Asianet Suvarna News Asianet Suvarna News

ಮನೆ ಖರೀದಿಸಲು ನನ್ನಿಂದ ಹಣ ತೆಗೆದುಕೊಂಡಿದ್ದಾಳೆ;ನೋರಾ ಫತೇಹಿ ಹೇಳಿಕೆಗೆ ಸುಕೇಶ್ ಚಂದ್ರಶೇಖರ್ ತಿರುಗೇಟು

ಮನೆ ಖರೀದಿಸಲು ನನ್ನಿಂದ ನೋರಾ ಹಣ ತೆಗೆದುಕೊಂಡಿದ್ದಾಳೆ ಎಂದು ಸುಕೇಶ್ ಚಂದ್ರಶೇಖರ್ ಬಹಿರಂಗ ಪಡಿಸಿದ್ದಾರೆ. 

Sukesh Chandrashekhar hits back Nora Fatehi's claims, she took money from me to buy house in Morocco for family sgk
Author
First Published Jan 24, 2023, 12:25 PM IST

ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಇಬ್ಬರೂ ಆರೋಪಿಗಳಾಗಿದ್ದಾರೆ. ಇಬ್ಬರೂ ನಟನೆಯ ವಿಚಾರಣೆ ನಡೆಯುತ್ತಿದ್ದು ಸುಕೇಶ್ ಬಗ್ಗೆ ಸಾಕಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ. ಬಾಲಿವುಡ್ ನಟಿ, ಡಾನ್ಸರ್ ನೋರಾ ಫತೇಹಿ, ಆರೋಪಿ ಸುಕೇಶ್ ಚಂದ್ರಶೇಖರ್ ಗರ್ಲ್‌ಪ್ರೆಂಡ್ ಆಗಿರುವಂತೆ ಷರತ್ತು ಹಾಕಿ ಮನೆ ಮತ್ತು ಐಷಾರಾಮಿ ಜೀವನಶೈಲಿಯ ಭರವಸೆ ನೀಡಿದ್ದ ಎಂದು ವಿಚಾರಣೆ ವೇಳೆ ಬಹಿರಂಗ ಪಡಿಸಿದ್ದರು. ನೋರಾ ಹೇಳಿಕೆಗೆ ಸುಕೇಶ್ ಚಂದ್ರಶೇಕರ್ ತಿರುಗೇಟು ನೀಡಿದ್ದಾರೆ. 

ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಸಕೇಶ್, ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದೆ ಎಂದು ನೋರಾ ನನ್ನ ಬಗ್ಗೆ ಮಾತನಾಡಿದ್ದಾಳೆ. ಆದರೆ ನೋರಾ ಮೊರಕ್ಕೋದಲ್ಲಿ ಆಕೆಯ ಕುಟುಂಬದವರಿಗೆ ಮನೆ ಖರೀದಿಸಲು ನನ್ನಿಂದ ದೊಡ್ಡ ಮೊತ್ತದ ಹಣ ಖರೀದಿಸಿದ್ದಾಳೆ. 9 ತಿಂಗಳ ಹಿಂದೆ ಆಕೆ ಇಡಿಗೆ ನೀಡಿದ ಹೇಳಿಕೆ ನಂತರ ಕಾನೂನಿನಿಂದ ತಪ್ಪಿಸಿಕೊಳ್ಳಲು ಕಥೆಗಳನ್ನು ಕಟ್ಟು ತಿದ್ದಾಳೆ' ಎಂದು ಹೇಳಿದ್ದಾರೆ. 

ಜಾಕ್ವೆಲಿನ್​, ನೋರಾ ಫತೇಹಿ, ಸುಕೇಶ್​ ತ್ರಿಕೋನ ಲವ್​ ಸ್ಟೋರಿಗೆ ಬಿಗ್‌ ಟ್ವಿಸ್ಟ್​!

ನೋರಾ ಫತೇಹಿ ಹೇಳಿಕೆ

ಈ ಪ್ರಕರಣದಲ್ಲಿ ನೋರಾ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ, ಸುಕೇಶ್ ತನ್ನ ಗರ್ಲ್‌ಫ್ರೆಂಡ್ ಆಗಿ ಒಪ್ಪಿಕೊಂಡರೆ 'ದೊಡ್ಡ ಮನೆ ಮತ್ತು ಐಷಾರಾಮಿ ಜೀವನಶೈಲಿ' ಕೊಡಿಸುವ ಭರವಸೆ ನೀಡಿದ್ದರು ಎಂದು ಹೇಳಿದ್ದರು. ತನ್ನ ಆಪ್ತ ಸಹಾಯಕಿ ಪಿಂಕಿ ಇರಾನಿ ಮೂಲಕ ಎಲ್ಲವನ್ನೂ ಮಾಡಿಸುತ್ತಿದ್ದ' ಎಂದು ನೋರಾ ಹೇಳಿದ್ದರು. 

ಸುಕೇಶ್ ಚಂದ್ರಶೇಖರ್‌ ಬಲೆಗೆ ನೋರಾ ಮತ್ತು ಜಾಕ್ವೆಲಿನ್ ಬಿದ್ದಿದ್ದು ಹೇಗೆ?

ಸುಕೇಶ್ ಚಂದ್ರಶೇಖರ್ ಹೇಳಿಕೆ 

ನೋರಾ ತನಗೆ ಕಾರು ಬೇಕಾಗಿಲ್ಲ ಮತ್ತು ಅದನ್ನು ತನಗಾಗಿ ತೆಗೆದುಕೊಳ್ಳಲಿಲ್ಲ ಎಂಬುದು ದೊಡ್ಡ ಸುಳ್ಳು. ಏಕೆಂದರೆ ಅವಳು ನನ್ನ ಜೀವನಕ್ಕೆ ಬಂದ ನಂತರ ತನ್ನ ಕಾರನ್ನು ಬದಲಾಯಿಸಬೇಕಾಗಿತ್ತು, ಏಕೆಂದರೆ ತುಂಬಾ ಚೀಪ್ ಆಗಿ ಕಾಣುತ್ತಿದ್ದ ಕಾರು ಬಳಸುತ್ತಿದ್ದಳು. ಅವಳು ಆಯ್ಕೆ ಮಾಡಿದ ಕಾರನ್ನು ನಾನು  ಅವಳಿಗೆ ನೀಡಿದ್ದೇನೆ. ಚಾಟ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳು ED ಬಳಿ ಇದೆ. ಇದರಲ್ಲಿ ಯಾವುದೇ ಸುಳ್ಳಿಲ್ಲ, ನಾನು ಅವಳಿಗೆ ರೇಂಜ್ ರೋವರ್ ನೀಡಲು ಬಯಸಿದ್ದೆ, ಆದರೆ ಕಾರು ಸ್ಟಾಕ್‌ನಲ್ಲಿ ಲಭ್ಯವಿರಲಿಲ್ಲ. ಅವಳಿಗೆ  ತುರ್ತಾಗಿ ಕಾರು ಬೇಕಿತ್ತು. ನಾನು ಅವಳಿಗೆ BMW S ಸರಣಿಯನ್ನು ನೀಡಿದ್ದೇನೆ. ಅವಳು ಭಾರತೀಯಳಲ್ಲದ ಕಾರಣ ಅವಳು ಅದನ್ನು ತನ್ನ ಆತ್ಮೀಯ ಗೆಳತಿಯ ಪತಿಯ ಹೆಸರಿನಲ್ಲಿ ನೋಂದಾಯಿಸಲು ಕೇಳಿದಳು. ನಾನು ಮತ್ತು ನೋರಾ ಎಂದಿಗೂ ವೃತ್ತಿಪರ ವಹಿವಾಟು ನಡೆಸಿಲ್ಲ' ಎಂದು ಸುಕೇಶ್ ಹೇಳಿದ್ದಾರೆ. 

Follow Us:
Download App:
  • android
  • ios