Asianet Suvarna News Asianet Suvarna News

ಬೆಂಗಳೂರು ಏರ್‌ಪೋರ್ಟ್‌ ಹಾಡಿ ಹೊಗಳಿದ ಸನ್ನಿ ಲಿಯೋನ್‌: ಟರ್ಮಿನಲ್‌ - 2 ಅನ್ನು ಕಲಾಕೃತಿಗೆ ಹೋಲಿಸಿದ ಹಾಟ್‌ ನಟಿ!

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ನಟಿ ಸನ್ನಿ ಲಿಯೋನ್ ಬೆಂಗಳೂರು ಏರ್‌ಪೋರ್ಟ್‌ ನಾನು ನೋಡಿದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ ಎಂದು ಹಾಡಿ ಹೊಗಳಿದ್ದಾರೆ.

sunny leone praises bengaluru airport calls it a piece of art ash
Author
First Published Aug 12, 2023, 5:37 PM IST

ಬೆಂಗಳೂರು (ಆಗಸ್ಟ್‌ 12, 2023): ಸನ್ನಿ ಲಿಯೋನ್ ಆಗಾಗ್ಗೆ ದೇಶ ವಿದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಹೆಚ್ಚಾಗಿ ಫ್ಲೈಟ್‌ನಲ್ಲಿ ಓಡಾಡೋ ಇವರು ಸಾಕಷ್ಟು ವಿಮಾನ ನಿಲ್ದಾಣಗಳನ್ನು ತಿರುಗುತ್ತಿರುತ್ತಾರೆ. ಅಮೆರಿಕ, ಮುಂಬೈ, ದುಬೈ ಮಾತ್ರವಲ್ಲ ಸನ್ನಿ ಲಿಯೋನ್ ನಾನಾ ಏರ್‌ಪೋರ್ಟ್‌ಗಳನ್ನು ಸುತ್ತುತ್ತಿರುತ್ತಾರೆ. ಇದೇ ರೀತಿ, ನಟಿ ಸನ್ನಿ ಲಿಯೋನ್‌ ಇತ್ತೀಚೆಗೆ ಬೆಂಗಳೂರಿಗೂ ಬಂದಿದ್ದರು. ಈ ವೇಳೆ, ಬೆಂಗಳೂರು ಏರ್‌ಪೋರ್ಟ್ ಸುತ್ತಾಡಿದ ನಟಿ, ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬೆಂಗಳೂರು ಏರ್‌ಪೋರ್ಟ್‌ ಕುರಿತ ವಿಡಿಯೋಗಳನ್ನೂ ಹಂಚಿಕೊಂಡಿದ್ದರು. 

ಈ ವೇಳೆ, ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಬೆಂಗಳೂರು ಏರ್‌ಪೋರ್ಟ್‌ ಅನ್ನು ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರಾಜ್ಯ ರಾಜಧಾನಿಗೆ ಬಂದಿದ್ದ ಸನ್ನಿ ಲಿಯೋನ್‌, ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ತುಂಬಾ ಸುಂದರವಾಗಿದೆ ಎಂದಿದ್ದಾರೆ ‘’ಬೆಂಗಳೂರು ಏರ್‌ಪೋರ್ಟ್‌ ಎಷ್ಟು ಸುಂದರವಾಗಿದೆ ನೋಡಿ ಎಂದು ವಿಡಿಯೋದಲ್ಲಿ ತೋರಿಸಿದ್ದಾರೆ. ಅಲ್ಲದೆ, ಈ ಏರ್‌ಪೋರ್ಟ್‌ ನೋಡಿ ನಾನು ತುಂಬಾ ಇಂಪ್ರೆಸ್‌ ಆಗಿದ್ದೇನೆ. ಸೋ ನೈಸ್‌’’ ಎಂದು ಶ್ಲಾಘಿಸಿದ್ದಾರೆ.

ಇದನ್ನು ಓದಿ: ಕೋಟಿ ಕೋಟಿ ಬೆಲೆಬಾಳುವ ಮೂರು ಕಾರು ಕಳ್ಕೊಂಡ ನಟಿ ಸನ್ನಿ ಲಿಯೋನ್!

ಅಲ್ಲದೆ, ಬಿಳಿ ಬಣ್ಣದ ಶರ್ಟ್‌ ಧರಿಸಿ ಸಖತ್‌ ಹಾಟ್‌ ಆಗಿ ಕಾಣ್ತಿದ್ದ ನಟಿ ಸನ್ನಿ ಲಿಯೋನ್ ಬೆಂಗಳೂರು ಏರ್‌ಪೋರ್ಟನ್ನು ‘’ಕಲೆಯ ತುಣುಕು’’ ಅಥವಾ ಕಲಾಕೃತಿ ಎಂದೂ ಕರೆದಿದ್ದಾರೆ. ಇದನ್ನು ನೋಡಿ.. ಕಲೆಯ ತುಣುಕು.. ಇದು ಏರ್‌ಪೋರ್ಟ್‌ ಎಂದೂ ನಟಿ ಸನ್ನಿ ಲಿಯೋನ್‌ ಬೆಂಗಳೂರು ಏರ್‌ಪೋರ್ಟ್‌ನ ಅದ್ಭುತ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ತಾನು ವಿಮಾನ ನಿಲ್ದಾಣದಿಂದ ಪ್ರಭಾವಿತರಾಗಿದ್ದೇನೆ ಎಂದು ಈ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ, ನಾನು ಸರಿಯಲ್ಲವೇ ಎಂದು ತನ್ನ ಜತೆಗಿದ್ದ ಗೆಳತಿಯನ್ನೂ ಸನ್ನಿ ಲಿಯೋನ್ ಕೇಳಿದ್ದು, ಅವರು ಕೂಡ ಹೌದು ಎಂದು ಹೇಳಿದ್ದಾರೆ. 

ತಮ್ಮ ಇನ್ಸ್ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ಬೆಂಗಳೂರು ಏರ್‌ಪೋರ್ಟ್‌ನ ಒಂದು ನೋಟವನ್ನು ಸಹ ಸನ್ನಿ ಲಿಯೋನ್‌ ಹಂಚಿಕೊಂಡಿದ್ದು, ಏರ್‌ಪೋರ್ಟ್‌ನ ನೂತನ ಟರ್ಮಿನಲ್‌ನಲ್ಲಿ ಕೆಲ ಕಾಲ ಅಡ್ಡಾಡ್ಡಿರುವುದನ್ನು ನೋಡಬಹುದು. ಅಲ್ಲದೆ, ದೇವನಹಳ್ಳಿ ಬಳಿಯ ಏರ್‌ಪೋರ್ಟನ್ನು ಅಡ್ಡಾಡುತ್ತಾ  'ನಾನು ನೋಡಿದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣ’’ ಎಂದೂ ನಟಿ ಸನ್ನಿ ಲಿಯೋನ್ ಹೇಳಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ನಿಂದ ಅವರು ನಂತರ ಮುಂಬೈಗೆ ಮರಳಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಸನ್ನಿ ಲಿಯೋನ್​, ಸನ್ನಿ ಡಿಯೋಲ್​ರನ್ನು ಮದ್ವೆಯಾಗಿದ್ರೆ ಏನಾಗ್ತಿತ್ತು? ನಕ್ಕುನಗಿಸುವ ಪೋಸ್ಟ್ ವೈರಲ್​

ಪ್ರಧಾನಿ ಮೋದಿ ನವೆಂಬರ್ 2022 ರಲ್ಲಿ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದರು. ಬಳಿಕ ಜನವರಿ 15, 2023 ರಂದು ಅಂದರೆ, ಸಂಕ್ರಾಂತಿ ಹಬ್ಬದಂದು ವಿಮಾನ ಕಾರ್ಯಾಚರಣೆ ಆರಂಭವಾಗಿತ್ತು.  ಭಾನುವಾರ, ಅಂದರೆ ಜನವರಿ 15 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್‌ 2ನಲ್ಲಿ ಮೊದಲ ವಿಮಾನ ಹಾರಾಟ ನಡೆಸಿತ್ತು. ಬೆಳಗ್ಗೆ 8.40 ಕ್ಕೆ ಬೆಂಗಳೂರಿನಿಂದ ಕಲಬುರಗಿಗೆ ಸ್ಟಾರ್‌ ಏರ್‌ ವಿಮಾನ ಹಾರಾಟ ನಡೆಸಿತ್ತು. ಜತೆಗೆ,. ಏರ್‌ ಏಷ್ಯಾ, ಏರ್‌ ಇಂಡಿಯಾ ಹಾಗೂ ವಿಸ್ತಾರಾ ಸಹ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಟರ್ಮಿನಲ್ 2 ನಿಂದ ವಿಮಾನ ಕಾರ್ಯಾಚರಣೆ ನಡೆಸಿದೆ. ಟರ್ಮಿನಲ್ 2 ನಲ್ಲಿ ದೇಶೀಯ ವಿಮಾನಗಳು ಮಾತ್ರ ಹಾರಾಟ ನಡೆಸಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸನ್ನಿ ಲಿಯೋನ್‌-ಸುಶ್ಮಿತಾ ಸೇನ್‌: ಮಕ್ಕಳ ದತ್ತು ಪಡೆದ ಬಾಲಿವುಡ್‌ ಸೆಲೆಬ್ರೆಟಿಗಳು

Follow Us:
Download App:
  • android
  • ios