ್ರಗಳೊಂದಿಗೆ ಐದು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜೈ ಭೀಮ್ ಎಂಬುದು ತುಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಮುಗ್ಧ ಮತ್ತು ಕಠಿಣ ಪರಿಶ್ರಮದ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಬುಡಕಟ್ಟು ಜನ ತಮ್ಮದೇ ಆದ ಭೂಮಿ, ತಲೆಯ ಮೇಲೆ ಸೂರು ಇಲ್ಲದಿದ್ದರೂ ಸಹ, ಜೀವನದಲ್ಲಿ ಸರಳವಾದ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಸಿನಿಮಾದಲ್ಲಿ ಪ್ರಕಾಶ್ ರಾಜ್, ರಾವ್ ರಮೇಶ್, ರಜಿಶಾ ವಿಜಯನ್ ಮತ್ತು ಲಿಜೋ ಮೋಲ್ ಜೋಸ್ ಇತರರು ನಟಿಸಿದ್ದಾರೆ.

ಪುನೀತ್ ಸಮಾಧಿ ಬಳಿ ನಿಂತು ಪುನೀತ್ ಬಗ್ಗೆ ಮಾತನಾಡುತ್ತಾ ಭಾವುಕರಾಗ ತಮಿಳು ನಟ ಸೂರ್ಯ

ಸಿನಿಮಾದ ಭಾಗವಾಗಿರುವ ಬಗ್ಗೆ ಮತ್ತು ಅದನ್ನು ಸ್ವಂತವಾಗಿ ನಿರ್ಮಿಸುವ ಬಗ್ಗೆ ಮಾತನಾಡಿದ ಸೂರ್ಯ, ನ್ಯಾಯದ ಅನ್ವೇಷಣೆಯಲ್ಲಿ ಧೈರ್ಯ ಮತ್ತು ನಂಬಿಕೆಯ ಕಥೆಯನ್ನು ಪ್ರಸ್ತುತಪಡಿಸಲು ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ಬುಡಕಟ್ಟು ಸಮುದಾಯಗಳ ಭೂಮಿಗಾಗಿ ಹೋರಾಡುವ ವಕೀಲನ ಪಾತ್ರದಲ್ಲಿ ನಟನನ್ನು ಚಿತ್ರಿಸಲಾಗಿದೆ.

ಸೂರರೈ ಪೊಟ್ರು ನಂತರ ಜೈ ಭೀಮ್ ಸೂರ್ಯ ಅವರ ಎರಡನೇ ನೇರ-OTT ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಮ್‌ನಲ್ಲಿ ನೇರವಾಗಿ ಬಿಡುಗಡೆ ಮಾಡಲು ರಾಮೆ ಅಂದಳುಂ ರಾವಣೆ ಅಂದಳು ಮತ್ತು ಉಡನ್‌ಪಿರಪ್ಪೆ ಮುಂತಾದ ಚಿತ್ರಗಳ ನಂತರ ಇದು ಅವರ ಮೂರನೇ ನಿರ್ಮಾಣವಾಗಿದೆ.

ತಮಿಳುನಾಡಿನ ಪಟ್ಟಾಚಿ ಮಕ್ಕಳ್ ಕಚ್ಚಿ (PMK) ಪದಾಧಿಕಾರಿಯು ಕಾಲಿವುಡ್(Kollywood) ಸೂಪರ್‌ಸ್ಟಾರ್ ಸೂರ್ಯ(Suriya) ಮೇಲೆ ದಾಳಿ ಮಾಡಿದರೆ ನಗದು ಬಹುಮಾನವನ್ನು ಘೋಷಿಸಿದ್ದಕ್ಕಾಗಿ ಪಿಎಂಕೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅವರ ಸಿನಿಮಾ ಜೈ ಭೀಮ್‌ನಲ್ಲಿ(Jai Bhim) ವನ್ನಿಯಾರ್ ಸಮುದಾಯದ ಪಾತ್ರವನ್ನು ಚಿತ್ರಿಸಿರುವ ರೀತಿಯ ಬಗ್ಗೆ ವಿವಾದಕ್ಕೆ ಹೆಚ್ಚಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾ(Cinema) ಮಾಡಿದ ನಟನಿಗೆ ಅವರ ಅಭಿಮಾನಿಗಳು, ಟ್ವಿಟ್ಟರ್, ಸಹ ಸಿನಿಮಾ ಗಣ್ಯರು ಮತ್ತು ಬಹಳಷ್ಟು ಜನರಿಂದ ಬೆಂಬಲವನ್ನು ಪಡೆದಿದ್ದಾರೆ.

ನಟರಾದ ಸೂರ್ಯ(Suriya) ಮತ್ತು ಜ್ಯೋತಿಕಾ ಅವರ ಹೋಮ್ ಪ್ರೊಡಕ್ಷನ್ ಬ್ಯಾನರ್ 2D ಎಂಟರ್‌ಟೈನ್‌ಮೆಂಟ್ ನವೆಂಬರ್14ರಂದು ಪಾರ್ವತಿ ಅಮ್ಮಾಳ್ ಹೆಸರಿನಲ್ಲಿ 10 ಲಕ್ಷ ರೂಪಾಯಿಗಳ ಫಿಕ್ಸ್‌ಡ್ ಠೇವಣಿ ತೆರೆಯುತ್ತಾರೆ ಎಂದು ಘೋಷಿಸಿದ್ದಾರೆ. ಅವರ ಜೀವನ ಕಥೆಯು ಸೂರ್ಯ ಅವರ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ಜೈ ಭೀಮ್‌ನ ಕಥಾವಸ್ತುವನ್ನು ಪ್ರೇರೇಪಿಸಿತು. ಪಾರ್ವತಿ ಅಮ್ಮಾಳ್ ಪತಿ ರಾಜಾಕಣ್ಣು ಪೊಲೀಸ್ ಕಸ್ಟಡಿಯಲ್ಲಿ ಹತ್ಯೆಯಾದ ನಂತರ ನ್ಯಾಯಕ್ಕಾಗಿ ಹೋರಾಡಿದರು. ಇದುವೇ ಜೈ ಭೀಮ್‌ ಕಥೆಯ ಜೀವಾಳ.

ಎಫ್‌ಡಿಗಾಗಿ ಸ್ವಾಧೀನಪಡಿಸಿಕೊಂಡ ಬಡ್ಡಿಯನ್ನು ಪ್ರತಿ ತಿಂಗಳು ಪಾರ್ವತಿ ಅಮ್ಮಾಳ್‌ಗೆ ನೀಡಲಾಗುವುದು. ಆಕೆಯ ಮರಣದ ನಂತರ ಈ ಮೊತ್ತವನ್ನು ಆಕೆಯ ಮಕ್ಕಳಿಗೆ ನೀಡಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಸೂರ್ಯ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.

Follow Us:
Download App:
  • android
  • ios