Happy birthday Sunny Leone : ಬೇಕರಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗಿ ನೀಲಿ ಚಿತ್ರಗಳ ಸಾಮ್ರಾಜ್ಞಿಯಾಗಿದ್ದು ಹೇಗೆ?
ಇವತ್ತು ಸನ್ನಿ ಲಿಯೋನ್ ಹ್ಯಾಪಿಬರ್ತ್ ಡೇ. ನಲವತ್ತೆರಡು ವರ್ಷ ವಯಸ್ಸಿನ ಈ ಚಿರಯೌವನೆ ಒಂದು ಕಾಲದಲ್ಲಿ ನೀಲಿ ಚಿತ್ರಗಳ ಲೋಕದ ಸಾಮ್ರಾಜ್ಞಿಯಾಗಿ ಮೆರೆದವರು. ಆದರೆ ಅದು ಹೇಗೆ ಸಾಧ್ಯವಾಯ್ತು? ಆಮೇಲೆ ಅದರಿಂದ ಹೊರಬಂದದ್ದು ಯಾಕೆ?
ಸನ್ನಿ ಲಿಯೋನ್ ಅಂದರೆ ಇವತ್ತಿಗೂ ಪಡ್ಡೆಗಳ ಎದೆಬಡಿತ ಹೆಚ್ಚಾಗುತ್ತೆ. ಅಂದಿನ ನೀಲಿ ಚಿತ್ರಗಳಿರಬಹುದು, ಇಂದಿನ ಬಾಲಿವುಡ್ ಸಿನಿಮಾಗಳಿರಬಹುದು ಈಕೆ ಸೃಷ್ಟಿಸಿದ ಹವಾ ಅಂಥಾದ್ದು. ಕೆಲವು ವರ್ಷಗಳ ಕೆಳಗೆ ವಿಶ್ವದ ಅತ್ಯಂತ 100 ಪ್ರಭಾವಶಾಹಿ ಮಹಿಳೆಯರ ಲಿಸ್ಟ್ ನಲ್ಲಿ ಈಕೆಯ ಹೆಸರೂ ಇತ್ತು. ಎರಡು ವರ್ಷಗಳ ಕೆಳಗೆ ಇಂಟರ್‌ನೆಟ್‌ನಲ್ಲಿ ಅತೀ ಹೆಚ್ಚು ಬಾರಿ ಜನ ಈಕೆಯ ಬಗ್ಗೆ ಸರ್ಚ್ ಮಾಡಿದ್ದರು.ಈಕೆಯದೇ ಮೊಬೈಲ್ ಆಪ್‌ಗಳೂ ಬಿಡುಗಡೆಯಾಗಿತ್ತು. ಇಂಥ ಜನಪ್ರಿಯತೆ ಪಡೆದ ಅಪರೂಪದ ವ್ಯಕ್ತಿ ಸನ್ನಿ. ಇಂತಿಪ್ಪ ಸನ್ನಿ ಲಿಯೋನ್ ಕೆಲಸ ಶುರು ಮಾಡಿದ್ದು ಬೇಕರಿಯಲ್ಲಿ. ಈಗ ನಿಜ ಹೆಸರು ಕರನ್‌ಜಿತ್ ಕೌರ್ ವೋಹ್ರಾ. ಮೆ 13, 1981ರಲ್ಲಿ ಕೆನಡದಲ್ಲಿ ಈಕೆ ಹುಟ್ಟಿದ್ದು. ಇವಳಿಗೆ 15 ವರ್ಷ ವಯಸ್ಸಾದಾಗ ಬೇಕರಿಯಲ್ಲಿ ಕೆಲಸ ಶುರು ಮಾಡಿದ್ದು. ತನಗೆ ಬೇಕಾದ ಹಣ ತಾನೇ ದುಡಿಯುತ್ತೇನೆ ಅನ್ನೋ ಛಲದಲ್ಲಿ ಈ ಕೆಲಸದೊಂದಿಗೆ ವೃತ್ತಿ ಜೀವನ ಆರಂಭಿಸಿದರು. ಜೊತೆಗೆ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಕುಟುಂಬದ ಜವಾಬ್ದಾರಿಯೂ ಈ ಎಳೆಯ ಹೆಗಲಿನ ಮೇಲೇ ಬಿದ್ದಿತ್ತು. ಈ ಕೆಲಸದ ಬಳಿಕ ಎಳೆಯ ಮಕ್ಕಳನ್ನು ನೋಡಿಕೊಳ್ಳುವ ಪೀಡಿಯಾಟ್ರಿಕ್ ನರ್ಸ್ ಆದರು.
ಇದೇ ಹೊತ್ತಲ್ಲಿ ಸನ್ನಿ ಫ್ರೆಂಡ್ ಒಬ್ಬಳು ಸನ್ನಿಗೆ ಒಂದು ಕೆಲಸದ ಆಫರ್ ನೀಡಿದಳು. ಅದು ಪೈಂಟ್ ಹೌಸ್ ಅನ್ನೋ ಮ್ಯಾಗಜಿನ್‌ನಲ್ಲಿ ಕೆಲಸ ಮಾಡುವಂತೆ ಬಂದ ಆಫರ್. ಆ ಕೆಲಸಕ್ಕೆ ಅವರು ನೀಡುತ್ತೇವೆ ಅಂದ ಮೊತ್ತ ಬಹಳ ಆಕರ್ಷಕವಾಗಿತ್ತು. ಬಡತನ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ಈ ಹುಡುಗಿಗೆ ಆ ಹಣ ಬಹಳ ಅಪರೂಪದ್ದಾಗಿ ಕಂಡಿತು. ವಾರಕ್ಕೆ 15,000 ಡಾಲರ್ ನೀಡುವ ಅಪರೂಪದ ಆಫರ್ ಅದು. ಸಂಬಳ ಏನೋ ಸಖತ್ತಾಗಿತ್ತು, ಆದರೆ ಅಲ್ಲಿ ತಾನೇನು ಕೆಲಸ ಮಾಡಬೇಕು ಅನ್ನೋದು ಮಾತ್ರ ಈಕೆಗೆ ತಿಳಿದಿರಲಿಲ್ಲ. ಆ ಕಂಪನಿ ಹೆಸರನ್ನೂ ಅವಳು ಹಿಂದೆ ಕೇಳಿರಲಿಲ್ಲ.
ಸಮಂತಾರನ್ನು ತಬ್ಬಿಕೊಂಡ ವಿಜಯ್ ದೇವರಕೊಂಡ: ರೊಮ್ಯಾಂಟಿಕ್ ವಿಡಿಯೋ ವೈರಲ್
ಆದರೆ ಅವಳು ಆ ಕಂಪನಿ ನಡೆಸೋ ಶೂಟ್‌ನಲ್ಲಿ ಪಾಲ್ಗೊಳ್ಳಬೇಕಾಗಿ ಬಂದಾಗ ಮಾತ್ರ ಹದಿನೆಂಟರ ಹರೆಯದ ಆ ಮುಗ್ಧ ಹುಡುಗಿಗೆ ಭಯ, ಶಾಕ್, ಆತಂಕ ಒಟ್ಟೊಟ್ಟಿಗೇ ಆಯ್ತು. ಅವಳು ಬೆತ್ತಲಾಗಿ ಫೋಟೋಗೆ ಫೋಸ್ ಕೊಡಬೇಕಿತ್ತು. ಈ ಕೆಲಸವೇ ಅವಳನ್ನು ಪೋರ್ನ್ ಇಂಡಸ್ಟ್ರಿ ಕಡೆ ಬರುವ ಹಾಗೆ ಮಾಡಿತು. ಈ ಫೋಟೋ ಪಬ್ಲಿಶ್ ಮಾಡುವಾಗ ಕರನ್‌ಜಿನ್ ಕೌರ್ ಅಂತಿದ್ದ ಅವಳ ಹೆಸರನ್ನು ಸನ್ನಿ ಲಿಯೋನ್ ಅಂತ ಬದಲಿಸಲಾಯ್ತು. ಫೋಟೋಶೂಟ್(Photo shoot) ಏನೋ ಆಯ್ತು, ಆದರೆ ಮನೆಯವರಿಂದ, ರಿಲೇಟಿವ್ಸ್‌ಗಳಿಂದ(Relatives) ಈ ವಿಚಾರ ಮುಚ್ಚಿಡಲು ಹರಸಾಹಸ ಪಡಬೇಕಾಯ್ತು. ಸಹೋದರನಲ್ಲಿ ಮಾತ್ರ ಈ ಗುಟ್ಟು ಉಳಿಸಿಕೊಳ್ಳಲಾಗಲಿಲ್ಲ. ಆತನ ಬಳಿ ಎಲ್ಲವನ್ನೂ ತೆರೆದಿಟ್ಟಳು. ಆತ ಈಕೆಯ ಬೆಂಬಲಕ್ಕೆ ನಿಂತ,
ಒಂದು ದಿನ ರಿಲೇಟಿವ್ಸ್ ಕಡೆಯಿಂದ ಮನೆ ಮಂದಿಗೆ ಈ ವಿಚಾರ ತಿಳಿಯಿತು. ಆಗ ಎಲ್ಲ ವಿಷಯವನ್ನೂ ಮನೆಯವರ ಬಳಿ ಹೇಳಲೇಬೇಕಾಯ್ತು. ತಾಯಿಗೆ ಇದು ದೊಡ್ಡ ಆಘಾತ(Shock). ಆಕೆ ಶಾಕ್‌ಗೆ ಒಳಗಾದರು. ಇದನ್ನು ಅರಗಿಸಿಕೊಳ್ಳಲಾಗದೇ ಡಿಪ್ರೆಶನ್‌ಗೂ ಹೋದರು. ಆರಂಭದಲ್ಲಿ ಆಘಾತಗೊಂಡರೂ ಆಮೇಲೆ ಚೇತರಿಸಿಕೊಂಡ ತಂದೆ ಮಗಳಿಗೆ ಹೇಳಿದ್ದು ಒಂದೇ ಮಾತು, 'ನೀನು ಯಾವುದೇ ವೃತ್ತಿಯನ್ನು ಆಯ್ಕೆ ಮಾಡು, ಆದರೆ ಅದರಲ್ಲಿ ನಿನ್ನೆಲ್ಲ ಶ್ರಮ ಹಾಕು, ಶ್ರದ್ಧೆಯಿಂದ ಕೆಲಸ ಮಾಡು, ಸಕ್ಸಸ್‌ಫುಲ್(Sucsessful) ಆಗಿ ಬದುಕು'. ತಂದೆ ಹೇಳಿದ ಮಾತನ್ನು ಬಹಳ ಬೇಗ ನಿಜ ಮಾಡಿದರು ಸನ್ನಿ ಲಿಯೋನ್.
ದಿ ಕೇರಳ ಸ್ಟೋರಿ ನಟಿ ಅದಾ ಶರ್ಮ: ನಿಮಗೆ ಗೊತ್ತಿಲ್ಲದ ಫ್ಯಾಕ್ಟ್ಸ್
ಒಂದಿಷ್ಟು ಕಾಲ ನೀಲಿ ಚಿತ್ರಗಳಲ್ಲಿ ನಟಿಸಿ ವಿಶ್ವಾದ್ಯಂತ ಬಹಳ ಜನಪ್ರಿಯತೆ ಪಡೆದರು. ಆಮೇಲೆ ಡೇನಿಯಲ್ ಬಿಬರ್ ಅವರನ್ನು ಮದುವೆ ಆದರು. ಇದಾಗಿ ಬಿಗ್‌ಬಾಸ್ ನಲ್ಲಿ ಕಾಣಿಸಿಕೊಂಡರು. ಒಂದಿಷ್ಟು ಬಾಲಿವುಡ್ ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ನಟಿಸಿದರು. ಬಡಮಕ್ಕಳ ಓದಿಗಾಗಿ ಶಾಲೆಯನ್ನೂ ತೆರೆದಿದ್ದು ಈ ನಟಿಯ ಹೆಚ್ಚುಗಾರಿಕೆ.